ಕುಂಚಿಟಿಗ ಸಮುದಾಯಕ್ಕೆ ಮೀಸಲಾತಿ ವಿಚಾದಲ್ಲಿ ಬಹಳಷ್ಟು ಅನ್ಯಾಯವಾಗುತ್ತಿದ್ದು ಇದಕ್ಕಾಗಿ ಹಲವು ಸರ್ಕಾರಗಳನ್ನು ಮನವಿ ಮಾಡಿದ್ದೆವು ಈಗ ಕಾಂಗ್ರೇಸ್ ಸರ್ಕಾರವು ನಮ್ಮ ಮನವಿಯನ್ನು ಪುಸ್ಕರಿಸಿ ಕೇಂದ್ರ ಸರ್ಕಾರಕ್ಕೆ ಓಬಿಸಿ ಪಟ್ಟಿಗೆ ಸೇರಿಸಲು ಮನವಿ ಮಾಡಿರುವುದು ಸ್ವಾಗತಾರ್ಹ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ತಿಳಿಸಿದ್ದಾರೆ.
ಶುಕ್ರವಾರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಮಾದ್ಯಮಕ್ಕೆ ಮಾಹಿತಿ ನೀಡಿದ ಅವರು ಕೇಂದ್ರ ಸರ್ಕಾರವು ನಮ್ಮ ಮನವಿಯನ್ನು ಪುರಸ್ಕರಿಸಿ ನಮ್ಮ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಈಗಾಗಲೇ ನಮ್ಮ ಸಮುದಾಯದ ಕುಲಶಾಸ್ತ್ರ ಅಧ್ಯಯನವನ್ನು ನಡೆಸಿ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ, ಆದರೆ ಹಿಂದೆ ಎಲ್ಲಾ ಸರ್ಕಾರಗಳೂ ಸಹ ಕೇವಲ ನಮ್ಮ ಮನವಿಯನ್ನು ಸ್ವೀಕರಿಸಿದ್ದರಷ್ಟೇ ಈ ಸರ್ಕಾರ ನಮ್ಮ ಸಮುದಾಯಕ್ಕೆ ಸಾಮಾಜಿಕ ನೆಲೆಗಟ್ಟಿನ ಅಡಿಯಲ್ಲಿ ನ್ಯಾಯ ದೊರಕಬೇಕಿದ್ದು ಸಮುದಾಯಕ್ಕೆ ನ್ಯಾಯ ಸಿಗಬೇಕು ಅರಿತು ನಮಗೆ ನ್ಯಾಯ ದೊರಕಿಸಲು ಮುಂದಾಗಿರುವುದು ಸ್ವಾಗತಾರ್ಹ.
ರಾಜ್ಯ ಸರ್ಕಾರ,ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾಧಿಯಾಗಿ ಬಹುತೇಕ ಸರ್ಕಾರದ ಹಲವು ಶಾಸಕರುಗಳು ಸಮುದಾಯದ ಪರವಾಗಿ ಇದ್ದು ಎಲ್ಲರಿಗೂ ಶ್ರೀಮಠದ ಪರವಾಗಿ ಮತ್ತು ವೈಯಕ್ತಿವಾಗಿ ಅಭಿನಂಧನೆಯನ್ನು ಸಲ್ಲಿಸುವುದಾಗಿ ಶ್ರೀಗಳು ತಿಳಿಸಿದ್ದಾರೆ.