ಮಳೆ ನಷ್ಟ ಹೊಂದಿದ ರೈತರ ಜಮೀನಿಗೆ ಡೀಸಿ ಭೇಟಿ ತ್ವರಿತ ಪರಿಹಾರಕ್ಕೆ ಸೂಚನೆ
ತುಮಕೂರು(ಕ.ವಾ.) ಮೇ.24: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಜಿಲ್ಲೆಯ ಕೊರಟಗೆರೆ, ಮಧುಗಿರಿ ಹಾಗೂ ಶಿರಾ ತಾಲೂಕಿನಲ್ಲಿ ಶುಕ್ರವಾರ ಬೆಳಿಗ್ಗೆ ಪ್ರವಾಸ ಕೈಗೊಂಡು ರೈತ ಸಂಪರ್ಕ ಕೇಂದ್ರ, ಎಪಿಎಂಸಿ, ಮೇವು ಬ್ಯಾಂಕ್, ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯ ಮಧುಗಿರಿ ತಾಲ್ಲೂಕು ಪುರವರ ಗ್ರಾಮ ಪಂಚಾಯತಿ ವ್ಯಾಪ್ತಿ ದೊಡ್ಡಹೊಸಹಳ್ಳಿಯ ನರಸಿಂಹಮೂರ್ತಿ ಅವರ ಬಾಳೆ ತೋಟಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮಳೆ-ಗಾಳಿಯಿಂದ 1.5 ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಮುರಿದು ಬಿದ್ದು ನಷ್ಟ ಉಂಟಾಗಿದ್ದು, ಪರಿಹಾರ ಒದಗಿಸಬೇಕೆಂದು ರೈತ ಮನವಿ ಮಾಡಿದಾಗ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸ್ಥಳದಲ್ಲಿದ್ದ ಮಧುಗಿರಿ ತಾಲೂಕು ತೋಟಗಾರಿಕಾ ಸಹಾಯಕ ನಿರ್ದೇಶಕ ಸ್ವಾಮಿ ಅವರಿಗೆ ಕೂಡಲೇ ನಷ್ಟವುಂಟಾಗಿರುವ ಬೆಳೆಯ ವಿವರವನ್ನು ಸಲ್ಲಿಸಿ ತ್ವರಿತವಾಗಿ ಪರಿಹಾರ ನೀಡಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ಮಳೆ ನಷ್ಟ ಹೊಂದಿದ ರೈತರ ಜಮೀನಿಗೆ ಡೀಸಿ ಭೇಟಿ
Leave a comment
Leave a comment