ತುಮಕೂರು.ಜು.21:ವೃತ್ತಿ ಮತ್ತು ಉದ್ಯೋಗ ಇವುಗಳ ನಡುವೆ ಸಾಕಷ್ಟು ವೆತ್ಯಾಸಗಳಿದ್ದು,ಜಾಗತೀಕರಣ, ಉದಾರೀಕರಣದಿಂದ ಇವುಗಳ ನಡುವೆ ಸಾಕಷ್ಟು ವೆತ್ಯಾಸಗಳು ಕಂಡು ಬರುತ್ತೇವೆ. ವೃತ್ತಿ ಸಂಪೂರ್ಣವಾಗಿ ಮೈಂಡ್ಸೆಟ್ಗೆ ಸಂಬoಧಿಸಿದ್ದಾಗಿದೆ ಎಂದು ಬೆಂಗಳೂರಿನ ಎಂ.ಎಸ್.ಆರ್.ಐ.ಟಿಯ ಮಾಜಿ ನಿರ್ದೇಶಕಿ ಡಾ.ಸವಿತಾರಾಣಿ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರು ತಾಲೂಕು ಲಿಂಗಾಪುರದಲ್ಲಿರುವ ಅಕ್ಷಯ ಇಂಜಿನಿಯರಿoಗ್ ಕಾಲೇಜಿನ ಎಐಸಿಟಿಇ ಸಹಯೋಗದಲ್ಲಿ ಆಯೋಜಿಸಿದ್ದ ಬೋಧನ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ಬೋಧಕರು ತಮ್ಮಲ್ಲಿರುವ ವಿದ್ಯಾರ್ಥಿಗಳ ಕಲಿಕೆಯ ಪ್ರಮಾಣವನ್ನು ಸರಿಯಾಗಿ ಗುರುತಿಸಿ,ಅವರನ್ನು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಯಾರು ಮಾಡುವ, ಅವರಲ್ಲಿ ಕೌಶಲ್ಯ ಬೆಳೆಸುವ ನಿರಂತರ ಪ್ರಯತ್ನ ಮಾಡಬೇಕಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ನಾಲ್ಕು ಗೋಡೆಗಳ ನಡುವೆ ಮಾಡುವ ಪಾಠಕ್ಕಿಂತ,ಪ್ರಾಯೋಗಿಕವಾಗಿ ಇಂದಿನ ಜಗತ್ತಿನ ಹೊಸ ಬದಲಾವಣೆಗಳು,ಸಂಶೋಧನೆಗಳ ಪರಿಚಯದ ಜೊತೆಗೆ, ಸಮಾಜದ ಅಗತ್ಯತೆಗಳೇನು,ಅವುಗಳನ್ನು ನಾವು ಹೇಗೆ ತುಂಬಬಹುದು ಎಂಬ ಅರಿವನ್ನು ಮೂಡಿಸುವ ಕೆಲಸ ಎಲ್ಲಾ ಹಂತದ ಶಿಕ್ಷಕರು ಮಾಡಬೇಕಾಗಿದೆ ಇಂದಿನ ಬಹುಮುಖ್ಯ ಚರ್ಚೆಯಾಗಿರುವ ಸೈಬರ್ ಕ್ರೈಮ್ ಬಗ್ಗೆ ಯುವಜನರು, ಅದರಲ್ಲಿಯೂ ಇಂಜಿನಿಯರಿoಗ್ ಪದವಿಧರರನ್ನು ಎಚ್ಚರಿಸಬೇಕಾಗಿದೆ.ದಿನಕ್ಕೊಂದು ಸ್ವರೂಪದಲ್ಲಿರುವ ಇದನ್ನು ಟ್ಯಾಕಲ್ ಮಾಡುವುದು ಹೇಗೆ ಎಂಬ ಜ್ಞಾನವನ್ನು ಪದವಿಧರರಲ್ಲಿ ತುಂಬಬೇಕಾಗಿದೆ. ಇದರ ಜೊತೆಗೆ, ಹೊಸ ತಂತ್ರಜ್ಞಾನಗಳ ಬೆಳವಣಿಗೆಯ ಮಾಹಿತಿ ಸಹ ಅಗತ್ಯವೆಂದು ಡಾ.ಸವಿತಾರಾಣಿ ನುಡಿದರು.
ಬೆಂಗಳೂರಿನ ಮಣಿಪಾಲ್ ಇನ್ಸಿಟ್ಯೂಟ್ ಅಫ್ ಟೆಕ್ನಾಲಜಿಯ ಆಸೋಸಿಯೇಟ್ ಪ್ರೊಫೆಸರ್ ಡಾ.ಗುರುರಾಜ್ ಹೆಚ್.ಎಲ್. ಮಾತನಾಡಿ,ಸೈಬರ್ ಅಪರಾಧಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಇವುಗಳನ್ನು ಪತ್ತೆ ಹೆಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.ಸಮವಸ್ತçದಲ್ಲಿದ್ದ ಪೊಲೀಸರಾಗಿ ಇಂಜಿನಿಯರಿoಗ್ ಕ್ಷೇತ್ರ ಕೆಲಸ ಮಾಡಬೇಕಾಗಿದೆ.ಹತ್ತಾರು ವರ್ಷದ ಅನುಭವದ ಅಗತ್ಯವಿಲ್ಲ.ನೆಟ್ವರ್ಕ್ ಬಗ್ಗೆ ಸಮಗ್ರ ತಿಳುವಳಿಕೆ ಇದ್ದರೆ ಸಾಕು.ಇಂತಹ ಅನೇಕ ಪ್ರಕರಣಗಳನ್ನು ಭೇಧಿಸಬಹುದು. ಎ.ಐ(ಕೃತಕ ಬುದ್ದಿಮತ್ತೆ) ಇಂದು ಬಹು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ. ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿವೆ.ನಿಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಈ ಕ್ಷೇತ್ರವನ್ನು ಪ್ರವೇಶಿಸಿದರೆ, ಇನ್ನೂ ಹತ್ತಾರು ವರ್ಷಗಳ ಕಾಲ ವೃತ್ತಿಪರತೆಯನ್ನು ಕಾಣಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಇನ್ಸಿಟ್ಯೂಟ್ ಅಫ್ ಟೆಕ್ನಾಲಜಿ ಅಧ್ಯಕ್ಷರಾದ ಡಾ.ಶಿವಕುಮಾರ್ ಕೆ.ಎಸ್. ಮಾತನಾಡಿ,ಎಐಸಿಟಿಯು ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಸೆಮಿನಾರ್ ನಮ್ಮ ಬೋಧಕ ವರ್ಗಕ್ಕೆ ಭವಿಷ್ಯದಲ್ಲಿ ಮತ್ತಷ್ಟು ವೃತ್ತಿಪರತೆಯನ್ನು ತಂದುಕೊಡಲಿದೆ.ಸೈಬರ್ ಕ್ರೆöÊಮ್ ಹೆಚ್ಚಾದಂತೆ ಅದನ್ನು ಪತ್ತೆ ಹಚ್ಚುವ ಪೊಲೀಸರ ಸಂಖ್ಯೆಯೂ ಹೆಚ್ಚಾಗಲಿದೆ.ಈ ಕೆಲಸವನ್ನು ಸರಕಾರ ಇಂತಹ ಕಾರ್ಯಕ್ರಮಗಳ ಮೂಲಕ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಣಿಪಾಲ್ ಇನ್ಸಿಟ್ಯೂಟ್ ಅಫ್ ಟೆಕ್ನಾಲಜಿಯ ಅಸೋಸಿಯೆಟ್ ಪ್ರೊಫೆಸರ್ ಡಾ.ಶ್ರೇಯಸ್.ಜೆ,ಎeಟಿ ಕಾರ್ಯದರ್ಶಿ ಡಾ.ಶೋಭಾ,ಕಾರ್ಯಕ್ರಮದ ಸಂಯೋಜಕರಾದ ರಾಕೇಶ್.ಎಸ್, ಸಹ ಸಂಯೋಜಕರಾದ ಡಾ.ನಾಜಿಯ ಸುಲ್ತಾನ್, ಕಾರ್ಯಕ್ರಮದ ಮುಖ್ಯಸ್ಥರಾದ ಡಾ.ಪುಷ್ಪ.ಆರ್, ಪ್ರಾಂಶುಪಾಲರಾದ ಡಾ.ಯತೀಶ್.ಎಲ್. ಉಪಸ್ಥಿತರಿದ್ದರು.
ವೃತ್ತಿ ಸಂಪೂರ್ಣವಾಗಿ ಮೈಂಡ್ಸೆಟ್ಗೆ ಸಂಬoಧಿಸಿದ್ದಾಗಿದೆ

Leave a comment
Leave a comment


