ಅಫಜಲಪುರ : ಮಕ್ಕಳಲ್ಲಿನ ಪ್ರತಿಭೆ ಗುರ್ತಿಸಲು ಸಂಸ್ಕೃತಿಕ ಹಾಗೂ ಸಂಸ್ಕಾರಯುತ ಶಿಕ್ಷಣ ಬಹಳ ಅವಶ್ಯ ಎಂದು ಬಡದಾಳ ತೇರಿನ ಮಠದ ಡಾ ಚನ್ನಮಲ್ಲ ಶಿವಾಚಾರ್ಯರು ಅಭಿಪ್ರಾಯ ಪಟ್ಟರು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಫಜಲಪುರ ಹಾಗೂ ಕ್ಷೇತ್ರ ಸಮೂಹ ಸಮನ್ವಯಧಿಕಾರಿಗಳ ಕಾರ್ಯಾಲಯ ರೆವೂರ್ ಬಿ ನೇತೃತ್ವದಲ್ಲಿ ಬಡದಾಳ ಗ್ರಾಮದಲ್ಲಿ ನಡೆದ ರೇವೂರ ಬಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು,ಮಕ್ಕಳಲ್ಲಿ ಪ್ರತಿಭೆ ಎನ್ನುವದು ಭೂದಿ ಮುಚ್ಚಿದ ಕೆಂಡದಂತೆ ಅದನ್ನು ಶಿಕ್ಷಕರಾದವರು ಗಮನಿಸಿ ಹೊರಗಡೆ ಹಾಕುವಂತ ಕೆಲಸ ಮಾಡಬೇಕು ಅಂದಾಗ ಮಾತ್ರ ಮಕ್ಕಳಲ್ಲಿನ ಪ್ರತಿಭೆ ಗುರ್ತಿಸಲು ಸಾಧ್ಯ ಎಂದರು.
ಕಾರ್ಯಕ್ರಮವನ್ನು ಕ್ಷೇತ್ರ ಸಮನ್ವಯ ಅಧಿಕಾರಿ ವಿ ವಾಯ್ ಗುಡಮಿ ಉದ್ಘಾಟಿಸಿದರು, ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ರೇವೂರ ವಲಯದ ಶಾಲೆಯ ಮಕ್ಕಳು ಭಾಗವಹಿಸಿದರು, ಮತ್ತು ವಿವಿಧ ಸಂಸ್ಕೃತಿ ಚಟುವಟಿಕೆಗಳಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು ಈ ಸಂದರ್ಭದಲ್ಲಿ ಗ್ರಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸಾರಿಕಾ ಶರಣಗೌಡ, ಶೋಭರಾಜ್ ಮ್ಯಾಳೆಸಿ, ಭೀಮ್ ಬಾಯಿ ಪಾಟೀಲ್, ರೇವೂರ ಸಿ ಆರ್ ಪಿ ಕಲ್ಲಪ್ಪ ಮೇತ್ರಿ,ಮಹೇಶ್ ಉಪ್ಪಿನ, ಸಿ ಆರ್ ಪಿ ಗುರುರಾಜ ಮ್ಯಾಳೆಸಿ,ಶ್ರೀಕಾಂತ ನಿಂಬಾಳ್, ಶ್ರೀಮತಿ ಅನ್ನಪೂರ್ಣ,ಶಿಕ್ಷಕರಾದ ಬಸವರಾಜ ಸೇರಿದಂತೆ ಶಾಲೆಯ ಮುಖ್ಯಗುರುಗಳಾದ ಉಮಾಕಾಂತ, ರಾಠೋಡ, ಗ್ರಾಮದ ಮುಖಂಡರು ಹಾಗೂ ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.