ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೀಡಬೇಕಾದ ಹಣವನ್ನು ನೀಡುತ್ತಿಲ್ಲ. ಕೇಂದ್ರವು ಬಿ.ಜೆ.ಪಿ ಯೇತರ ರಾಜ್ಯ ಸರ್ಕಾರಗಳ ವಿರುದ್ದ ಪಕ್ಷಪಾತದಿಂದ ವರ್ತಿಸುತ್ತಿದೆ.ಇದು ರಾಜ್ಯಗಳ ಹಕ್ಕುಗಳ ಸಮಸ್ಯೆ ಮತ್ತು ಮನೋಭವದ ಉಲ್ಲಂಘನೆೆಯಾಗುತ್ತದೆ ಎಂದರು. ಒಕ್ಕೂಟ ವ್ಯವಸ್ಥೆ ಎಂಬುದು ಭಾರತೀಯ ಸಂವಿಧಾನದ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ ಹಾಗಾಗಿ ಭಾರತದ ಐಕ್ಯತೆ -ಸಮಗ್ರತೆಗೆ ದಕ್ಯೆ ತರುತ್ತದೆ ಆದ್ದರಿಂದ ಭಾರತವನ್ನು ಪ್ರೀತಿಸುವ ಜನತೆ ಪ್ರಶ್ನಿಸಬೇಕೆಂದರು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಪ್ರಕಾಶ್ ಮತಾನಾಡಿದರು.
ಕೇಂದ್ರ ಭಾರತ ಸಂವಿಧಾನದAತೆ ದೇಶದಾದ್ಯಂತ ಒಕ್ಕೂಟವಾದಿ ಸ್ವರೂಪವನ್ನು ಬಲಗೂಳಿಸಲು ಈಗ ಒಕ್ಕೂಟ ಸರರ್ಕಾರ ರಾಜ್ಯ ಸರರ್ಕಾರಗಳ ಮೇಲೆ ಅಧಿಕಾರ ದುರುಪಯೋಗ ಹಾಗೂ ಹಸ್ತ ಕ್ಷೇಪದ ಮೂಲಕ ಒಕ್ಕೂಟವಾದಿ ಸ್ವರೂಪಕ್ಕೆ ಭಂಗ ಉಂಟು ಮಾಡವುದನ್ನು ಈ ಕೂಡಲೆ ನಿಲ್ಲಿಸುವಂತೆ ಭಾರತ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸವಾದಿ) ತುಮಕೂರು ಜಿಲ್ಲಾ ಸಮಿತಿಯು ಕರ್ನಾಟಕ ಹಾಗೂ ಕೇರಳ ಸರರ್ಕಾರಗಳು ಒಕ್ಕೂಟ ಸರ್ಕಾರಗಳಿಗೆ ಕಿರುಕುಳ ಹಾಗೂ ತಾರತಮ್ಯ ನೀತಿಯ ವಿರುದ್ದ ನೆನ್ನೆ ಮತ್ತು ಇಂದು ನವದೆಹಲಿಯಲ್ಲಿ ನಡೆಸುತ್ತಿರುವ ಹೋರಾಟವನ್ನು ಬೆಂಬಲಸಿ ದಿನಾಂಕ: 8-2-2024 ರಂದು ಜಿಲ್ಲಾಧಿಕಾರಿಗಳ ಕಛೇರಿ ಎದರು ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು.
ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಉಮೇಶ ಮತಾನಾಡುತ್ತಾ.ಕೇಂದ್ರವು ರಾಜ್ಯಗಳಿಂದ ರಚನೆಯಾಗಿರುವುದರಿಂದ ರಾಜ್ಯಗಳನ್ನು ಬೆಂಬಲಿಸಿದರೆ ಮಾತ್ರ ಬಲಿಷ್ಟ ಭಾರತ ದೇಶ ಸಾಧ್ಯ ಅದರೆ ಬಿ.ಜೆ.ಪಿ ಸರ್ಕಾರವು ಎಲ್ಲಾ ಸಂಪನ್ಮೂಲಗಳನ್ನು ಮತ್ತು ಅಧಿಕಾರಗಳನ್ನು ಕೇಂದ್ರ ಸರ್ಕಾರದಲ್ಲಿ ಕೇಂದ್ರಿಕರಿಸುವುದು ಅಸಾಂವಿಧಾನಿಕವಾಗಿದೆ ಎಂದರು. ಒಂದು ದೇಶ-ಒಂದು ಕಾನೂನು,ಒಂದು ದೇಶ-ಒಂದು ಭಾಷೆ,ಒಂದು ದೇಶ-ಒಂದು ಚುನಾವಣೆ ಎಂದು ಕೇಂದ್ರಿಕರಿಸಲು ಪ್ರುತ್ನಿಸುತ್ತಿದೆ ಈ ವಿಚಾರಗಳನ್ನು ಸಂಘಟಿತ ಜನಾಂದೋಲನಗಳ ಮೂಲಕ ಎದುರಿಸಬೇಕು ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮುಜೀಬ್,ಜಿಲ್ಲಾ ಕಾರ್ಯದರ್ಶಿ ಎನ.ಕೆ.ಸುಬ್ರಮಣ್ಯ,ಜಿಲ್ಲಾ ಸಮಿತಿ ಶಂಕರಪ್ಪ,ನಗರ ಸಮಿತಿ ಸದಸ್ಯ ಖಲೀಲ್,ಇಂತಿಯಾಜ್ ,ನಾಗರಾಜು,ಜನವಾದಿಮಹಿಳಾ ಸಂಘಟನೆಯ ಕಲ್ಪನಾ,ರಾಜಮ್ಮ,ಪವಿತ್ರ, ರೈತ ಮುಖಂಡರಾದ ದುಡ್ಡನಂಜಯ್ಯ,ಬಸವರಾಜು,ನಾಗರಾಜು,ಗೀರಿಶ್,ಮುತ್ತರಾಜು,ನಾಗರಾಜು,ಸಿದ್ದರಾಜು,ಖಮರುದ್ದೀನ್,ಮಾರುತಿಪ್ರಸನ್ನ, ಸಾಧಿಕ್,ನವಜಾ ಮುತಂದವರು ಭಾಗವಹಿಸಿದ್ದರು.