ವಿಮರ್ಶಾತ್ಮಕ ಚಿಂತನೆ ಸಂಶೋಧನೆಯ ಗುರಿ: ಡಾ. ಎನ್. ಆರ್. ಭಾನುಮೂರ್ತಿ
ತುಮಕೂರು: ಸಂಶೋಧನೆ ಮತ್ತು ಸಂಶೋಧನ ವಿಧಾನದ ವ್ಯತ್ಯಾಸದ ಬಗ್ಗೆ ಸ್ಪಷ್ಟ ಅರಿವಿರಬೇಕು. ವಿಜ್ಞಾನದಲ್ಲಿ ತತ್ವಶಾಸ್ತçವನ್ನು ತಿಳಿಯಪಡಿಸುವ, ವಿಮರ್ಶಾತ್ಮಕ ಚಿಂತನೆಯನ್ನು ಸಂಶೋಧನೆಯಲ್ಲಿ ಹೊರತರುವುದೇ ಈ ಕಾರ್ಯಕ್ರಮದ ಗುರಿ ಎಂದು ಬೆಂಗಳೂರಿನ ಡಾ. ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎನ್. ಆರ್. ಭಾನುಮೂರ್ತಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತç ಅಧ್ಯಯನ ಮತ್ತು ಸಂಶೋಧನ ವಿಭಾಗವು ಭಾರತೀಯ ಸಮಾಜ ವಿಜ್ಞಾನಗಳ ಸಂಶೋಧನ ಪರಿಷತ್ತು (ಐ.ಸಿ.ಎಸ್.ಎಸ್.ಆರ್.) ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸಂಶೋಧನ ವಿಧಾನ ಹಾಗೂ ಶೈಕ್ಷಣಿಕ ಬರೆವಣಿಗೆಯ ಕುರಿತ ೧೨ ದಿನಗಳ ಸಾಮರ್ಥ್ಯವರ್ಧನ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಸಂಶೋಧನೆಯನ್ನು ಬಲಪಡಿಸಲು ವಿಶ್ವವಿದ್ಯಾನಿಲಯವು ವಿಶೇಷ ಆದ್ಯತೆ ನೀಡಿ ಹೊಸ ಸಂಶೋಧನ ನೀತಿಯನ್ನು ಜಾರಿಗೆ ತಂದಿದೆ. ಉಪಯುಕ್ತ ವಿಚಾರ ಸಂಕಿರಣಗಳಲ್ಲಿ ಹಾಗೂ ಸಮ್ಮೇಳನಗಳಲ್ಲಿ ಭಾಗವಹಿಸಲು, ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಸಂಶೋಧನ ಪ್ರಬಂಧಗಳನ್ನು ಪ್ರಕಟಿಸಲು, ಗ್ರಂಥಗಳನ್ನು ಪ್ರಕಾಶಿಸಲು, ಪೇಟೆಂಟ್ ಪಡೆಯಲು, ಸಂಶೋಧನ ಯೋಜನೆಗಳನ್ನು ಕೈಗೊಳ್ಳಲು ಇದು ವಿವಿ ಬೋಧಕರಿಗೆ ವಿಶೇಷ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ವಿಮರ್ಶಾತ್ಮಕ ಚಿಂತನೆ ಸಂಶೋಧನೆಯ ಗುರಿ

Leave a comment
Leave a comment