ತುಮಕೂರು: ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲು ಕ್ಲಾರೆನ್ಸ್ ಆಂಗ್ಲಶಾಲೆಯಲ್ಲಿ ಸೂತ್ರದ ಬೊಂಬೆ ಆಟ ನಾಟಕವನ್ನು ಮಕ್ಕಳಿಗೆ ತೋರಿಸುವುದರ ಮೂಲಕ ನಶಿಸಿ ಹೋಗುತ್ತಿರುವ ಇಂತಹ ಕಲೆಗಳನ್ನು ಪರಿಚಯ ಮಾಡಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಮತ್ತು ಕನ್ನಡದ ಸಂಸ್ಕೃತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ನಮ್ಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು ಎಂದು ಕ್ಲಾರೆನ್ಸ್ ಆಂಗ್ಲ ಶಾಲೆಯ
ಮುಖ್ಯೋಪಾಧ್ಯಾಯನಿಯಾದ ಎಸ್ ಎಸ್. ಭಾರತಂಬ ತಿಳಿಸಿದರು.ಇಂದು ತುಮಕೂರು ನಗರದಲ್ಲಿನ ಅಶೋಕನಗರದಲ್ಲಿರುವ ಕ್ಲಾರೆನ್ಸ್ ಆಂಗ್ಲಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸೂತ್ರದ ತೊಗಲುಗೊಂಬೆಯಾಟ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳಿಗೆ ಇಂತಹ ಸೂತ್ರ ತೊಗಲುಗೊಂಬೆ ಆಟ ನಾಟಕಗಳ ಪ್ರದರ್ಶನ ಅಪರೂಪವಾಗಿದ್ದು ವಿದ್ಯಾರ್ಥಿಗಳು ಇದರ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದರು. ಕ್ಲಾರೆನ್ ಆಂಗ್ಲ ಶಾಲೆಯ ಮುಖ್ಯಸ್ಥರಾದ ನಾಸೇಹ ಹಪ್ರೋಜ್ ಮಾತನಾಡಿ ಕನ್ನಡ ರಾಜ್ಯೋತ್ಸವವನ್ನು ಈ ಬಾರಿ ನಮ್ಮ ಶಾಲೆಯಲ್ಲಿ ವಿಭಿನ್ನವಾಗಿ ಆಚರಿಸಲು ನಾವು ನಿರ್ಧರಿಸಿ ಈ ಸೂತ್ರದ ತೊಗಲುಗೊಂಬೆಯಾಟ ಆಟದ ಮೂಲಕ ಮಕ್ಕಳಿಗೆ ಕನ್ನಡದ ಅರಿವು ಮೂಡಿಸಲು ನಾವು ನಿರ್ಧರಿಸಿದ್ದವು, ಅದರಂತೆ ಇಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕನ್ನಡದ ಬಗ್ಗೆ ಮತ್ತಷ್ಟು ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಮಾಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಉಪಾಧ್ಯಾಯರುಗಳಾದ ರಾಧಾ ಮೂರ್ತಿ ಮತ್ತು ಸೂತ್ರದ ತೊಗಲುಗೊಂಬೆಯಾಟದ ಮುಖ್ಯಸ್ಥರಾದ ಸಿದ್ದರಾಜು ಹುಬ್ಬಳ್ಳಿ ಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.