ತುಮಕೂರು:ನಗರದಲ್ಲಿ ಶ್ರೀಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಯೋಜನೆಯ ಸಹಯೋಗದಲ್ಲಿ,ಸ್ಥಳೀಯ ನಾಗರಿಕ ಸಮಿತಿಗಳು ಹಮ್ಮಿಕೊಂಡಿರುವ ಕೆರೆಯಗಳ ಸ್ವಚ್ಚತಾ ಅಭಿಯಾನದಲ್ಲಿ,ಇಂದು ತುಮಕೂರು ನಗರಕ್ಕೆ ಹೊಂದಿಕೊAಡAತೆ ಇರುವ ಉಪ್ಪಾರಹಳ್ಳಿ ಕೆರೆ ಅಭಿವೃದ್ದಿ ಕಾಮಗಾರಿಗಳನ್ನು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಹಾಗೂ ಇನ್ನಿತರ ಮುಖಂಡರು ವೀಕ್ಷಣೆ ನಡೆಸಿದರು.
ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಉಪ್ಪಾರಹಳ್ಳಿ ಕೆರೆಯ ಏರಿ ಭದ್ರ ಪಡಿಸುವುದು, ನೀರಿನ ಸ್ವಚ್ಚತೆ ಕೆಲಸವನ್ನು ಕೈಗೊಳ್ಳಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಕರೆ ಅಭಿವೃದ್ದಿ ಕಾಮಗಾರಿ ವೀಕ್ಷಿಸಿ,ಸಂಬAಧಪಟ್ಟವರೊAದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುರುಳೀಧರ ಹಾಲಪ್ಪ,ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಾಡನ್ನು ಅಭಿವೃದ್ದಿ ಪಥದತ್ತ ತೆಗೆದುಕೊಂಡು ಹೋಗಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ಅಳಿವನ ಅಂಚಿನಲ್ಲಿರುವ ಕೆರೆಗಳನ್ನು ಜೀರ್ಣೋದ್ಧಾರ ಕಾರ್ಯವನ್ನು “ನಮ್ಮ ಊರು,ನಮ್ಮ ಕೆರೆ”ಕಾರ್ಯಕ್ರಮ ಜನಪ್ರಿಯವಾಗಿದೆ.ನೀರಿನ ತಾಣಗಳಾದ ಕೆರೆಗಳನ್ನು ಜೀರ್ಣೋದ್ಧಾರ ಕೈಗೊಂಡಿದೆ. ಇದುವರೆಗೂ ಸಾವಿರಾರು ಕೆರೆಗಳನ್ನು ಅಭಿವೃದ್ದಿ ಪಡಿಸಿದೆ. ಸುಮಾರು ೨೨ ಲಕ್ಷ ರೂಗಳಲ್ಲಿ ತುಮಕೂರು ನಗರದ ಉಪ್ಪಾರಹಳ್ಳಿ ಕೆರೆಯನ್ನು ಅಭಿವೃದ್ದಿ ಪಡಿಸಲಾಗಿತ್ತು.ಆದರೆ ಉದ್ದೇಶ ಈಡೇರದ ಹಿನ್ನೇಲೆಯಲ್ಲಿ ಮತ್ತೊಮ್ಮೆ ಸ್ವಚ್ಚತಾ ಕಾರ್ಯ ಹಮ್ಮಿಕೊಂಡಿದ್ದಾರೆ ಎಂದರು.

ಯಾವುದೇ ಯೋಜನೆ ಸಫಲಗೊಳ್ಳಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯ.ಈ ನಿಟ್ಟಿನಲ್ಲಿ ಇಂದು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ,ವೀಕ್ಷಣೆ ಮಾಡಿ,ಮಾತುಕತೆ ನಡೆಸಲಾಯಿತು.ಲಕ್ಷಾಂತರ ರೂ ಖರ್ಚು ಮಾಡಿ ಕೆರೆ ಅಭಿವೃದ್ದಿ ಮಾಡಿದ್ದರೂ ಸಹ ಕಟ್ಟಡಗಳ ತ್ಯಾಜ್ಯ,ಕೊಳಚೆ ನೀರು ಕೆರೆಗೆ ಹರಿದ ಪರಿಣಾಮ ಕೆರೆ ಮತ್ತೆ ಮಲೀನಗೊಡಿದೆ.ಶುಚಿತ ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗಬೇಕಿದೆ. ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅಭಿವೃದ್ದಿಗೊಂಡ ಕೆರೆಯನ್ನು ನಗರಪಾಲಿಕೆಗೆ ಹಸ್ತಾಂತರಿಸಲಿದ್ದಾರೆ ಎಂದು ಮುರುಳೀಧರ್ ಹಾಲಪ್ಪ ತಿಳಿಸಿದರು.
ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತುಮಕೂರು ಜಲ್ಲಾ ನಿರ್ದೇಶಕರಾದ ಶ್ರೀಮತಿ ದಯಾಶೀಲ ಮಾತನಾಡಿ, ಕಳೆದ ೧೨ ವರ್ಷಗಳಿಂದ ತುಮಕೂರು ಜಿಲ್ಲೆಯಲ್ಲಿ ಕೆರೆಗಳ ಜೀರ್ಣೋದ್ಧಾರ ಕಾರ್ಯವನ್ನು ನಮ್ಮ ಸಂಸ್ಥೆಯ ಸಹಕಾರದಲ್ಲಿ ಮಾಡಲಾಗುತ್ತಿದೆ.ಇದುವರೆಗೂ ತುಮಕೂರು ಜಿಲ್ಲೆಯ ೪೯ ಕೆರೆಗಳ ಹೂಳೆತ್ತುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ತುಮಕೂರು ತಾಲೂಕಿನಲ್ಲಿ ೮ ಕೆರೆ ಜೀರ್ಣೋದ್ಧಾರ ಕಾರ್ಯ ಮಾಡಲಾಗಿದೆ. ತುಮಕೂರು ನಗರದ ಉಪ್ಪಾರಹಳ್ಳಿ ಕೆರೆಯನ್ನು ಕಳೆದ ಎರಡು ವರ್ಷಗಳ ಹಿಂದೆ ೨೦ ಲಕ್ಷ ರೂಗಳ ವೆಚ್ಚದಲ್ಲಿ ಜೀರ್ಣೋದ್ಧಾರಕ್ಕೆ ಮುಂದಾಗಿತ್ತು.ಸ್ಥಳೀಯ ಸಮಿತಿಗಳು ಸಹ ಕೈಜೋಡಿಸಿದ್ದವು. ನಾಳೆ ಈ ಕೆರೆಯನ್ನು ಜಿಲ್ಲಾಡಳಿತ ವಹಿಸುವ ಕಾರ್ಯವಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಈ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ವೇಳೆ ಉಪ್ಪಾರಹಳ್ಳಿ ಕುಮಾರ್, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.