ಬೀಡಿಕಾರ್ಮಿಕರ ಕನಿಷ್ಢ ವೇತನ ಪರಿಷ್ಕರಣೆವಿಳಂಬ -ತಕ್ಷಣ ಪರಿಕ್ಷರಣೆಗೆ ಸಿಐಟಿಯು ಒತ್ತಾಯ
ಕರ್ನಾಟಕ ರಾಜ್ಯದ -೨೨-೨೩ ಜಿಲ್ಲೆಗಳಲ್ಲಿ ನೂರಾರು ಬೀಡಿ ಉದ್ಯಮಗಳಲ್ಲಿ ಸರಿ -ಸುಮಾರು ೬ ರಿಂದ ೭ ಲಕ್ಷ ಜ£, ತುಮಕೂರು ಜಿಲ್ಲೆಯಲ್ಲಿ ಸರಿಸುಮಾರು ೬೦-೭೦ ಸಾವಿರ ಜನ ಬೀಡಿ ಕಾರ್ಮಿಕರು ಇದ್ದಾರೆ ಈ ಬೀಡಿ ಉದ್ಯಮವು ರಾಜ್ಯ ಸರ್ಕಾರದ ಕನಿಷ್ಠ ವೇತನ ಪಾವತಿ ಕಾಯ್ದೆ ೧೯೪೮ಅಧಿಸೂಚಿತ ಪಟ್ಟಿಯಲ್ಲಿ ಇದೆ, ೫ ವರ್ಷಗಳ ಹಿಂದೆ ರಾಜ್ಯ ಸರ್ಕಾರವು ಕನಿಷ್ಠ ವೇತನ ಪಾವತಿ ಕಾಯ್ದೆ ೧೯೪೮ ಕಲಂ ೫.೧.ಎ ಅಡಿಯಲ್ಲಿ ತ್ರೀಪಕ್ಷೀಯ ಸಮಿತಿ ಒಂದನ್ನು ರಚಿಸಿ ಕನಿಷ್ಠ ವೇತನ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಲಾಗಿತ್ತು, ಸದರಿ ಅಧಿಸೂಚನೆಯು ನ್ಯಾಯಲಯದಲ್ಲಿ ಕಳೆದ ೪-೫ ವರ್ಷಗಳಿಂದ ವಿವಾದಕ್ಕೆ ಒಳಗಾಗಿ ಜಾರಿಯಾಗದೇ ಹಾಗೇ ಉಳಿದಿದೆ, ಈ ಪ್ರಶ್ನೆಯಲ್ಲಿ ಸರ್ಕಾರದ ಪರಿಣಾಮಕಾರಿ ಮಧ್ಯ ಪ್ರವೇಶಕ್ಕೆ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಷನ್ ಸಿಐಟಿಯು ಅಗ್ರಹ ಪೂರಕವಾಗಿ ವಿನಂತಿಸುತ್ತದೆ, ಕಳೆದ ೫ ವರ್ಷಗಳಿಂದ ಬಡ ಕಾರ್ಮಿಕರು ಬೆಲೆ ಏರಿಕೆಯಲ್ಲಿ ಬೆಂದು, ಕನಿಷ್ಠ ಕೂಲಿ ಇಲ್ಲದೆ ದುಸ್ತರವಾದ ಬದುಕು ಸಾಗಿರುತ್ತಿರುವುದನ್ನು ಸರ್ಕಾರ ಪರಿಗಣಿಸ ಈ ತಕ್ಷಣದಲ್ಲಿ ಸ್ಥಿತಿಯನ್ನು ಬದಲಿಸಲು ಸರ್ಕಾರ ಕ್ರಮ ವಹಿಸಲು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಷನ್ [ಸಿಐಟಿಯು] ಹಾಗು.ತುಮಕೂರು ಜಿಲ್ಲಾ ಬೀಡಿ ಕಾರ್ಮಿಕರ ಸಂಘ.ರಿ ಕೊರಿವೆ.
ಕನಿಷ್ಠ ವೇತನವು ೫ ವರ್ಷಗಳಿಗೆ ಒಮ್ಮೆ ಮೇಲ್ಮುಖವಾದ ಪರಿಷ್ಕರಣೆಗೆ ಒಳಪಡುವುದು ನಡೆದು ಕೊಂಡು ಬಂದಿರುವ ವಾಡಿಕೆಯಾಗಿದೆ, ಈ ಹಿನ್ನಲೆಯಲ್ಲಿದಿ;೧೪-೦೩-೨೦೧೮ ಪರಿಷ್ಕರಣೆಗೆ ಒಳಪಡಿಸಲಾಗಿತ್ತು . ಇದು ಐದುವರ್ಷಗಳಾದ ಕಾರಣ ದಿ: ೧೪/೩/೨೦೨೩ ಮತ್ತು ಪರಿಷ್ಕರಣೆಗೆ ಒಳ ಪಡಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ , ಆದರೆ ಇದುವರೆಗೂ ಬೀಡಿ ಕಾರ್ಮಿಕ ಕನಿಷ್ಠ ಕೂಲಿಯ ಪರಿಷ್ಕರಣೆ ಸರ್ಕಾರ ಯಾವುದೇ ಕ್ರಮ ವಹಿಸಿರುವುದು ಕಾಣುತ್ತಿಲ್ಲ, ಹಾಗಾಗಿ ತಾವು ಈ ವಿಚಾರಕ್ಕೆ ಸಂಬAದಿಸಿದAತೆ ಕ್ರಮಕ್ಕೆ ಮುಂದಗುವAತೆ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ ಸಿಐಟಿಯು ಮತ್ತು ತುಮಕೂರು ಜಿಲ್ಲಾ ಬೀಡಿ ಕೆಲಸಗಾರರ ಸಂಘ . ರಿ,ಸಿಐಟಿಯು ದಿನಾಂಕ; ೦೪-೧೦-೨೦೨೩ ರಂದು ತುಮಕೂರು ಜಿಲ್ಲಾಧಿಕಾರಿಗಳು ಮತ್ತು ಕಾರ್ಮಿಕ ಅಧಿಕಾರಿಗಳ ಮೂಲಕ ಕಾರ್ಮಿಕ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಬೀಡಿಕಾರ್ಮಿಕರ ಕನಿಷ್ಢ ವೇತನ ಪರಿಷ್ಕರಣೆವಿಳಂಬ -ತಕ್ಷಣ ಪರಿಕ್ಷರಣೆಗೆ ಸಿಐಟಿಯು ಒತ್ತಾಯ
Leave a comment
Leave a comment