ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ದಿನದಂದು ಶಹಾಬಾದ್ ನಲ್ಲಿ ಎಲ್ಲಿ ನೋಡಿದರಲ್ಲಿ ರಾಮನ ಭಾವಚಿತ್ರ ಇಟ್ಟು ಪ್ರಸಾದ ಹಂಚುವುದು ಸಾಮಾನ್ಯವಾಗಿ ಎಲ್ಲಾ ಕಡೆ ಸಂಭ್ರಮದಿಂದ ಭಕ್ತರು ಆಚರಿಸಿದರು.
ಹನುಮಾನ್ ನಗರ ಮಂದಿರದಲ್ಲಿ, ಬಸವೇಶ್ವರ ವೃತ್ತ, ಶ್ರೀರಾಮ್ ಚೌಕ್ ಭಾರತ್ ಚೌಕ್, ವಿಪಿ ಚೌಕ್, ಸೇರಿದಂತೆ ಹಲವಾರು ಬಡಾವಣೆಗಳಲ್ಲಿ, ಗಲ್ಲಿಗಳಲ್ಲಿ ಸಣ್ಣಪುಟ್ಟ ಮಂದಿರಗಳಲ್ಲಿ ಸಂಭ್ರಮವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ವಿಜಯಕುಮಾರ್ ವರ್ಮಾ ಜಯಶ್ರೀ ಮತ್ತಿಮೂಡ್ ಅಶೋಕ ದಂಡಗೂಲ್ಕರ್, ಶರಣು ಸನಾದಿ ಲೋಹಿತ್ ಕಟ್ಟಿ, ಚಂದ್ರಕಾಂತ್ ಪರ್ತಾಬಾದ್, ಮಲ್ಲು ಇಂಗಳಗಿ, ಸುನಿಲ್ ಸನಾದಿ ಅಮರ್ನಾಥ್ ನಾಗನೂರ್ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.