ತುಮಕೂರು, ಸೆ.೯- ಬೆಂಗಳೂರಿನ ಗರ್ಭಗುಡಿ ಐವಿಎಫ್ ಕೇಂದ್ರದ ಸಹ ಕಾರದೊಂದಿಗೆ ಗರ್ಭಜ್ಞಾನ್ ಫೌಂಡೇಷನ್ ಹಾಗೂ ಸುವರ್ಣ ದೀಪ ವಿಷ್ಯೂಯೆಲಿ ಇಂಪರ್ಡ್ ಅಂಡ್ ಫಿಜಿಕಲಿ ಜಾಲೆಂಜ್ ಡೆವಲಪ್ಮೆಂಟ್ ಟ್ರಸ್ಟ್ ಸಹಯೋಗದಲ್ಲಿ ಬಂಜೆತನ ಮುಕ್ತ ಕರ್ನಾಟಕಕ್ಕಾಗಿ ಕೈಜೋಡಿ ಅಭಿಯಾನವನ್ನು ಹಮ್ಮಿಕೊಂಡಿರುವುದಾಗಿ ಟ್ರಸ್ಟ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ನ್ಯಾಯವಾದಿ ದೀಪಕ್ ಆರ್.ಸಾಗರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಕ್ಕಳಿಲ್ಲದ ದಂಪತಿಗಳು ಆಧುನಿಕ ಚಿಕಿತ್ಸೆ ಪಡೆಯುವ ಮೂಲಕ ಮಕ್ಕಳನ್ನು ಪಡೆಯುವ ಉದ್ದೇಶದಿಂದ ಸೆಪ್ಟೆಂಬರ್ ತಿಂಗಳಲ್ಲಿ ಹಲವು ಆಫರ್ಗಳನ್ನು ನೀಡಿದ್ದು, ಕಲಾವಿದರ ತಂಡದೊAದಿಗೆ ಬೀದಿ ನಾಟಕಗಳನ್ನು ಹಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ರಾಜ್ಯದ ೩೧ ಜಿಲ್ಲೆಗಳಲ್ಲಿ ಈ ಅಭಿಯಾನ ನಡೆಯಲಿದ್ದು ಈಗಾಗಲೆ ೨೮ ಜಿಲ್ಲೆಗಳಲ್ಲಿ ಅಭಿಯಾನ ಮುಕ್ತಯವಾಗಿದ್ದು, ಉಳಿದ ಜಿಲ್ಲೆಗಳಲ್ಲೂ ಇದನ್ನು ನಡೆಸುವುದಾಗಿ ಹೇಳಿದರು.
ಬಂಜೆತನಕ್ಕೆ ಮಹಿಳೆಯರನ್ನು ಮಾತ್ರ ದೂಷಿಸುವುದು ನಮ್ಮ ಸಮಾಜದಲ್ಲಿ ಕಂಡು ಬರುತ್ತಿದ್ದು, ಮಹಿಳೆಯರಷ್ಟೆ ಪುರುಷರು ಇದಕ್ಕೆ ಕಾರಣ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲು ಈ ಅಭಿಯಾನ ಹಮ್ಮಿಕೊಂಡಿದ್ದು, ಪುರುಷರಲ್ಲೆ ಬಂಜೆತನ ಹೆಚ್ಚಾಗಿ ಕಂಡು ಬರುತ್ತಿದೆ ಎಂದರು.
ಮಕ್ಕಳು ಆಗದ ಕಾರಣಕ್ಕೆ ಎಷ್ಟೋ ದಂಪತಿಗಳ ನಡುವೆ ಕೌಟುಂಬಿಕ ಕಲಹ, ವಿವಾಹ ವಿಚ್ಛೇದನ, ಸಂಬAಧಗಳ ವಿಭಜನೆಗೆ ಕಾರಣವಾಗುತ್ತಿದ್ದು, ಸಾಫ್ಟ್ವೇರ್ ಉದ್ಯೋಗಿಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದಾಗಿದೆ ಎಂದರು.
ಐವಿಎಫ್ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುವವರಿಗೆ ಗರ್ಭಗೃಹದಲ್ಲಿ ಉಚಿತ ವಸತಿ ಸೌಲಭ್ಯ ಹಾಗೂ ವಿವಿಧ ಆಸ್ಪತ್ರೆಗಳಲ್ಲಿ ರಿಯಾಯಿತಿ ದರದ ಚಿಕಿತ್ಸೆ ನೀಡಲಾಗುತ್ತಿದೆ ಎಂದ ಅವರು, ಗ್ರಾಮೀಣ ಭಾಗದ ೫೦೦ ಕುಟುಂಬಗಳಲ್ಲಿ ೧೦ ಕುಟುಂಬಗಳು ಸಂತಾನವಿಲ್ಲದೆ ಜೀವನ ನಡೆಸುತ್ತಿರುವುದು ಕಂಡು ಬಂದಿದೆ ಎಂದರು.
ಮಕ್ಕಳಿಲ್ಲದ ದಂಪತಿಗಳು ಆಧುನಿಕ ಚಿಕಿತ್ಸೆ ಪಡೆಯುವ ಮೂಲಕ
Leave a comment
Leave a comment