ತುಮಕೂರು: ಇತ್ತೀಚಿನ ದಿನಗಳಲ್ಲಿ ಜಾಗತೀಕರಣಗೊಂಡು ಜಗತ್ತು ಒಂದು ಹಳ್ಳಿಯಂತಾಗಿರುವ ಇಪ್ಪತ್ತೊಂದನೆಯ ಶತಮಾನದಲ್ಲಿ ಮಕ್ಕಳಿಗೆ ಭಾರತೀಯ ಜೀವನ ಮೌಲ್ಯಗಳ ಜೊತೆಗೆ, ಇಪ್ಪತ್ತೊಂದನೆಯ ಶತಮಾನದ ಕೌಶಲ್ಯಗಳನ್ನು ಶಾಲೆಗಳಲ್ಲಿ ಕಲಿಸಬೇಕಾಗಿದೆ ಎಂದು ರೋಟರಿ ತುಮಕೂರು ಪೂರ್ವ ಸಂಸ್ಥೆಯ ಅಧ್ಯಕ್ಷರಾದ ರೊ.ಚೆನ್ನಬಸವಪ್ರಸಾದ್ ರವರು ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಕಾಡಶೆಟ್ಟಿಹಳ್ಳಿಯ ಪಿ.ಎಂ.ಶ್ರೀ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರಿಗೆ ನೇಷನ್ ಬಿಲ್ಡರ್ ಅವಾರ್ಡ್ ನೀಡಿ ಗೌರವಿಸಿ ಮಾತನಾಡುತ್ತಿದ್ದರು. ಕಾಡಶೆಟ್ಟಿಹಳ್ಳಿಯ ಶಾಲೆಯ ಶಿಕ್ಷಕರು ಬೇರೆ ಶಾಲೆಗಳಂತೆ ಕೇವಲ ಬೋಧನೆ, ಕಂಠಪಾಠ ಮಾಡಿಸುವುದು, ಪರೀಕ್ಷೆ ಬರೆಸಿ ಅಂಕ ನೀಡುವ ಹಳೆಯ ವಿಧಾನವನ್ನು ಬದಿಗೆ ಸರಿಸಿ, ಇಂದಿನ ಶತಮಾನಕ್ಕೆ ಬೇಕಾದ ಜೀವನಮೌಲ್ಯಗಳನ್ನು ಮತ್ತು ಕೌಶಲ್ಯಗಳನ್ನು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಬೋಧಕರಾಗದೆ ಸುಗಮಕಾರರಾಗಿ ಮಕ್ಕಳಿಗೆ ಮಾರ್ಗದರ್ಶನ ಮಾಡುವ ಮೂಲಕ ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತಿರುವುದು ಪ್ರಶಂಸನೀಯ ಎಂದು ತಿಳಿಸಿದರು. ಹಾಗೂ ಶಾಲೆಯು ಪಿ.ಎಂ.ಶ್ರೀ. ಶಾಲೆಯಾಗಿ ಆಯ್ಕೆಯಾಗಿರುವುದು ಶಾಲೆಯ ಅಭಿವೃದ್ಧಿ ಸಮಿತಿ, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಒಗ್ಗೂಡಿದ ಪ್ರಯತ್ನದ ಫಲವಾಗಿದೆ, ಇದನ್ನು ಎಲ್ಲಾ ವಿದ್ಯಾಸಂಸ್ಥೆಗಳು ಅಳವಡಿಸಿಕೊಂಡರೆ ದೇಶದ ಶೈಕ್ಷಣಿಕ ಪ್ರಗತಿಯಾಗಲಿದೆ ಎಂದು ತಿಳಿಸಿದರು.
ಪಿ.ಎಂ.ಶ್ರೀ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಾಲೆಯ ಮುಖ್ಯಶಿಕ್ಷಕರಾದ ಶ್ರೀದಕ್ಷಿಣಾಮೂರ್ತಿರವರು ಮಾತನಾಡುತ್ತಾ ಶಾಲೆಯ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶಿಕ್ಷಕರ ಚೈತನ್ಯವನ್ನು ಹಾಗೂ ಬದ್ಧತೆಯನ್ನು ಹೆಚ್ಚು ಮಾಡಿದೆ ಅದಕ್ಕಾಗಿ ರೋಟರಿ ಪೂರ್ವ ಸಂಸ್ಥೆಗೆ ಶಾಲೆಯ ಎಲ್ಲಾ ಶಿಕ್ಷಕರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು. ಶಾಲೆಯಲ್ಲಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ಶಿಕ್ಷಕಿಯಾದ ನೀಲಾವತಿಯವರು ಮಾತನಾಡುತ್ತಾ ಕಾಡಶೆಟ್ಟಿಹಳ್ಳಿಯ ಈ ಮಾದರಿ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡಿದ ದಿನಗಳು ನನ್ನ ಜೀವನದ ಅವಿಸ್ಮರಣೀಯ ದಿನಗಳು ಎಂದು ನೆನಪಿಸಿಕೊಂಡರು.
ಶತಮಾನದ ಕೌಶಲ್ಯಗಳನ್ನು ಶಾಲೆಗಳಲ್ಲಿ ಕಲಿಸಬೇಕಾಗಿದೆ

Leave a comment
Leave a comment


