ಸಮರ್ಥ್ ಫೌಂಡೇಷನ್(ರಿ) ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಫೌಂಡೇಷನ್ನಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪನವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂದು ಸುಮಾರು ಇಪ್ಪತ್ತು ವರ್ಷಗಳಿಂದ ಹೇಳುತ್ತಾ ಬಂದಿದ್ದೇವೆ. ಇಂದು ಕಲಿತರೆ ಮಾತ್ರ ಸಾಲದು ಕಲಿಕೆಯ ಜೊತೆಗೆ ಕೌಶಲ್ಯ ಬೇಕೇ ಬೇಕು. ಮನುಷ್ಯ ಕೆಲವು ಕೌಶಲ್ಯಗಳನ್ನು ಹೊಂದಿರುತ್ತಾರೆ. ಅದನ್ನು ಪರಿಪಕ್ವ ಗೊಳಿಸಬೇಕಾದರೆ ಇಂಥಹ ವ್ಯವಸ್ಥಿತ ತರಬೇತಿಗಳು ನಡೆದರೆ ಆ ಪರಿಪಕ್ವತೆ ಸಿಗುತ್ತದೆ. ನಮ್ಮ ನಿತ್ಯ ಜೀವನವನ್ನು ಸಮರ್ಪಕವಾಗಿ ನಡೆಸಬೇಕೆಂದರೆ ನಮಗೆ ಕೌಶಲ್ಯ ಬೇಕೇ ಬೇಕು, ವಿದ್ಯೆಯ ಜೊತೆಗೆ ಇಂತಹ ಕೌಶಲ್ಯಗಳು ನಮ್ಮ ಜೀವನದ ಮಟ್ಟವನ್ನು ಸುಧಾರಿಸುವಲ್ಲಿ ಮುಖ್ಯ ಪಾತ್ರನ್ನು ವಹಿಸುತ್ತವೆ. ಇಂದು ಬಡಗಿ, ಕುಂಬಾರಿಕೆ, ಬುಟ್ಟಿ ಹೆಣೆಯುವುದು, ಕಮ್ಮಾರಿಕೆ, ಇಂತಹ ಅದೆಷ್ಟೋ ಹಳ್ಳಿಗಾಡಿನ ಪಾರಂಪರಿಕ ಕೌಶಲ್ಯಗಳು ಕಣ್ಮೆರೆಯಾಗುತ್ತಿವೆ. ಇವುಗಳನ್ನು ಗುರುತಿಸಿ ಉತ್ತೇಜಿಸುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದ್ದೆ, ಕಲಿಕೆ ಮತ್ತು ಗಳಿಗೆ ಕೌಶಲ್ಯ ತರಬೇತಿಯ ಮುಖ್ಯ ಗುರಿಯಾಗಿದೆ. ಇಂತಹ ಕೆಲಸವನ್ನು ಸಮರ್ಥ್ ಫೌಂಡೇಷನ್ ನಿಂರAತರವಾಗಿ ಮಾಡುತ್ತಾ ಬರುತ್ತಿದೆ. ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿದ್ದಂತಹ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರು, ಮಕ್ಕಳ ತಜ್ಞರು ಆದ ಶ್ರೀಮತಿ ಡಾ.ರಜನಿಯವರು ಇಲ್ಲಿ ಟೈಲರಿಂಗ್ ತರಬೇತಿಯನ್ನು ಪಡೆದೆ ಮಹಿಳೆಯರನ್ನು ನೋಡಿದರೆ, ನನ್ನ ಬಾಲ್ಯದ ಕೆಲವು ನೆನಪುಗಳು ಮೂಡುತಿದೆ. ಹಿಂದಿನ ಕಾಲದಲ್ಲಿ ಮನೆಯ ಬಾಗಿಲಿಗೆ ಹಾಕಿದ ತೋರಣ, ಕೈಯಿಂದ ಮಾಡಿದ ಹೂದಾನಿಗಳು, ಕಿಟಕಿ ಬಾಗಿಲಿನ ಪರದೆಗಳಿಗೆ ಹಾಕಿದೆ ಕೈ ಕಸೂತಿಗಳು, ಗೋಡೆಯಲ್ಲಿ ಬಿಡಿಸಿದ ವರ್ಣಮಯ ನಮಿಲುಗಳೂ ಆ ಮನೆಯ ಹೆಣ್ಣುಮಗಳು ಎಷ್ಟು ಕ್ರಿಯಾಶೀಲತೆಯನ್ನು, ಕೌಶಲ್ಯವನ್ನು ಹೊಂದಿದ್ದಳೆAದು ಹೇಳುತ್ತಿದ್ದವು. ನಾನು ಚಿಕ್ಕವಳಿರುವಾಗ ಓದಿದ್ದು ಮೈಸೂರಿನ ಕಾನ್ವೆಂಟ್ ಶಾಲೆಯಲ್ಲಿ ಆಗ ನಮ್ಮ ಶಾಲೆಗೆ ರಷ್ಯಾದ ಅತಿಥಿಗಳು ಬಂದಾಗ ನಾನು ಧರಿಸಿದ್ದು ‘’ಎಲೈನ್ ಫ್ರಾಕ್’’ ಅದನ್ನು ಹೊಲಿದ್ದದ್ದು ನನ್ನಮ್ಮ ಅದರ ವಿಶಿಷ್ಠ ರೀತಿಯ ವಿನ್ಯಾಸಕ್ಕೆ ರಷ್ಯಾದ ಅತಿಥಿಗಳು ಮಾರಿಹೋಗಿದ್ದರು. ಎಂಬ ಘಟನೆಯನ್ನು ನೆನಪಿಸಿಕೊಳ್ಳತ್ತಾ, ಹೆಣ್ಣು ಬರೀ ಮಗುವನ್ನಷ್ಟೇ ಅಲ್ಲ ವಿನ್ಯಾಸಗಳನ್ನು ಸೃಷ್ಠಿಸಬಲ್ಲಳು. ಸಂಬAಧಗಳನ್ನು ಹೆಣೆಯುವವಳು, ಹೊಸೆಯುವವಳು ಹೆಣ್ಣು, ಇಲ್ಲಿ ನಿಮಗೆ ಸಿಗುವ ಟೈಲರಿಂಗ್ ಕೌಶಲ್ಯವನ್ನು ಕಾಲಕ್ಕನುಗುಣವಾಗಿ ಬೇಕಾದ ವಿನ್ಯಾಸಗಳನ್ನು ರೂಪಿಸುವುದ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದರೆ ನಿಮ್ಮ ಜೀವನ ಕಟ್ಟಿಕೊಳ್ಳಬಹುದು. ಟೈಲರಿಂಗ್ ವೃತ್ತಿಯನ್ನು ಮಾಡುತ್ತಿರುವ ಎಷ್ಟೋ ತಾಯಂದಿರು ಮಕ್ಕಳನ್ನು ವೈದ್ಯರನ್ನಾಗಿ ಮಾಡಿರುವÀವರನ್ನು ನಾನು ನೋಡಿದ್ದೇನೆ. ಎಂದು ವೈದರಾದರೂ ಟೈಲರಿಂಗ್ ವೃತ್ತಿಯ ಬಗ್ಗೆ ಹಲವಾರು ಟಿಪ್ಸ್ ಗಳನ್ನು ನೀಡಿದರು. ನಂತರ ಮಹಿಳೆಯರು ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು, ಎಂದು ಹೇಳುವುದರ ಮೂಲಕ ವಿದ್ಯಾರ್ಥಿಗಳ ಆರೋಗ್ಯ ಸಂಬAಧಿ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹಲವಾರು ಸಲಹೆ ಸೂಚನೆಗಳನ್ನು ಕೊಟ್ಟರು.
ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ
Leave a comment
Leave a comment