ವಿಮರ್ಶಾತ್ಮಕ ದೃಷ್ಟಿ, ಎಚ್ಚರಿಕೆಯೇ ಮಾಧ್ಯಮ ಸಾಕ್ಷರತೆ: ಡಾ. ಅನುಭೂತಿ ಯಾದವ್ತುಮಕೂರು: ಪ್ರಸ್ತುತ ಯುಗದಲ್ಲಿ ಮಾಧ್ಯಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ವಿಮರ್ಶಾತ್ಮಕ ದೃಷ್ಟಿಯಿಂದ, ಎಚ್ಚರಿಕೆಯಿಂದ ಮಾಧ್ಯಮಗಳನ್ನು ಬಳಸಬೇಕು ಎಂದು ನವದೆಹಲಿಯ ಭಾರತೀಯ ಸಮೂಹ ಸಂವಹನ ಸಂಸ್ಥೆಯ ನವಮಾಧ್ಯಮ ವಿಭಾಗದ ಪ್ರಾಧ್ಯಾಪಕಿ ಡಾ. ಅನುಭೂತಿ ಯಾದವ್ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಡಿಜಿಟಲ್ ಯುಗದಲ್ಲಿ ಮಾಧ್ಯಮ ಸಾಕ್ಷರತೆ’ ಕುರಿತ ರಾಷ್ಟಿçÃಯ ಸಮ್ಮೇಳನವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು.ನಮ್ಮ ಮೇಲೆ ಪ್ರಭಾವ ಬೀರುವುದು ಕೇವಲ ಮಾಧ್ಯಮವಲ್ಲ, ವಿವಿಧ ವೇದಿಕೆಗಳು ಕೂಡ ಹೌದು. ಮಾಧ್ಯಮ ಗ್ರಾಹಕರನ್ನು ಮಾಧ್ಯಮಗಳಲ್ಲಿ ಬರುವ ವಿಷಯಗಳಿಂದ ಕಾಪಾಡುವ ಬದಲು, ಗ್ರಾಹಕರೇ ಸತಃ ಅವುಗಳನ್ನು ಸ್ವೀಕರಿಸಲು ಹಾಗೂ ಹೂರಣವನ್ನು ಸಿದ್ಧಪಡಿಸಲು ತಯಾರು ಮಾಡಬೇಕು ಎನ್ನುತ್ತದೆ ಆಧುನಿಕ ಮಾಧ್ಯಮ ಎಂದರು.ಮಾಹಿತಿಯ ಮಿತಿಮೀರಿದ ಯುಗದಲ್ಲಿ, ಮಾಧ್ಯಮ ಸಾಕ್ಷರತೆಯು ಅನಿವಾರ್ಯ ಕೌಶಲ್ಯವಾಗಿದೆ. ನಾವು ಡಿಜಿಟಲ್ ಯುಗಕ್ಕೆ ಆಳವಾಗಿ ಧುಮುಕುತ್ತಿದ್ದಂತೆ, ಒಂದು ಬಟನ್ನ ಕ್ಲಿಕ್ನಲ್ಲಿ ಸುದ್ದಿ, ಅಭಿಪ್ರಾಯಗಳು ಮತ್ತು ಮನರಂಜನೆಯನ್ನು ಸುಲಭವಾಗಿ ಪ್ರವೇಶಿಸಬಹುದು. ಮಾಧ್ಯಮ ಸಾಕ್ಷರತೆಯು ಸತ್ಯ ಮತ್ತು ಸುಳ್ಳು, ಸತ್ಯ ಮತ್ತು ಕಾಲ್ಪನಿಕಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ಪರಿಣಾಮಕಾರಿಯಾಗಿ ಗ್ರಹಿಸಲು ಮೂಲಾಧಾರವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ಮಾಡಲು ವ್ಯಕ್ತಿಗಳಿಗೆ ಅಧಿಕಾರ ನೀಡುತ್ತದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಮಾಧ್ಯಮ ಸಾಕ್ಷರತೆಯು ನಮ್ಮ ಡಿಜಿಟಲ್ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಲು ಅತ್ಯಗತ್ಯ ಸಾಧನವಾಗಿದೆ. ಈ ಪ್ರಮುಖ ಕೌಶಲ್ಯವು ವಿಶ್ವಾಸಾರ್ಹ ಮೂಲಗಳು ಮತ್ತು ಸುಳ್ಳುಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ವ್ಯಕ್ತಿಗಳಿಗೆ ಅಧಿಕಾರ ನೀಡುತ್ತದೆ. ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುತ್ತದೆ ಮತ್ತು ನೈತಿಕ ನಿರ್ಧಾರಗಳನ್ನು ಉತ್ತೇಜಿಸುತ್ತದೆ ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಮಾಧ್ಯಮ ಹಬ್ಬ ಹಾಗೂ ರಾಷ್ಟಿçÃಯ ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ. ಸಿಬಂತಿ ಪದ್ಮನಾಭ ಕೆ.ವಿ., ಕೃತಕ ಬುದ್ಧಿಮತ್ತೆ ಕಾಲಿಡುತ್ತಿರುವ ಯುಗದಲ್ಲಿ ಮಾಧ್ಯಮ ಸಾಕ್ಷರತೆಯ ತಿಳುವಳಿಕೆ ಅಗತ್ಯ ಮತ್ತು ಅನಿವಾರ್ಯ. ನಮ್ಮ ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಾಧ್ಯಮದಲ್ಲಿನ ಸ್ಪರ್ಧಾತ್ಮಕ ಯುಗದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಈ ಸಮ್ಮೇಳನ ಸಹಕಾರಿಯಾಗಲಿದೆ ಎಂದು ಹೇಳಿದರು.ಮಾಧ್ಯಮ ಹಬ್ಬದ ಅಂಗವಾಗಿ ಶುಕ್ರವಾರ ನಡೆದ ಸುದ್ದಿ ಪ್ರಸ್ತುತಿ, ರೇಡಿಯೋ ಜಾಕಿ, ಛಾಯಾಗ್ರಾಹಣ, ನುಡಿಚಿತ್ರ ಬರೆವಣಿಗೆ, ರಸಪ್ರಶ್ನೆ ಸ್ಪರ್ಧೆ (ಅಂತಿಮ ಸುತ್ತು), ಕಿರುಚಿತ್ರ ಸ್ಪರ್ಧೆಗಳಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಾಧ್ಯಮ ಸಾಕ್ಷರತೆಯ ವಿವಿಧ ಆಯಾಮಗಳ ಬಗ್ಗೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಧ್ಯಾಪಕರು ಹಾಗೂ ಸಂಶೋಧನಾರ್ಥಿಗಳು ತಮ್ಮ ಸಂಶೋಧನ ಪ್ರಬಂಧಗಳನ್ನು ಮಂಡಿಸಿದರು.ಸಮ್ಮೇಳನದ ವಿವಿಧ ಗೋಷ್ಠಿಗಳ ಅಧ್ಯಕ್ಷತೆಯನ್ನು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಓಂಕಾರಗೌಡ ಕಾಕಡೆ, ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಪ್ರೊ. ಸತೀಶ್ ಕುಮಾರ್, ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕಿ ಪ್ರೊ. ಸಪ್ನಾ ಎಂ. ಎಸ್., ದುಬೈನ ಉನ್ನತ ತಂತ್ರಜ್ಞಾನ ಕಾಲೇಜಿನ ಅಪ್ಲೆöÊಡ್ ಮಾಧ್ಯಮ ವಿಭಾಗದ ಉಪನ್ಯಾಸಕ ಡಾ. ಶ್ರೀಶ ಎಂ. ವಹಿಸಿದ್ದರು.