ಅಕ್ಕಿ ನಿರಾಕರಣೆ – ಕರ್ನಾಟಕ ಬಡ ಜನರ ಮೇಲೆ ಬಿಜೆಪಿ ಸೇಡಿನ ಕ್ರಮ
ಸಿಪಿಐ(ಎಂ) – ಪ್ರತಿಭಟನೆೆ
ಪಡಿತರ ವ್ಯವಸ್ಥೆಯಲ್ಲಿ ಐದು ಕೇಜಿ ಅಕ್ಕಿಯನ್ನು ಹೆಚ್ಚಿಸಿ ತಲಾ ೧೦ ಕೆ.ಜಿ. ಅಕ್ಕಿ ಅಥವಾ ಆಹಾರ ಧಾನ್ಯ ನೀಡಲು ರಾಜ್ಯಸರ್ಕಾರ ಮುಂದಾಗಿರುವ ಕ್ರಮಕ್ಕೆ ಎಫ್.ಸಿ.ಐ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ತಡ ಒಡ್ಡಿರುÀವುದು ಕರ್ನಾಟಕದ ಬಡ ಜನರ ಮೇಲಿನ ಸೇಡಿನ ಕ್ರಮವಾಗಿ ಎಂದು ಸಿಪಿಐ [ ಎಂ] ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸೈಯದ್ ಮುಜಿಬ್ ಅವರು ಅಪಾಧಿಸಿದರು. ಮುಂದುವರಿದು ಮಾತನಾಡಿ ಅವರು ತನ್ನ ದುರಾಡಳಿತ- ಭಷ್ಟಚಾರಗಳ – ದ್ವೇ಼ಷ ರಾಜಕಾರಣದಿಂದಾಗಿ ಸೋತಿರುವ ಬಿ.ಜೆ.ಪಿ ಈ ರೀತಿ ಜನತೆಯ ಮೇಲೆ ಸೇಡುತಿರಿಸಿ ಕೊಳ್ಳುವ ಸಂಕುಚಿತ ರಾಜಕಾರಣ ಮಾಡುತ್ತಿದೆ ಎಂದು ಅರೋಪಿಸಿದರು ಎಫ್. ಸಿ. ಐ. ಗೋಡಾನ್ಗಳಲ್ಲಿ ೧/೩ ಅಕ್ಕಿ ಸರಿಯಾದ ಸಂಸ್ಕರಣೆ ಇಲ್ಲದೆ ಇಲಿ- ಹೆಗ್ಗಣಗಳ ಪಾಲಾಗಿ ಹಾಳಾಗುತ್ತಿದೆ ಎಂದರು
ಅವರು ದಿ; ೨೦-೦೬-೨೦೨೩ ರಂದು ಬೆಳಿಗ್ಗೆ ೧೧ ಗಂಟೆಯಿAದ ೧೨ ಗಂಟೆಯ ತನಕ ತುಮಕೂರು ನಗರದ ಬಿ.ಎಸ್. ಎನ್. ಎಲ್ ಕಛೇರಿ ಎದುರು ಸಿಪಿಐ ಎಂ. ತುಮಕೂರು ನಗರ ಸಮಿತಿಯು ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನೀತಿಯನ್ನು ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ಅಕ್ಕಿ ಕೊಡದೆ ಹೋದರೆ ಹೋರಾಟ ಮಾಡುವುದಾಗಿ ಹೇಳುತ್ತಿರುವ ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಲಿ. ೨೭ ಜನ ಎಂ.ಪಿ ಗಳು ಏನು ಮಾಡುತ್ತಿದ್ದಾರೆ . ಜಿ.ಎಸ್.ಟಿಯಲ್ಲಿಸ ಸಹ ಕರ್ನಾಟಕ್ಕೆ ಅನ್ಯಾಯ ಅದರು ಬಾಯಿ ಯಾಕೆ ಬಿಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಸಿಪಿಐ [ಎಂ] ನಗರ ಕಾರ್ಯದರ್ಶಿ ಎ. ಲೊಕೇಶ್ ಅವರು ಮಾತನಾಡಿ ರಾಜ್ಯ ಸರ್ಕಾರದ ಈ ಯೋಜನೆಯು ಬಡವರ ಹಸಿವು ನೀಗಿಸಲು ನೆರವಾಗುವ ಯೋಜನೆಯಾಗಿದ್ದು ಇದು ಹಸಿವಿನ ಸೂಚ್ಯಂಕದಲ್ಲಿ ಅತ್ಯಂತ ತಳ ಮಟ್ಟದಲ್ಲಿರುವ ನಮ್ಮ ದೇಶವನ್ನು ಸ್ವಲ್ಪವಾದರೂ ಮೇಲೆತ್ತುವ ಯೋಜನೆಯೆಂಬುದನ್ನು ಒಕ್ಕೂಟ ಸರಕಾರ ಅರಿಯಬೇಕು.
ಸಿಪಿಐ [ಎಂ] ನ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಬಿ. ಉಮೇಶ್ ಅವರು ಮಾತನಾಡಿ ಪ್ರಧಾನಿಗಳು ಮಣಿಪುರ ಹತ್ತಿಉರಿಯುತ್ತಿದ್ದರು ಅದರ ಬಗ್ಗೆ ಬಾಯಿ ಬಿಡದೆ ವಿದೇಶ ಸುತ್ತುತ್ತಿದ್ದಾರೆ ಜನತೆ ಸಂಕಷ್ಟಗಳಿಗೆ ಬಿ.ಜೆ.ಪಿ ಸ್ಪಂಧಿಸುತ್ತಿಲ್ಲ ಜನ ೨೦೨೪ ಬುದ್ದಿ ಕಲಿಸಬೇಕು ಎಂದರು.
ಮಹಿಳಾ ಮುಖಂಡರಾದ ಕಲ್ಪನಾ ಅವರು ಮಾತನಾಡಿ ಜನರಿಗೆ ಆಹಾರಧಾನ್ಯದ ಬದಲು ನಗದು ವರ್ಗಾವಣೆ ಮಾಡುವಂತೆ ಸೂಚಿಸುವ ಬಿಜೆಪಿ ಧೋರಣೆಯು ಬಡವರಪರವಾಗಿರದೇ ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ನೀತಿಯಾಗಿದೆ ಎಂದು ಟೀಕಿಸಿದರು
ಪುಟ್ ಪಾತ್ ವ್ಯಾಪಾರಿಗಳ ಸಂಘದ ವಸೀಂ ಅಕ್ರಂ, ರವಿ , ಪಿಟ್ ವೇಲ್ ಕಾರ್ಮಿಕರ ಸಂಘ ರಾಮಕೃಷ್ಟಪ್ಪ, ಕಟ್ಟಡ ಕಾರ್ಮಿಕರ ಸಂಘದ ಕಲೀಲ್, ಶಂಕರಪ್ಪ, ಬೀಡಿ ಕಾರ್ಮಿಕ ಸಂಘ ಇಂತಿಯಾಜ್, ಸಿಐಟಿಯು ಗಂಗಾಧರ್,ಸಮುದಾಯದ ಅಶ್ವಥಯ್ಯ, ಲಕ್ಷಿö್ಮಕಾಂತ ಇತರರು ಮತ್ತಿತರುವು ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದರು.
ಕೇಂದ್ರದಿಂದ ರಾಜ್ಯಕ್ಕೆ ಅಕ್ಕಿ ನಿರಾಕರಣೆ CPI-M ಪ್ರತಿಭಟನೆ
Leave a comment
Leave a comment