ತುಮಕೂರು:ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಏಕಾಂಗಿಯಾಗಿ ಸರಕಾರ ರಚಿಸಲಿದೆ ಎಂದು ಕೇಂದ್ರ ರೈಲ್ವೆ ಮಂತ್ರಿ ರಾವ್ಸಾಹೇಬ್ಪಾಟೀಲ್ ದಾನ್ವೆ ತಿಳಿಸಿದ್ದಾರೆ.
ಬಾಜಪ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಇಡೀ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದು, ಮೋದಿಯವರು ೨೦೨೦-೨೧ನೇ ಸಾಲಿನಲ್ಲಿ ತೆಗೆದುಕೊಂಡು ಬಡವರ ಕಲ್ಯಾಣ ಕಾರ್ಯಕ್ರಮಗಳು ರಾಜ್ಯದ ಎಲ್ಲರ ಮನೆಗಳನ್ನು ತಲುಪಿದ್ದು,ಈ ಯೋಜನೆಗಳು ಪಕ್ಷದ ಗೆಲುವಿಗೆ ಸಹಕಾರಿಯಾಗಲಿವೆ ಎಂದರು.
ಕೇAದ್ರ ಸರಕಾರ ೨೦೧೯ರಲ್ಲಿ ಎರಡನೇ ಬಾರಿಗೆ ನರೇಂದ್ರಮೋದಿ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ನಂತರ ತೆಗೆದುಕೊಂಡು ಕಲ್ಯಾಣ ಕಾರ್ಯಕ್ರಮಗಳಾದ ಪ್ರಧಾನಮಂತ್ರಿ ಅವಾಸ್ ಯೋಜನೆ,ಉಜ್ವಲ ಯೋಜನೆ,ಕಿಸಾನ್ ಸನ್ಮಾನ್ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಪಕ್ಷಕ್ಕೆ ಬೆಂಬಲವಾಗಿವೆ.ತುಮಕೂರು ಜಿಲ್ಲೆಯ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳ ಜೊತೆಗೆ,ನೆಲಮಂಗಲ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ತುಮಕೂರು ನಗರದ ಜೋತಿ ಗಣೇಶ್, ಗ್ರಾಮಾಂತರದ ಬಿ.ಸುರೇಶಗೌಡ ಅವರುಗಳು ಗೆಲುವು ಸಾಧಿಸಲಿದ್ದಾರೆ.ನಗರದಲ್ಲಿ ಸ್ಮಾರ್ಟ್ ಸಿಟಿ ಸೇರಿದಂತೆ ಹಲವು ಯೋಜನೆಗಳ ಮೂಲಕ ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗಿದೆ. ಇದು ಜನರ ಕಣ್ಣಿಗೆ ಕಾಣುತ್ತಿದೆ
ಒಂದು ವರ್ಗವನ್ನು ತೃಷ್ಟೀಕರಣ ಮಾಡುವ ಕಾಂಗ್ರೆಸ್ ಗುಣ ಬಹಿರಂಗ ಮಾಡಿದೆ

Leave a comment
Leave a comment