ತುಮಕೂರ: ಜಿಲ್ಲೆಯಲ್ಲಿ ಸುಮಾರು ೧೩ ಲಕ್ಷ ಜನಸಂಖ್ಯೆ ಯನ್ನು ಹೊಂದಿರುವ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವಲ್ಲಿ ಕಾಂಗ್ರೆಸ್, ಬಿಜೆಪಿ,ಜೆಡಿಎಸ್ ಪಕ್ಷಗಳು ವಿಫಲವಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ ಮತ್ತು ತುಮಕೂರು ನಗರ ಕ್ಷೇತ್ರಗಳಲ್ಲಿ ಒಬಿಸಿ ಸಮುದಾಯದ ಅಭ್ಯರ್ಥಿಗಳಿಗೆ ಟಿಕೇಟ್ ನೀಡುವಂತೆ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹಕ್ಕೊತ್ತಾಯ ಸಮಿತಿಯ ಪುಟ್ಟರಾಜು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜಿಲ್ಲೆಯ ೧೧ ಕ್ಷೇತ್ರಗಳಲ್ಲಿ ೨ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ ಗೆ ಮೀಸಲಿಡಲಾಗಿದೆ. ಉಳಿದ ೯ ರಲ್ಲಿ ತುಮಕೂರು ನಗರ ಮತ್ತು ಚಿಕ್ಕನಾಯಕನಹಳ್ಳಿ ಯಲ್ಲಿ ಜೆಡಿಎಸ್ ಪಕ್ಷದಿಂದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಟಿಕೇಟ್ ಘೋಷಣೆ ಮಾಡಲಾಗಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಇದುವರೆಗೂ ಒಬಿಸಿ ಅವರಿಗೆ ಟಿಕೇಟ್ ನೀಡಿಲ್ಲ ಎಂದು ದೂರಿದರು
ಬಿಜೆಪಿಯಿಂದ ತುಮಕೂರು ನಗರ ಕ್ಷೇತ್ರದಿಂದ ಡಾ.ಎಂ.ಆರ್.ಹುಲಿನಾಯ್ಕರ್, ಶಿರಾದಿಂದ ಬಿ.ಕೆ.ಮಂಜುನಾಥ್, ಗುಬ್ಬಿಯಿಂದ ಬೆಟ್ಟಸ್ವಾಮಿ ಅವರುಗಳು ಟಿಕೇಟ್ ಆಕಾಂಕ್ಷಿಗಳಾಗಿದ್ದರೆ, ಕಾಂಗ್ರೆಸ್ ನಿಂದ ಚಿಕ್ಕನಾಯಕನಹಳ್ಳಿ ಯಿಂದ ರೇಣುಕಯ್ಯ ಉಪ್ಪಾರ, ವೈ.ಸಿ.ಸಿದ್ದರಾಮಯ್ಯ, ಶಿರಾದಿಂದ ಸಾಸಲು ಸತೀಶ್ ಅವರುಗಳು ಆಕಾಂಕ್ಷಿಸಿಗಳಾಗಿದ್ದಾರೆ.ಕಾAಗ್ರೆಸ್ ಈಗಾಗಲೇ ಬಿಡುಗಡೆ ಮಾಡಿರುವ ೧೨೪ ಕ್ಷೇತ್ರಗಳ ಪಟ್ಟಿಯಲ್ಲಿ ಶಿರಾ ಮತ್ತು ಚಿಕ್ಕನಾಯಕನಹಳ್ಳಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಕೂಡಲೆ ಪಟ್ಟಿಯನ್ದು÷್ದ ಮರುಪರಿಶೀಲನೆಗೆ ಒಳಪಡಿಸಿ ಚಿಕ್ಕನಾಯಕನಹಳ್ಳಿ ಯಿಂದ ರೇಣುಕಯ್ಯ ಉಪ್ಪಾರ್,ಇಲ್ಲವೇ ವೈ.ಸಿ.ಸಿದ್ದರಾಮಯ್ಯ ಅವರಿಗೆ,ಹಾಗೆಯೇ ಶಿರಾದಲ್ಕಿ ಸಾಸಲು ಸತೀಶ್ ಅವರಿಗೆ ಟಿಕೇಟ್ ನೀಡಬೇಕೆಂದು ಪುಟ್ಟರಾಜು ಆಗ್ರಹಿಸಿದರು.
ಕಳೆದ ಹತ್ತು ವರ್ಷಗಳಿಂದ ಡಾ.ಹುಲಿನಾಯ್ಕರ್ ಅವರು ಬಿಜೆಪಿ ಪಕ್ಷಕ್ಕಾಗಿ ತಮ್ಮತನು,ಮನ,ಧನವನ್ನು ಖರ್ಚು ಮಾಡಿ ಪಕ್ಷ ಕಟ್ಟಿದ್ದಾರೆ. ಇಂದಿಗೂ ಬಿಜೆಪಿಯ ಬಹುತೇಕ ಕಾರ್ಯಕ್ರಮಗಳು ಶ್ರೀ ದೇವಿ ಕಾಲೇಜಿನಲ್ಲಿ ನಡೆಯಲು ಅವಕಾಶ ಕಲ್ಪಿಸಿದ್ದಾರೆ.
ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವಲ್ಲಿ ಕಾಂಗ್ರೆಸ್, ಬಿಜೆಪಿ,ಜೆಡಿಎಸ್ ಪಕ್ಷಗಳು ವಿಫಲವಾಗಿದೆ
Leave a comment
Leave a comment