2014ರಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೀಂತ ಮುಂಚೆ ಭಾರತ ದೇಶದ ಜನಸಾಮಾನ್ಯರಿಗೆ, ರೈತರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿ,ಯುವಜನರು, ಮಹಿಳೆಯರು ಮತ್ತು ಬಡವರಿಗೆ ಹಲವಾರು ಅಶ್ವಾಸನೆ ಕೊಟ್ಟಿತ್ತು. ಆ ಆಶ್ವಾಸನೆಯನ್ನು ಅಧಿಕಾರಕ್ಕೆ ಬಂದು ನೂರು ದಿನಗಳೊಳಗೆ ಬಡಜನರು ಉಪಯೋಗಿಸುವ ಅಗತ್ಯ ವಸ್ತುಗಳನ್ನು ಬೆಲೆಗಳನ್ನು ಕಡಿತಗೊಳಿಸುತ್ತೇನೆ, ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು, ದೇಶದ ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುತ್ತೇವೆ ಮತ್ತು ಉಳಿದ ಹಣದಲ್ಲಿ ಭಾರತ ದೇಶದಾದ್ಯಂತ ಹೈಟೆಕ್, ರಸ್ತೆ, ಹೈಟೆಕ್ ರೈಲ್ವೆ ಪ್ರತಿಯೊಂದು ಹಳ್ಳಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿ ಈ ಎಲ್ಲಾ ಭರವಸೆಗಳನ್ನು ನಂಬಿದ ಭಾರತ ದೇಶದ ಮತದಾರ ಪ್ರದಾನಿ ಶ್ರೀನರೇಂದ್ರಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಆದರೆ 10 ವರ್ಷ ಕಳೆದರೂ ಯಾವ ಭರವಸೆಗಳೂ ಈಡೇರಿಲ್ಲ. ಬದಲಿಗೆ ನೋಟು ಅಮಾನೀಕರಣ, ಜಿ.ಎಸ್.ಟಿ, ರೈಲ್ವೆ, ಬಿಎಸ್ಎನ್.ಎಲ್, ಎಲ್.ಐ.ಸಿ, ವಿಮಾನ ಇಂತಹ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿ ದೇಶದ ಬಡವರಿಗೆ ಅಗತ್ಯವಾಗಿರುವ ಬ್ಯಾಂಕ್ ವಿಲೀನ ಮಾಡುವುದರ ಮುಖಾಂತರ ದೇಶದ ಶ್ರೀಮಂತರ ಸಾಲವನ್ನು ಸುಮಾರು 14 ಲಕ್ಷ ಕೋಟಿಯಷ್ಟು ರೈಟ್ಅಫ್ ಮಾಡಲಾಗಿದ್ದು, ಸುಮಾರು 7 ಲಕ್ಷ ಕೋಟಿಯಷ್ಟು ಎನ್ಪಿಎ ಆಗಿದೆ. ಇನ್ನು ಮುಂದಿನ ದಿನಗಳಲ್ಲಿ ಬ್ಯಾಂಕ್ ದಿವಾಳಿಯಾಗಲಿದ್ದು ಖಾಸಗೀಕರಣದ ಹುನ್ನಾರ ಅಡಗಿದೆ. ಕಾರ್ಮಿಕರ ಪರವಾಗಿ ನಿಲ್ಲಬೇಕಾದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದಲೂ ಸಹ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದ್ದು ಇನ್ನು ಮುಂದುವರೆದ ಮಾಲೀಕರ ಪರವಾಗಿ ನಾನು ಇದ್ದೇನೆ ಎಂದು ಸಾಬಿತುಪಡಿಸಲು ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಇದ್ದ 44 ಕಾನೂನುಗಳನ್ನು ತಿದ್ದುಪಡಿ ಮಾಡಿ 4 ಕೋಡ್ಗಳನ್ನಾಗಿ ಮಾಡಿ ಕಾರ್ಮಿಕರ ಭವಿಷ್ಯವನ್ನು ಅಂಬಾನಿ-ಅದಾನಿ ಮುಂತಾದ ಕಾರ್ಪೋರೇಟ್ ಕಂಪನಿಗಳ ಕೈಗೆ ನೀಡಲು ಹೊರಟಿದೆ.
ದೇಶದ ರೈತರು ತಾವು ಬೇಳೆದ ಬೆಲೆಗೆ ಬೆಂಬಲ ಬೆಲೆ ನಿಗಧಿ ಸೇರಿದಂತೆ ರೈತರ ಹಿತಕಾಯಬೇಕಾದ ಕೇಂದ್ರ ಸರ್ಕಾರ ರೈತರಿಗೆ ಮಾರಕವಾದ ಕೃಷಿಕಾಯ್ದೆ, ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆಗಳನ್ನು ಜಾರಿಗೆ ತಂದು ಕಾಪೊರೇಟ್ ಕಂಪನಿಗಳಿಗೆ ರೈತರ ಭೂಮಿಯನ್ನು ನೀಡಲು ಹೊರಟಿದೆ. ಇನ್ನು ತುಮಕೂರಿಗೆ ಮಾನ್ಯ ಪ್ರಧಾನ ಮಂತ್ರಿಗಳು ಮೂರು ಬಾರಿ ಬೇಟಿ ನೀಡಿದಾಗ ಇಂಡಿಯಾ ಫುಡ್ಪಾರ್ಕ್ನಲ್ಲಿ 10 ಸಾವಿರ ಉದ್ಯೋಗ ಸೃಷ್ಠಿ, ಇದರಿಂದ 12 ಜಿಲ್ಲೆಗಳ ರೈತರು ಬೆಳೆದ ಧವಸ ಮತ್ತು ತರಕಾರಿಗಳಿಗೆ ದುಪ್ಪಟ್ಟು ಬೆಲೆ, ಹೆಚ್ಎಎಲ್ ಹೆಲಿಕ್ಯಾಪ್ಟರ್ ಘಟಕದಲ್ಲಿ 4500 ನಿಖರ ಉದ್ಯೋಗ ಸೃಷ್ಠಿ ಇವು ಪ್ರಧಾನಿಗಳು ತುಮಕೂರಿಗೆ ಬಂದು ಹೇಳಿದ ಹಸಿ ಹಸಿ ಸುಳ್ಳುಗಳು. ಹೆಚ್ಚು ಉದ್ಯೋಗ ಸೃಷ್ಠಿಸಿದ್ದ ಸಣ್ಣ ಕೈಗಾರಿಕೆಗಳು ಜಿಎಸ್ಟಿಯಿಂದ ದೇಶದ್ಯಾಂತ ಬೀದಿಗೆ ಬಿದಿದ್ದು ನಿರುದ್ಯೋಗ ಹೆಚ್ಚಳವಾಗಿದೆ. ವರ್ಷಕ್ಕೆ ಕೋಟ್ಯಂತರ ಜನ, ಯುವಕರು, ಶಿಕ್ಷಣ ಮುಗಿಸಿ ಉದ್ಯೋಗ ಅರಸಿಕೊಂಡು ವಲಸೆ ಹೋಗುತ್ತಿದ್ದಾರೆ.
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ, CPI

Leave a comment
Leave a comment