ತುಮಕೂರು:ದಿನೇ ದಿನೇ ಹೆಚ್ಚಾಗುತ್ತಿರುವ ಕಾಂಕ್ರಿಟ್ ಕಾಡಿನಿಂದ ಉಂಟಾಗುತ್ತಿರುವ ಪರಿಸರ ಅಸಮತೋಲ ನವನ್ನು ಸರಿಪಡಿಸಲು ಗಿಡ ನಡೆವುದೊಂದೇ ಪರಿಹಾರ ಎಂದು ನಗರಪಾಲಿಕೆ ೧೫ನೇ ವಾರ್ಡಿನ ಸದಸ್ಯೆ ಶ್ರೀಮತಿ ಗಿರಿಜಾ ಧನಿಯಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸರಕಾರಿ ಜೂನಿಯರ್ ಕಾಲೇಜು ಆವರಣದಲ್ಲಿರುವ ಸರಕಾರಿ ಪ್ರೌಢಶಾಲಾ ವಿಭಾಗದ ರಾಷ್ಟಿçÃಯ ಹಸಿರು ಪಡೆ,ನಿಸರ್ಗಧಾಮ ಇಕೋ ಕ್ಲಬ್ ಹಾಗೂ ಇನ್ನರ್ ವ್ಹಿಲ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಗಿಡನೆಟ್ಟು,ನೀರೆರೆದು ಮಾತನಾಡಿದ ಅವರು,ಪರಿಸರ ತಜ್ಞರೆಂದರೆ ಹೇಗಿರಬೇಕು ಎಂಬುದಕ್ಕೆ ನಮ್ಮ ನಿವೃತ್ತ ಪ್ರಾಧ್ಯಾಪಕರಾಗಿರುವ ಪ್ರೊ.ಸಿದ್ದಪ್ಪ ಅವರೇ ಮಾದರಿ. ಅವರು ನೆಟ್ಟಿರುವ ಸಾವಿರಾರು ಬೇವಿನ ಮರಗಳು,ತಾವಿರುವ ಸುತ್ತಮುತ್ತಲಿನ ಪರಿಸರಕ್ಕೆ ಅಮ್ಲಜನಕವನ್ನು ಸರಬರಾಜು ಮಾಡುತ್ತಿವೆ.ಅವರ ರೀತಿಯಲ್ಲಿಯೇ ನಾವೆಲ್ಲರೂ ಪರಿಸರ ಕಾಳಜಿ ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಳುವಳಿಯಾಗಿ ನೀಡಬೇಕೆಂದರು.
ಇನ್ನರ್ ವ್ಹಿಲ್ ಕ್ಲಬ್ನ ಅಧ್ಯಕ್ಷೆ ಶ್ರೀಮತಿ ಪರಿಮಳ ಮಲ್ಲಿಕಾರ್ಜುನ್ ಮಾತನಾಡಿ,ಜಗತ್ತಿನ ಪ್ರತಿಯೊಬ್ಬ ಮನುಷ್ಯನಿಗೂ ಅಮ್ಲಜನಕದ ಅಗತ್ಯವಿದೆ.ಅದು ದೊರೆಯವುದು ಗಿಡ,ಮರಗಳಿಂದ ಕೂಡಿದ ಪರಿಸರದಲ್ಲಿ.ಹಾಗಾಗಿ ನಾವೆಲ್ಲರೂ ಸಾಧ್ಯವಾದಷ್ಟು ಗಿಡ ನೆಟ್ಟು ಪೋಷಿಸುವ ಮೂಲಕ ಪರಿಸರ ಸಮತೋಲನಕ್ಕೆ ನಮ್ಮ ಕೈಲಾದ ಕೊಡುಗೆ ನೀಡೊಣ ಎಂದು ಸಲಹೆ ಮಾಡಿದರು.
ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ,ಪರಿಸರ ಅಸಮತೋಲನದಿಂದ ಮನುಷ್ಯನ ಮೇಲಾಗುವ ದುಷ್ಪರಿಣಾಮಗಳೇನೆಂದು ಕೋರೋನ ಕಾಲದಲ್ಲಿ ನಾವೆಲ್ಲ ಅರಿತಿದ್ದೇವೆ.ಗಂಟೆ ೨೦೦೦ರೂ ಕೊಟ್ಟು ಅಕ್ಸಿಜ್ಹನ್ ಪಡೆದು ಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿತ್ತು.ಎಷ್ಟೊ ಜನರು ಅಕ್ಸಿಜ್ಹನ್ ಸಿಲಿಂಡರ್ ದೊರೆಯದೆ ಇಹಲೋಕ ತ್ಯೇಜಿಸಿದರು. ಮತ್ತೊಮ್ಮೆ ಅಂತಹ ಪರಿಸ್ಥಿತಿ ಬರಬಾರದೆಂದರೆ ನಾವುಗಳು ಇಂದಿನಿAದಲೇ ಗಿಡ,ಮರಗಳನ್ನು ಬೆಳೆಸುವ ಕೆಲಸ ಮಾಡಬೇಕಾಗಿದೆ.ಕಳೆದ ೨೬ ವರ್ಷಗಳಿಂದ ತುಮಕೂರು ನಗರದಲ್ಲಿ ಗಿಡ,ಮರಗಳನ್ನು ಬೆಳೆಸಿ,ಪೋಷಿಸುತ್ತಿರುವ ಪ್ರೊ.ಸಿದ್ದಪ್ಪ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು.ಗುಬ್ಬಿಗೇಟ್ನಿಂದ ಬಟವಾಡಿಯವರಗೆ ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ಸಿದ್ದಪ್ಪ ಅವರ ಹೆಸರನ್ನು ಬಿ.ಹೆಚ್.ರಸ್ತೆಗೆ ಇಡಬೇಕೆಂದು ಒತ್ತಾಯಿಸಿದರು.
ಸರಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರಾದ ಶ್ರೀಮತಿ ನೂರ್ ಫಾತಿಮ ಮಾತನಾಡಿ,ನಮ್ಮ ಶಾಲೆಯ ಆವರಣದಲ್ಲಿ ರಾಷ್ಟಿçÃಯ ಹಸಿರು ಪಡೆಯ ವತಿಯಿಂದ ಸಣ್ಣದಾಗಿ ವಿಶ್ವಪರಿಸರ ದಿನವನ್ನು ಆಚರಿಸಲು ಮುಂದಾಗಿದ್ದೇವು.ಆದರೆ ನಮ್ಮ ವಾರ್ಡಿನ ಕೌನ್ಸಿಲರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ಸಹಕಾರದಿಂದ ಇಂದು ದೊಡ್ಡದಾಗಿಯೇ ಸುಮಾರು ೪೦ಕ್ಕೂ ಅಡಿಕೆ,ತೆಂಗು,ಹುಣಸೆ,ಹಲಸು ಸೇರಿದಂತೆ ಜನರಿಗೆ,ಪ್ರಾಣಿ,ಪಕ್ಷಿಗಳಿಗೆ ಉಪಯೋಗವಾಗುವ ಗಿಡಗಳನ್ನು ನೆಡಲಾಗಿದೆ.ಇದಕ್ಕೆ ಸಹಕರಿಸಿದ ಶಾಲೆಯ ಸಿಬ್ಬಂದಿ ವರ್ಗ,ಪಾಲಿಕೆ, ಇನ್ನರ್ ವ್ಹಿಲ್ ಕ್ಲಬ್ ಸದಸ್ಯರುಗಳುಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟು ಮಾತನಾಡಿದ ಪರಿಸರ ತಜ್ಞ ಪ್ರೊ.ಸಿದ್ದಪ್ಪ, ಕಳೆದ ೨೬ ವರ್ಷಗಳ ಹಿಂದೆ ಸಿದ್ದಗಂಗಾ ಮಠಾಧ್ಯಕ್ಷರಾಗಿದ್ದ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರು ನಾನ ಮಠದಲ್ಲಿ ಮಕ್ಕಳನ್ನು ಬೆಳೆಸುತ್ತೇನೆ. ನೀರು ನಗರದಲ್ಲಿ ಗಿಡಗಳನ್ನು ಬೆಳೆಸು ಎಂದು ಆಶೀರ್ವಾದ ಪಡೆದಿದ್ದರು.ಅವರ ಆಶೀರ್ವಾದದಂತೆ ಸುಮಾರು ೧ ಲಕ್ಷ ಗಿಡಗಳನ್ನು ನೆಟ್ಟು ಪೋಷಿಸುತ್ತಾ ಬಂದಿದ್ದೇನೆ.ತುಮಕೂರು ವಿವಿ ಹೊಸ ಕ್ಯಾಂಪಸ್ನಲ್ಲಿಯೂ ಈ ವರ್ಷ ಸುಮಾರು ೪೦೦೦ ಗಿಡ ನೆಡುವ ಗುರಿ ಇದ್ದು,ಸಾರ್ವಜನಿಕರು ಸಹಕರಿಸಬೇಕು.ಒಂದು ಗಿಡ ನೆಟ್ಟು ಸಾಕುವುದರಿಂದ ಮನುಷ್ಯನ ಆಯುಷ್ಯ ೧೦ ವರ್ಷ ಹೆಚ್ಚಾಗುತ್ತದೆ.ಅದರಲ್ಲಿ ಬೇವಿನ ಗಿಡಗಳು ಪರಿಸರಕ್ಕೆ ಹೆಚ್ಚಿನ ಅಮ್ಲಜನಕ ಬಿಡುಗಡೆ ಮಾಡುತ್ತವೆ.ಹಾಗಾಗಿ ಬಿ.ಹೆಚ್. ರಸ್ತೆಯಲ್ಲಿ ಬೇವಿನ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಇನ್ನರ್ ವ್ಹಿಲ್ ಕ್ಲಬ್ನ ಅಧ್ಯಕ್ಷೆ ಪರಿಮಳ ಮಲ್ಲಿಕ್,ನಿಕಟಪೂರ್ವ ಅಧ್ಯಕ್ಷರುಗಳಾದ ರಾಜೇಶ್ವರಿ ರುದ್ರಪ್ಪ, ಸುಮಿತ್ರ ನಾಗರಾಜು,ಇಂಗ್ಲಿಷ್ ವಿಷಯ ಪರಿವೀಕ್ಷಕರಾದ ರವೀಶ್ ಮತ್ತು ಗಿರೀಶ್,ಶಿಕ್ಷಕಿಯರಾದ ಶಾಹಿನ್ ಶಹಜಾಮಾನಿ, ದೈಹಿಕ ಶಿಕ್ಷಕರಾದ ಎನ್.ಸಾವಿತ್ರಮ್ಮ ಮತ್ತು ಎಲ್ಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದಿನೇ ದಿನೇ ಹೆಚ್ಚಾಗುತ್ತಿರುವ ಕಾಂಕ್ರಿಟ್
Leave a comment
Leave a comment