ತುಮಕೂರು:ಮಕ್ಕಳ ದಿನಾಚರಣೆ,ವಿಶ್ವ ಮಧುಮೇಹ ದಿನದ ಅಂಗವಾಗಿ ಹಾಲಪ್ಪ ಪ್ರತಿಷ್ಠಾನ,ನೆಷ್ಟ್ ಚಾರಿಟಬಲ್ ಟ್ರಸ್ ವತಿಯಿಂದ, ಸಿದ್ದಾರ್ಥ ಮಡಿಕಲ್ ಕಾಲೇಜು ಸಹಯೋಗದಲ್ಲಿ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು.
ನಗರದ ಡಾ.ಶ್ರೀಶಿವಕುಮಾರಸ್ವಾಮಿಜಿಗಳ ವೃತ್ತದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಹಾಗೂ ವಿಶ್ವ ಮಧುಮೇಹ ದಿನಾಚರಣೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ,ಸ್ವಾತಂತ್ರ ಭಾರತದ ಮೊದಲ ಪ್ರಧಾನಿ,ಮಕ್ಕಳನ್ನು ಹೆಚ್ಚು ಪ್ರೀತಿಸುತಿದ್ದ ಚಾಚಾ ನೆಹರು ಅವರು,ತನ್ನ ಜನ್ಮ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುವಂತೆ ನೀಡಿದ ಸಲಹೆಯಂತೆ ಪ್ರತಿವರ್ಷ ನವೆಂಬರ್ ೧೪ನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.ಇಂದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ನಮ್ಮ ಪ್ರತಿಷ್ಠಾನದ ವತಿಯಿಂದ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಇAದು ಮಧುಮೇಹವೆಂಬ ರೋಗ ಚಿಕ್ಕಮಕ್ಕಳನ್ನು ಅತಿಯಾಗಿ ಕಾಡುತ್ತಿದೆ.ಮೂವತ್ತು ವರ್ಷದ ಒಳಗಿನ ಮಕ್ಕಳಲ್ಲಿ ಟೈಪ್-೨ ಡಯಾಬಿಟಿಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು,ಇದಕ್ಕೆ ಮಾತ್ರೆಯಿಲ್ಲ.ಇನ್ಸೂಲಿನ್ ಒಂದೇ ಮದ್ದು.ಇದನ್ನು ಅರಿತಂತೆ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರಕಾg ೨೦೨೩ರ ಡಿಸೆಂಬರ್ ೦೧ ರಿಂದ ಮೂವತ್ತು ವರ್ಷದ ಒಳಗಿನ ಎಲ್ಲಾ ಮಧುಮೇಹ ರೋಗಿಗಳಿಗೆ ಉಚಿತವಾಗಿ ಇನ್ಸೂಲಿನ್ ಸರಬರಾಜು ಮಾಡಲು ತೀರ್ಮಾನಿಸಿದೆ.ಇದಕ್ಕಾಗಿ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಆರೋಗ್ಯ ಮಂತ್ರಿಗಳಾದ ದಿನೇಶಗುಂಡೂರಾವ್ ಅವರುಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.
ಮಕ್ಕಳ ದಿನಾಚರಣೆ,ವಿಶ್ವ ಮಧುಮೇಹ ದಿನದ ಅಂಗವಾಗಿ ಆರೋಗ್ಯ ಶಿಬಿರ
Leave a comment
Leave a comment