ನಂಜುAಡಸ್ವಾಮಿ ಅವರ ರೈತಪರ ಚಳವಳಿ ರಾಷ್ಟçವ್ಯಾಪಿಯಾಗಿತ್ತು’
ತುಮಕೂರು: ನಂಜುAಡಸ್ವಾಮಿ ಅವರ ರೈತಪರ ಚಳವಳಿ, ಕೊಡುಗೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ರಾಷ್ಟçವ್ಯಾಪಿ ಹೆಸರು ಪಡೆದಿತ್ತು ಎಂದು ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತç ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಮುಜಾ಼ಫರ್ ಅಸ್ಸಾದಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಎಂ. ಡಿ. ನಂಜುAಡಸ್ವಾಮಿ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಅರ್ಥಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಮಂಗಳವಾರ ಆಯೋಜಿಸಿದ್ದ ‘ನಂಜುAಡಸ್ವಾಮಿಯವರ ದೃಷ್ಟಿಯಲ್ಲಿ ಕರ್ನಾಟಕದಲ್ಲಿ ರೈತ ಚಳುವಳಿ ಮತ್ತು ಅಸ್ಮಿತೆ ರಾಜಕಾರಣ’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ನಾಡಿನ ರೈತಪರ ಚಳವಳಿಗಳು ೧೯೮೦ರ ಮುನ್ನ ರಾಷ್ಟçವ್ಯಾಪಿಯಾಗಿರಲಿಲ್ಲ. ನಂಜುAಡಸ್ವಾಮಿ ಅವರಿಗಿದ್ದ ರೈತಪರ ಕಾಳಜಿ, ದೂರದೃಷ್ಟಿ ರಾಜಕೀಯ ಅಸ್ಮಿತೆ ಪಡೆಯದೆಯೇ, ಆಂತರಿಕವಾಗಿ ವಿಶ್ಲೇಷಣೆಗೊಳಪಟ್ಟು ಬಂಡವಾಳಶಾಹಿ, ಕೈಗಾರಿಕೋದ್ಯಮ, ಜಾಗತೀಕರಣದ ವಿರುದ್ಧ ಕರುನಾಡಿನ ಒಳಗೂ ಹಾಗೂ ಹೊರಗೂ ರಾಷ್ಟçವ್ಯಾಪಿ ಹೋರಾಟವಾಯಿತು ಎಂದು ತಿಳಿಸಿದರು.
ರೈತನ ಏಳ್ಗೆಗಾಗಿ ಸಣ್ಣ ಇಳುವರಿದಾರರ ಸಂಘಟನೆಯನ್ನು ಜಾರಿಗೆ ತರುವುದರಿಂದ ಹಿಡಿದು, ಜಮೀನುದಾರರ ಹಿಡಿತದಿಂದ ರೈತರನ್ನು ಬಿಡಿಸಿ, ಸ್ವಾಭಿಮಾನದ ಬದುಕು ರೂಪಿಸಿಕೊಡುವ ಬೌದ್ಧಿಕ ಚಿಂತನೆಯುಳ್ಳ ಹೋರಾಟ ನಂಜುAಡಸ್ವಾಮಿಯವರದಾಗಿತ್ತು ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ. ಮಾತನಾಡಿ, ಎಚ್. ಎಸ್. ರುದ್ರಪ್ಪ, ಸುಂದರೇಶ್ ಮತ್ತು ಎಂ. ಡಿ. ನಂಜುAಡಸ್ವಾಮಿ ರೈತಪರ ಹೋರಾಟದ ತ್ರಿಮೂರ್ತಿಗಳು. ಇವರಿಗೆ ರೈತರ ಮೇಲಿದ್ದ ಕಾಳಜಿ, ಪ್ರೀತಿ ಅಪಾರ ಎಂದು ತಿಳಿಸಿದರು.