ತುಮಕೂರು : ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಮುಸ್ಲಿಂ ಸಮುದಾಯದವರಿಗೆ ಆಗುತ್ತಿರುವ ಅನ್ಯಾಯದ ಕುರಿತು ಪ್ರತಿಭಟನೆಯನ್ನು ಉದ್ದೇಶಿಸಿ ಅಧ್ಯಕ್ಷರು ಉಮೃದ್ದೀನ್ ಷರೀಫ್ ಮಾತನಾಡಿ ಯಾವುದೇ ದೇಶದಲ್ಲಿ ಜನರಿಗೆ ತಮ್ಮ ಹಕ್ಕುಗಳ ಮೇಲೆ ಪುಬಲವಾದ ನಂಬಿಕೆ ಹುಟ್ಟುವುದು ಆ ಹಕ್ಕುಗಳನ್ನು ಆ ದೇಶದ ಸಂವಿಧಾನದಲ್ಲಿ ಅಳೆವಡಿಸಿಕೊಂಡಾಗ ಸಂವಿಧಾನದ ಮೂಲಕ ಬರುವ ಹಕ್ಕುಗಳನ್ನು ಯಾರು ಕಸಿಯಲಾರರು ಎಂಬ ನಂಬಿಕೆ ಅಚಲವಾಗಿರುತ್ತದೆ ಎಂದರು.
ಮುಂದುವರೆದು ಮಾತನಾಡುತ್ತಾ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸತ್ತು ಕೈಗೊಳ್ಳುವ ಕಾಯ್ದೆ, ಕಾನೂನುಗಳು ಸಂವಿಧಾನದ ಪರಿಡಗಿಯಲ್ಲಿರುತ್ತವೆ. ಅಂತಹದೇ ಒಂದು ಕಾಯ್ದೆ 1991ರ ಪೂಜಾ ಸ್ಥಳಗಳ ಕಾಯ್ದೆ, ಆಗಿದ್ದೂ ಜ್ಞಾನವ್ಯಾಪಿ ಮಸೀದಿಯನ್ನು ಷಡ್ಯಂತ್ರದ ಮೂಲಕ ಮುಸ್ಲಿಮರಿಂದ ಕಸಿಯುವ ಪ್ರಯತ್ನ ನಡೆಯುತ್ತಿದೆ. ಜ್ಞಾನವ್ಯಾಪಿಯನ್ನು ನಾವೆಂದೂ ಬಿಟ್ಟು ಕೊಡುವುದಿಲ್ಲ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಜಿಲ್ಲಾಧ್ಯಕ್ಷರು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಮಾತನಾಡಿ ಬಿಜೆಪಿ ಮತ್ತು ಸಂಘ ಪರಿವಾರ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಮಾರ್ಪಡಿಸಬೇಕು ಎಂದು ಷಡ್ಯಂತ್ರ ರೂಪಿಸುತ್ತಿದೆ. ಅದರ ಭಾಗವಾಗಿ ಮುಸ್ಲಿಮರ ಸಾಂಸ್ಕöÈತಿಕ ಗುರುತುಗಳನ್ನು ಅಳಿಸಿ ಹಾಕುವ ಅಪಾಯಕಾರಿ ಯೋಜನೆಗಳನ್ನು ರೂಪಿಸಿಕೊಂಡು ಅದನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲು ಪ್ರಯತ್ನ ನಡೆಯುತ್ತಿದೆ. ಹೆಸರು ಬದಲಾವಣೆ ಎಂಬುದು ಅವರ ಒಂದು ಅಸ್ತçವಾದರೆ, ಇನ್ನೊಂದು ಪ್ರಬಲ ಅಸ್ತ, ಮುಸ್ಲಿಮರ ನಂಬಿಕೆಗಳ ಮೇಲೆ ಪ್ರಹಾರ ನಡೆಸುವುದು. ಮುಸ್ಲಿಮರ ಮಸೀದಿಗಳನ್ನು ಅವರಿಂದ ಕಿತ್ತುಕೊಳ್ಳುವ ಮೂಲಕ ಅವರ ನಂಬಿಕೆಗಳ ಮೇಲೆ ಪ್ರಹಾರ ನಡೆಸಬೇಕು ಎಂಬುದು ಫ್ಯಾಸಿಸ್ಟ್ ಬಿಜೆಪಿ ಮತ್ತು ಸಂಘ ಪರಿವಾರದ ತಂತ್ರ. ಅದರ ಭಾಗವಾಗಿ ಈಗಾಗಲೇ ಬಾಬರಿ ಮಸೀದಿಯನ್ನು ಮುಸ್ಲಿಮರಿಗೆ ಇಲ್ಲವಾಗಿಸಿದ್ದಾರೆ. ಈಗ ಜ್ಞಾನವ್ಯಾಪಿ ಮಸೀದಿಯನ್ನು ಕೂಡ ಅದೇ ಸಾಲಿಗೆ ಸೇರಿಸಲು ಹವಣಿಸುತ್ತಿದ್ದಾರೆಂದು ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕ್ಷರಾದ ಉಮೃದ್ಧೀನ್ ಷರೀಫ್, ಪ್ರಧಾನ ಕಾರ್ಯದರ್ಶಿ ಷಫೀವುಲ್ಲ ಖಾನ್, ಜಿಲ್ಲಾ ಸದಸ್ಯರಾದ ಮುಕ್ತಿಯಾರ್ ಅಹಮ್ಮದ್, ಅಪಾರ ಕಾರ್ಯಕರ್ತರು ಹಾಗೂ ಸದಸ್ಯರು ಭಾಗವಹಿಸಿದ್ದರು.