ಮೈಸೂರು: ಹಾಡಿ ನಿವಾಸಿಗಳೊಂದಿಗೆ ಸಿದ್ಧರಾಮಯ್ಯ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿರುವ ಘಟನೆ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಕೆರೆ ಹಾಡಿಯಲ್ಲಿ ನಡೆದಿದೆ. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಈ ಬಗ್ಗೆ ವೀಡಿಯೋ ಪೋಸ್ಟ್ ಮಾಡಿರುವ ಸಿಎಂ ಸಿದ್ಧರಾಮಯ್ಯ , ಈ ದೇಶದ ಆದಿವಾಸಿ ಸಮುದಾಯಗಳ ಬದುಕು, ಕಲೆ, ಆಚರಣೆಗಳು ತಮ್ಮ ಸುತ್ತಲಿನ ಪರಿಸರದೊಂದಿಗೆ ಮಿಳಿತಗೊಂಡಿವೆ. ಸುತ್ತಲಿನ ಪ್ರಕೃತಿ, ಪರಿಸರದ ದನಿ ಎಂಬಂತೆ ಅವರ ಹಾಡುಗಳಿವೆ, ಒಮ್ಮೆ ಕೇಳಿದರೆ ಗುನುಗುನಿಸುತ್ತಲೇ ಇರಬೇಕೆನ್ನುವ ಸಹಜ ಸಂಗೀತ-ಲಾಲಿತ್ಯವಿದೆ ಎಂದಿದ್ದಾರೆ.