ತುಮಕೂರು:ಜಾತಿಯತೆ,ಮೂಢನಂಬಿಕೆ,ಅಸಮಾನತೆ ತುಂಬಿ ತುಳುಕುತಿದ್ದ ೧೨ನೇ ಶತಮಾನದಲ್ಲಿ ಕಾಯಕ ಸಮಾಜಗಳಿಗೆ ಜಗತ್ತಿನ ಮೊದಲ ಸಂಸತ್ತ್ ಅನುಭವ ಮಂಟಪದಲ್ಲಿ ದೊರೆತ ಮನ್ನಣೆ,ಇಂದಿನ ೨೧ನೇ ಶತಮಾನದ ಕಂಪ್ಯೂಟರ್, ರಾಕೇಟ್ ಯುಗದಲ್ಲಿ ದೊರೆಯುದಿರುವುದು,ಜಾತಿಯತೆ ಸಮಾಜದಲ್ಲಿ ಇದೆ ಎಂಬುದಕ್ಕೆ ಸಾಕ್ಷಿ ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ಕುಮಾರ್ ಕೊತ್ತಗೆರೆ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು,ಅಖಿಲ ಕರ್ನಾಟಕ ಕುಳುವ ಮಹಾಸಂಘ(ರಿ) ಇದರ ಸಹಯೋಗದಲ್ಲಿ ಆಯೋಜಿಸಿದ್ದ ಶಿವಶರಣ ಶ್ರೀ ನುಲಿ ಚಂದಯ್ಯ ಅವರ ೯೧೬ ಜಯಂತಿ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದ ಅವರು,ಅಂದು ಬಸವಣ್ಣವರು ಅನುಭವ ಮಂಟಪದಲ್ಲಿದ್ದ ೭೭೦ ಗಣಗಳಲ್ಲಿ,೬೬೦ ಕಾಯಕ ಸಮಾಜಕ್ಕೆ ಸೇರಿದ ಸಮುದಾಯಗಳಿಗೆ ಅವಕಾಶ ಕಲ್ಪಿಸಿದ್ದರು.ಅಲ್ಲದೆ ೯೦ ಮಹಾಗಣಗಳಲ್ಲಿ ಮದಾರ ಚನ್ನಯ್ಯ,ಹಡಪದ ಅಪ್ಪಣ್ಣ,ಮಡಿವಾಳ ಮಾಚಿದೇವರು ಸೇರಿದಂತೆ ಶೋಷಿತ ಸಮುದಾಯಗಳಿಗೆ ಹೆಚ್ಚಿನ ಪ್ರಾಧ್ಯಾನತೆ ನೀಡಿದ್ದರು.ಆದರೆ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಯಕ ಸಮಾಜಗಳಿಗೆ ರಾಜಕೀಯ ಪ್ರಾತಿನಿಧ್ಯವೇ ಇಲ್ಲದಂತಾಗಿದೆ.ಭೌತಿಕವಾಗಿ ರಸ್ತೆ,ಕಟ್ಟಡಗಳು ಬಂದಿವೆಯೋ ಹೊರತು,ಸಾಮಾಜಿಕವಾಗಿ ಯಾವುದೇ ಬದಲಾವಣೆಯಾಗಿಲ್ಲ ಎಂದರು.
ಬಸವಣ್ಣನವರ ಅನುಭವ ಮಂಟಪದ ಭಾಗವಾಗಿದ್ದ ಎಲ್ಲಾ ಕಾಯಕ ಸಮಾಜದ ಶರಣರೂ ಸಹ ಕಾಯಕದಿಂದಲೇ ಮುಕ್ತಿ ಎಂದು ನಂಬಿದ್ದರು.ಹಾಗೆಯೇ ನಡೆದುಕೊಂಡರು.ಸ್ವಾಮೀಜಿಯಾದರೂ ಕಾಯಕದಿಂದಲೇ ತಿನ್ನಬೇಕೆಂಬ ನಿಯಮವಿತ್ತು. ಆದರೆ ಇಂದು ಧಾರ್ಮಿಕ ಗುರುಗಳೆಂದರೆ ಕೇವಲ ಭೋಧನೆ, ಪ್ರವಚನಗಳಿಗೆ ಮಾತ್ರ ಸಿಮೀತವಾಗಿದ್ದಾರೆ.ಸಾಮಾಜಿಕ ಬದಲಾವಣೆ ಎಂಬುದು ನಿಂತ ನೀರಲ್ಲ.ರಾಜ್ಯದಲ್ಲಿ ಸುಮಾರು ೧೨ರಿಂದ ೧೫ ಲಕ್ಷ ಜನಸಂಖ್ಯೆ ಹೊಂದಿರುವ ಕುಳುವ ಸಮಾಜ ಒಗ್ಗೂಡಿ ನಿಂತರೇ,ನಮ್ಮನ್ನು ತಿರಸ್ಕಾರದಿಂದ ನೋಡುತ್ತಿರುವ ಇದೇ ರಾಜಕಾರಣಿಗಳು,ನಮ್ಮ ಕಾಲ ಬುಡದಲ್ಲಿ ಇರುತ್ತಾರೆ.ಹಾಗಾಗಿ ಕುಳುವ ಸಮಾಜಕ್ಕೆ ಸೇರಿದ ಕೊರವ, ಕೊರಮ ಸಮಾಜಗಳಲ್ಲಿ ಒಗ್ಗೂಡುವ ಅಗತ್ಯವಿದೆ ಎಂದು ಕಿರಣ್ಕುಮಾರ್ ಕೊತ್ತಗೆರೆ ನುಡಿದರು.
ಜಾತಿಯತೆ,ಮೂಢನಂಬಿಕೆ,ಅಸಮಾನತೆ ತುಂಬಿ ತುಳುಕುತಿದ್ದ
Leave a comment
Leave a comment