ವೈದ್ಯಕೀಯ ಕ್ಷೇತ್ರದ ಸಂಶೋಧನೆಗೆ ಸಹಕಾರಿಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್ ಗೌಡತುಮಕೂರು: ವೈದ್ಯಕೀಯ ಕ್ಷೇತ್ರದ ಹೊಸ ವಿಷಯಗಳ ಸಂಶೋಧನೆಗೆ ಈ ಕಾರ್ಯಗಾರ ಸಹಕಾರಿಯಾಗಲಿದ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನ ತುಮಕೂರು ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಅಭಿಪ್ರಾಯಪಟ್ಟರು.ತುಮಕೂರು ನಗರದ ಹೊರವಲಯದ ಅಗಳಕೋಟೆಯ ಸಾಹೇ ವಿವಿಯ ಎಚ್.ಎಂಗAಗಾಧರಯ್ಯ ಮೆಮೊರಿಯಲ್ ಹಾಲ್ನಲ್ಲಿಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಕಾಡೆಮಿಕ್ ಆಫ್ ಮೆಡಿಕಲ್ ಸ್ಪೆಶಲಿಸ್ಟ್ ಮತ್ತು ರಾಜ್ಯ ಆಲ್ ಇಂಡಿಯ ಮೆಡಿಕಲ್ ಅಸೋಸಿಯೇಷನ್ ತುಮಕೂರು ಘಟಕದ ವತಿಯಿಂದ ಐಎಂಎ ಎಎಂಎಸ್ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.ಜಗತ್ತು ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಿದ್ದು, ಇತ್ತಿಚೀನ ಹವಮಾನ ವೈಪರಿತ್ಯ ಹಾಗೂ ಜಾಗತೀಕರಣದ ಮಾನವನ ಆಧುನಿಕ ಜೀವನಶೈಲಿಯ ಹಿನ್ನೆಲೆಯಲ್ಲಿ ಮರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಸಮಸ್ಯೆಗಳಿಗೆ ಪೂರಕವಾಗಿ ಆಧುನಿಕ ತಂತ್ರಜ್ಞಾನದ ರೀತಿಯಲ್ಲಿ ಚಿಕಿತ್ಸಾ ವಿಧಾನಗಳನ್ನು ಆವಿಷ್ಕಾರ ಮಾಡಲಾಗುತ್ತಿದೆ. ಹೆಚ್ಚಿನ ಸಂಶೋಧನೆ ಮತ್ತು ವೈದ್ಯಕೀಯ ಶಿಕ್ಷಣ ಕಲಿಕೆಯ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ವೈದ್ಯಕೀಯ ಚರ್ಚಾ ಕಾರ್ಯಗಾರದಲ್ಲಿ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳ ನುರಿತ ತಜ್ಞ ವೈದ್ಯರು ಹಾಗೂ ಸಂಶೋಧನಾರ್ಥಿಗಳು ಭಾಗವಹಿಸಿ, ವಿವಿಧ ವೈದ್ಯಕೀಯ ಉಪಕರಣಗಳ ಸಂಶೋಧನಾ ಘಟಕಗಳ ಮಾಹಿತಿ ಹಂಚಿಕೊAಡರು.ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಸುಮಾರು ೬೦೦ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದು, ಇದು ತುಮಕೂರಿಗೆ ಹೆಮ್ಮೆಯ ವಿಷಯವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ ಉನ್ನತ ಮಟ್ಟದ ವೈದ್ಯರು ತಮ್ಮ ಅನುಭವ ಮತ್ತು ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದು. ಇದು ಇತರೆ ವೈದ್ಯರುಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಕಲಿಯಲು ಅನುಕೂಲವಾಗಿದೆ ಎಂದರು.ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ವೈದ್ಯಕೀಯ ನಿರ್ದೇಶಕರಾದ ಪ್ರಭಾಕರ್ ಅವರು ಮಾತನಾಡುತ್ತಾ ಐಎಂಎ ಎಎಂಎಸ್ ಎಂಬುವುದು ಎಲ್ಲಾ ರೀತಿಯ ಅನುಭವವುಳ್ಳ ಆಧುನಿಕ ತಜ್ಞ ವೈದ್ಯರುಗಳ ತಂಡವಾಗಿದ್ದು, ಇದರಲ್ಲಿ ನೂತನವಾಗಿ ವೈದ್ಯಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ ಯುವ ವೈದ್ಯರಿಗೆ ಮಾಹಿತಿ ನೀಡುವುದು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ಮಾಡಲಿಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಗಾರವನ್ನು ಆಯೋಜನೆ ಮಾಡಲಾಗಿದ್ದು ನಮ್ಮ ತುಮಕೂರು ಜಿಲ್ಲೆಯಲ್ಲೂ ಕೂಡ ಅನೇಕ ಸಂಶೋಧಕರು ವಿಪುಲವಾದ ಸಾಧನೆಗೆ ಮುಂದಾಗಿದ್ದಾರೆ ಎಂದರು.ತುಮಕೂರು ಜಿಲ್ಲೆಯ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ಜಿಲ್ಲಾಸ್ಪತ್ರೆಯ ನಿವೃತ್ತ ವೈದ್ಯರಾದ ಡಾ.ವೀರಭದ್ರಯ್ಯ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿನಿತ್ಯ ನಡೆಯುವ ಆವಿಷ್ಕಾರಗಳಿಗೆ ಉತ್ತರ ಹುಡುಕಲು ಇಂತಹ ಕಾರ್ಯಗಾರಗಳನ್ನ ಆಯೋಜನೆ ಮಾಡಲಾಗಿದೆ. ವೈದ್ಯರು ಇವುಗಳನ್ನ ಅಳವಡಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದರು.ಆಧುನಿಕತೆಯ ಸೋಗಿಗೆ ಹೊಂದಿಕೊAಡಿರುವ ಮನುಷ್ಯನಿಗೆ ಇತ್ತೀಚೆಗೆ ಮಧುಮೇಹ ಬಿಪಿ ಐಫರ್ ಟೆನ್ಶನ್ ನಂತಹ ಕಾಯಿಲೆಗಳು ಗಂಭೀರವಾಗಿ ಮನುಷ್ಯನ ಮೇಲೆ ಪರಿಣಾಮ ಬೀರುತ್ತಿದ್ದು, ಇವುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಇಂತಹ ಕಾರ್ಯಗಾರಗಳು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.