ಸಿಐಟಿಯು ವಿರೋಧ”
ಜನತೆ ಹಣದಲ್ಲಿ ಕಟ್ಟಿರುವ ಜನರ ರೈಲನ್ನು ಖಾಸಗಿಕರಿಸುವ ನಡೆ ದೇಶ ವಿರೋಧಿಯಾಗಿದೆ , ೭-೮ ದಶಕಗಳ ಕಾಲ ಜನತೆಯು ಕಟ್ಟಿದ
ಸಾರ್ವಜಿನಿಕ ಉದ್ದಿಮೆಗಳನ್ನು ಮಾರಿ ದೇಶ ಲೂಟಿ ಮಾಡಲಾಗುತ್ತಿರುವುದನ್ನು ಜನತೆಯು ಅರ್ಥ ಮಾಡಿಕೊಳ್ಳಬೇಕು.ಖಾಸಗಿಕರಣಕ್ಕೆ ಸಾಮಾಜಿಕ ಬದ್ದತೆಇಲ್ಲ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಸೈಯದ್ ಮುಜೀಬ್ ಅವರು ಅಭಿಪ್ರಾಯ ಪಟ್ಟರು ಮುಂದುವರೆದು ಮಾತನಾಡಿ ಅವರು ೭೦ ವರ್ಷಗಳಲ್ಲಿ ಕಟ್ಟಲಾಗಿರುವ ದೇಶದ ವಿವಿಧ ವಲಯಗಳಲ್ಲಿನ ಅಸ್ತಿಗಳ ಮಾರಾಟಮಾಡುವ ಕೇಂದ್ರ ಬಿ.ಜೆ.ಪಿ ಸರ್ಕಾರ ನಡೆ ಯಾರ ಲಾಭಕ್ಕೆ ಎಂದು ಪ್ರಶ್ನಿಸಿದ ಅವರು ಇದು ಜನತೆಯನ್ನು ಸಂಕಷ್ಟಕ್ಕೆ ಸಿಲುಕಿಸುವ ನಡೆ ಎಂದರು, ಈ ಜನ ವಿರೋಧಿ ನಡೆಯನ್ನು ಸರ್ಕಾರ ಬದಲಿಸದೆ ಇದ್ದರೆ ಸರ್ಕಾರವನ್ನು ಜನತೆ ಬದಲಿಸಬೇಕು ಎಂದು ಅವರು ಕರೆ ನೀಡಿದರು
ಅವರು ದಿನಾಂಕ ; ೦೩- ೧೧-೨೦೨೩ ರ ಶುಕ್ರವಾರದಂದು ಬೆಳಿಗ್ಗೆ ತುಮಕೂರು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ಅಯೋಜಿಸಿದ್ದ ರೈಲ್ವೆ ಖಾಸಗಿಕರಣ ವಿರೋಧಿ ಹೋರಾಟ ಉದ್ದೆಶಿಸಿ ಮಾತನಾಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಎಸ್.ಡಿ ಪಾರ್ವತಮ್ಮ ನವರು ಮಾತನಾಡಿ ರೈಲ್ವೆ ನಿಲ್ದಾಣಕ್ಕೆ ಸೇರುವ ಅಸ್ತಿ ಖಾಸಗಿ ಕಂಪನಿಗಳ ಹಸ್ತಾಂತರಕ್ಕೆ ನೀಡುವ, ಟೀಕೆಟ್ ಧರಗಳನ್ನು ೪೩% ದಷ್ಟು ಹೆಚ್ಚಿಸುವ ರೈಲು ಖಾಸಗಿಕರಣದ ನಿಲುಮೆಯು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.
ತುಮಕೂರು ತಾಲ್ಲೂಕ್ ಸಂಚಾಲಕರಾದ ರಂಗಧಾಮಯ್ಯ ನವರು ಮಾತನಾಡಿ ರೈಲ್ವಯಲ್ಲಿ ೧೦೦% ರಷ್ಟು ಖಾಸಗಿ ಹೂಡಿಕೆಗೆ ಅವಕಾಶ ನೀಡುವ ಕ್ರಮ ಸರಿಯಲ್ಲ ಅಂದರು
ಪ್ರಾಂತ ರೈತ ಸಂಘದ ಬಿ. ಉಮೇಶ್ಅವರು ಮಾತನಾಡಿ ಜನರ ಸಾರಿಗೆ ರೈಲನ್ನು ಸರ್ಕಾರದ ಅಧೀನದಲ್ಲಿ ಉಳಿಸಿ ಪಾರದರ್ಶಕತೆ ರೂಪಿಸಿ – ಸುರಕ್ಷತೆ ಹೆಚ್ಚಿಸಬೇಕೆಂದರು. ಟಿ.ಜಿ. ಶಿವಲಿಂಗಯ್ಯನವರ ಮಾತನಾಡಿ ರೈಲ್ವೆಯನ್ನು ವಿವಿಧ ಪ್ರದೇಶಗಳಿಗೆ ವಿಸ್ತರಿಸಬೇಕು.
ಇನ್ಸಾಪ್ ಸಂಘಟನೆ ರಪೀಕ್ ಪಾಷ ಅವರು ಮಾತನಾಡಿ ರೈಲಿನಲ್ಲಿ ಕೇಟರಿಂಗ್ ಖಾಸಗಿಕರಣ ಮಾಡಿರುವ ಕಾರಣ ದೂರದ ಪ್ರಯಾಣ ಮಾಡುವ ಜನತೆಗೆ ಕಳಪೆ ಆಹಾರ ಮಾತ್ರ ಸಿಗುತ್ತಿದೆ. ಖಾಸಗಿಕರಣದ ವಿರೊಧಿ ಹೋರಾಟಕ್ಕೆ ಜನರು ಬೆಂಬಲಿಸಬೆಕೇAದರು. ಜನವಾಧಿ ಮಹಿಳಾ ಸಂಘಟನೆ ಕಲ್ಪನಾ ಮಾತನಾಡಿ ದೇಶದ ಅಸ್ತಿ ಮಾರಲು ಜನ ಬಿ.ಜೆ.ಪಿಗೆ ಓಟು ಹಾಕಿಲ್ಲ. ಎಂದು ಕಟುವಾಗಿ ಟೀಕಿಸಿದರು
ಸಿಐಟಿಯು ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಅವರು ಮಾತನಾಡಿ ರೈಲ್ವೆಯಲ್ಲಿ ಖಾಲಿ ಇರುವ ೩ ಲಕ್ಷದಷ್ಟು ಹುದೆಗಳನ್ನು ಭರ್ತಿ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದರು
ಹೋರಾಟದಲ್ಲಿ ಕಟ್ಟಡ ಕಾರ್ಮಿಕ ಸಂಘಟನೆ ಕಲೀಲ್, ವೆಂಕಟೇಶ್, ಬಿಧಿಬಧಿ ವ್ಯಾಪಾರಿಗಳ ಸಂಘದ ರಾಜಶೇಖರ್, ಜಗದೀಶ್. ಮುತ್ತುರಾಜ್, ವಸೀಂ ಅಕ್ರಂ , ಅಟೋ ಚಾಲಕರ ಯೂನಿಯನ್ ನ ಇಂತೀಯಾಜ್ ಪಾಷ, ಹಮಾಲಿ ಕಾರ್ಮಿಕ ಸಂಘ ರಾಮಾಂಜೀನಿ, ಆಂಗನವಾಡಿ ನೌಕರರ ಸಂಘದ ಶಿವಗಂಗಮ್ಮ, ಗೌರಮ್ಮ, ಜಬೀನಾ ಖಾತೋನ್,ಲಕ್ಮಿಕಾಂತ , ಸಮುದಾಯದ ಅಧಕ್ಷ ಅಶ್ವಥ್, ಪಿ.ಎಫ್. ಪಿಂಚಣಿದಾರರು ಬಾಲಕೃಷ್ಣ ಇತರರು ಇದ್ದರು
ಜನತೆ ಹಣದಲ್ಲಿ ಕಟ್ಟಿದ ,ಜನರ ರೈಲು ಖಾಸಗಿಕರಣಕ್ಕೆ – ಸಿಐಟಿಯು ವಿರೋಧ
Leave a comment
Leave a comment