ಪ್ಯಾರಾ ಓಲಪಿಂಕ್ಸ್ನಲ್ಲಿ ಪದಕ ವಿಜೇಯತೆ ಹೆಚ್.ಡಿ. ನಿವೇಧಿತರವರ ಅಭಿನಂದನ ಸಮಾರಂಭ ರಂದು ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಗಣದಲ್ಲಿ ನಡೆದ
ಸಮಾರಂಭದಲ್ಲಿ ಇತ್ತೀಚೆಗೆ ಗೋವಾ ರಾಜ್ಯದ ಪಣಜಿಯಲ್ಲಿ ನಡೆದ ರಾಷ್ಟ್ರಮಟ್ಟದ ಪ್ಯಾರಾ ಓಲಪಿಂಕ್ಸ್ ಕ್ರೀಡಾ ಕೂಟದಲ್ಲಿ ಶಾಟ್ ಪುಟ್ ಎಸೆತದಲ್ಲಿ ಕಂಚಿನ ಪದಕವನ್ನು ಗೆದ್ದ ಹೆಚ್.ಡಿ. ನಿವೇಧಿತರವರಿಗೆ ಟಿ.ಕೆ.ಆನಂದ್ ರವರ ಸ್ನೇಹಿತರಿಂದ ಅಭಿನಂದಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಹೆಚ್.ಡಿ. ನಿವೇಧಿತರವರು ತಾನು ಹೊನ್ನುಡಿಕೆ ಗ್ರಾಮೀಣ ಪ್ರದೇಶದಿಂದ ಬಂದು ಪ್ಯಾರಾ ಓಲಪಿಂಕ್ಸನಲ್ಲಿ ಪದಕವನ್ನು ಗೆದ್ದಿರುವುದು ತನಗೆ ಸಂತಸ ತಂದಿದೆ ಈ ಸಾದನೆ ತನ್ನಲ್ಲಿ ಆತ್ಮ ವಿಶ್ವಾಸ ಮೂಡಿಸಿದೆ. ತನ್ನ ಸಾಧನೆಯನ್ನು ಗುರುತಿಸಿದ ಟಿ.ಕೆ.ಆನಂದರವರ ಸ್ನೇಹವೃಂದಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಇದೇ ಸಂಧರ್ಭದಲ್ಲಿ ತುಮಕೂರಿನ ಬಿ.ಜೆ.ಪಿ. ಪಕ್ಷದ ಒಕ್ತಾರರಾದ ಚಂದ್ರಶೇಖರವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭ ಹಾರೈಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಚಂದ್ರಶೇಖರ್ರವರು ಮಾತನಾಡುತ್ತಾ ಕ್ರೀಡೆಗಳಲ್ಲಿ ಗೆಲುವು ಸಾದಿಸಿದರೆ, ರಾಷ್ಟ್ರವೇ ತಮ್ಮನ್ನು ಗೌರವಿಸುತ್ತದೆ. ಗ್ರಾಮೀಣ ಪ್ರತಿಭೆ ನಿವೇಧಿತರವರ ಸಾದನೆ ನಾವೆಲ್ಲ ಹೆಮ್ಮೆ ಪಡುವಂತಂಹದು ಎಂದು ನುಡಿದರು.
ಇದೇ ಸಂಧರ್ಭದಲ್ಲಿ ತುಮಕೂರಿನ ಅಶೋಕರಸ್ತೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಕೇಂದ್ರ ಬಸ್ನಿಲ್ದಾಣಕ್ಕೆ ದಿವಂಗತ ದೇವರಾಜು ಅರಸು ರವರ ಹೆಸರಿಡಲು ಶ್ರಮಿಸಿದ ಕನ್ನಡ ಸೇನೆಯ ಅಧ್ಯಕ್ಷರು ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಧನಿಯಾಕುಮಾರ್ರವನ್ನು ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಧನಿಯಾಕುಮಾರ್ರವರು ದಿವಂಗತ ದೇವರಾಜು ಅರಸು ರವರ ಹೆಸರನ್ನು ಕೆ.ಎಸ್.ಆರ್.ಟಿ.ಸಿ ನಿಲ್ದಾಣಕ್ಕೆ ಇಡಲು ಸುಮಾರು 10-12 ವರ್ಷಗಳ ಹೋರಾಟ ಈ ಒಂದು ಕೆಲಸಕ್ಕೆ ಮುಖ್ಯ ಕಾರಣೀಭೂತರೆಂದರೆ, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣನವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವಲ್ಲಿ ಟಿ.ಕೆ.ಆನಂದ್ರವರು ಮುಂಚೂಣಿಯಲ್ಲಿದ್ದಾರೆ.
ಈ ಸಂಧರ್ಭದಲ್ಲಿ ಅಂತರ್ ರಾಷ್ಟ್ರೀಯ ಕ್ರೀಡಾ ಪಟು ಟಿ.ಕೆ.ಆನಂದ್ರವರು
ಮಾತನಾಡಿ ಗೃಹಿಣಿಯಾದ ಹೆಚ್.ಡಿ. ನಿವೇಧಿತರವರ ಸಾಧನೆ ಶ್ಲಾಂಘನೀಯವಾದದ್ದು, ಹಾಗೂ ಕ್ರೀಡಾ ಪಟುಗಳು ತಮ್ಮ ಸಾಧನೆಯನ್ನು ಕ್ರೀಡೆಗಳಲ್ಲಿ ತೊಡಗಿಸಿಕೊಂಡು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದರೆ ಆಗ ಇಡೀ ರಾಷ್ಟ್ರವೇ ಅವರನ್ನು ಗೌರವಿಸುತ್ತೆ ಹಾಗೂ ಅವರು ಈ ದೇಶದ ಆಸ್ತಿಯಾಗುತ್ತಾರೆ. ತುಮಕೂರು ಕೇಂದ್ರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ದಿವಂಗತ ದೇವರಾಜು ಅರಸುರವರ ಹೆಸರು ಇಡಲು ಅವಿರತವಾಗಿ ಶ್ರಮಿಸಿದ ಧನಿಯಾಕುಮಾರ್ ಮತ್ತು ಅವರ ಸ್ನೇಹಿತರಿಗೆ ವಂದನೆಗಳನ್ನು ತಿಳಿಸಿದರು.
ಮಧುಕರ್ರವರು ಮಾತನಾಡಿ ತಾವು ಒಬ್ಬ ಕ್ರೀಡಾ ಪಟು ತಾವು ಚೆಸ್ ಅಸೋಸೀಯೇಷನ್ ನ ಉಪಾಧ್ಯಾಕ್ಷರಾಗಿದ್ದು, ಕ್ರೀಡಾ ಪಟುಗಳು ಅವಿರತ ಪರಿಶ್ರಮದಿಂದ ಸಾಧನೆಯ ಶಿಖರವನ್ನು ತಲುಪಬೇಕಾಗುತ್ತದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಮೇಜರ್ ನಾರಾಯಣಪ್ಪನವರು ಮಧು ಗೋಲ್ಡ್, ಮಹೇಶ್, ವೆಂಕಟೇಶ್, ಆರ್.ಎನ್. ವೆಂಕಟಾಚಲ, ಮತ್ತು ಕ್ರೀಡಾ ಪಟುಗಳು ಅಭಿಮಾನಿಗಳು ಉಪಸ್ಥಿತರಿದ್ದರು.