ಸುಮಾರು ೨೦ಕ್ಕೂ ಹೆಚ್ಚು ಬೇಡಿಕೆಗಳನ್ನು ಮುಂದಿಟ್ಟು ಇಡೀ ರಾಷ್ಟçದಾದ್ಯಂತ ಎಲ್ಲಾ ರಾಜಭವನಗಳ ಮುಂದೆ ನವೆಂಬರ್ ೨೬ರಿಂದ ೨೮ರವರೆಗೆ ಮಹಾಧರಣಿ ನಡೆಸಲು ತೀರ್ಮಾನಿಸ ಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು, ರೈತರು,ಜನಸಾಮಾನ್ಯರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಎಐಟಿಯುಸಿಯ ಕಂಬೇಗೌಡ ಮಾತನಾಡಿ,ಒಕ್ಕೂಟ ಸರಕಾರ ೨೦೧೮ರಲ್ಲಿ ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದ ಕರಾಳ ಕೃಷಿ ಕಾಯ್ದೆಗಳ ವಿರುದ್ದ ದೆಹಲಿಯಲ್ಲಿ ಸುಮಾರು ೧೩ ತಿಂಗಳ ನಿರಂತರ ಹೋರಾಟಕ್ಕೆ ಮಣಿದು ಕೇಂದ್ರ ಸರಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದೆ.ಆದರೆ ಎಂ.ಎಸ್.ಪಿ ಮತ್ತು ವಿದ್ಯುತ್ ಖಾಸಗೀಕರಣ ಕಾಯ್ದೆ ಬಗ್ಗೆ ನೀಡಿದ ಭರವಸೆ ಯನ್ನು ಈಡೇರಿಸಿಲ್ಲ.ಅಲ್ಲದೆ ರಾಜ್ಯದಲ್ಲಿ ಜಾರಿಯಲ್ಲಿರುವ ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿಲ್ಲ. ಕಾರ್ಪೋರೇಟ್ ಕೃಷಿ ಕಾಯ್ದೆಯಿಂದಾಗಿ ರೈತ ಸಾಲದ ಸುಳಿಗೆ ಸಿಲುಗಿ ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾನೆ.ಕಾರ್ಮಿಕ ಕಾಯ್ದೆಗಳ ರದ್ದು, ಕಾರ್ಮಿಕ ಸಂಹಿತೆಗಳಿAದ ಕೃಷಿ ಕೂಲಿಕಾರರು,ಅಸಂಘಟಿತ ಕಾರ್ಮಿಕರು ಸಾಮಾಜಿಕ ಭದ್ರತೆಯಿಲ್ಲದೆ ಸಂಕಷ್ಟಕ್ಕೆ ಗುರಿಯಾಗಿದೆ.ಬೀಡಿ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ.ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊAಡು ಜೆಸಿಟಿಯು ೭೨ ಗಂಟೆಗಳ ನಿರಂತರ ಹೋರಾಟಕ್ಕೆ ಕರೆ ನೀಡಿದೆ. ಇದನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಸಿಐಟಿಯುನ ಎ.ಲೋಕೇಶ್ ಮಾತನಾಡಿ,ಕೇಂದ್ರದ ಬಿಜೆಪಿ ಸರಕಾರ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು,ತನ್ನಪರ ಇರುವ ಉದ್ದಿಮೆದಾರರಿಗೆ ತೊಂದರೆಯಿಲ್ಲದೆ ಮಾಡಲು ಜಾತಿ,ಧರ್ಮ,ಭಾಷೆ ಇನ್ನಿತರ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಕೊಂಡು ಜನರ ನಡುವೆ ವಿಷ ಬೀಜ ಬಿತ್ತಿ, ಜನರ ಮನಸ್ಸನ್ನು ಬೇರೆಡೆ ಕೇಂದ್ರೀಕರಿಸುವAತೆ ಮಾಡುತ್ತಿದೆ.ಜನರು ಅನುಭವಿಸುತ್ತಿರುವ ನೈಜ ಸಮಸ್ಯೆಗಳನ್ನು ಸರಕಾರಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳವ ನಿಟ್ಟಿನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಜೆಸಿಟಿಯು ಕರೆ ನೀಡಿ ೭೨ ಗಂಟೆಗಳ ಆಹೋರಾತ್ರಿ ಮಹಾಧರಣಿ ತುಮಕೂರು ಜಿಲ್ಲೆಯಿಂದ ಹೆಚ್ಚು ಜನರು ಪಾಲ್ಗೊಂಡು ಸರಕಾರಕ್ಕೆ ಬಿಸಿ ಮುಟ್ಟಿಸಬೇಕೆಂದು ಮನವಿ ಮಾಡಿದರು.
ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ, ಕರ್ನಾಟಕ ಸರಕಾರ ಜಾರಿಗೆ ತಂದು ಭೂಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಮಸೂದೆ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆಗಳನ್ನ ವಾಪಸ್ ಪಡೆಯುವುದು.ಮಾಸಿಕ ೨೬೦೦೦ ರೂಗಳ ಕನಿಷ್ಠ ವೇತನ,ಕಾರ್ಪೋರೇಟ್ ಪೂರಕ ಫಸಲ್ ಭೀಮಾ ಯೋಜನೆ ರದ್ದು ಮಾಡಿ,ಎಲ್ಲಾ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ಒಳಪಡಿಸುವುದು, ರೈತ ಹೋರಾಟಗಾರರ ಮೇಲಿನ ಕೇಸುಗಳನ್ನು ಹಿಂಪಡೆಯುವುದು ಸೇರಿದಂತೆ ಹಲವಾರು ವಿಷಯಗಳನ್ನು ಧರಣಿಯನ್ನು ಚರ್ಚಿಸಲಾಗುವುದು.ಎಲ್ಲಾ ವರ್ಗದ ಕಾರ್ಮಿಕರು, ರೈತರು,ವಿದ್ಯಾರ್ಥಿಗಳು, ಯುವಜನರು ಮಹಾಧರಣದಲ್ಲಿ ಪಾಲ್ಗೊಂಡು ಯಶಸ್ವಿ ಮಾಡಬೇಕೆಂದು ಎಐಯುಟಿಯುಸಿಯ ಮಂಜುಳ ಕೋರಿದರು.