ತುಮಕೂರು- ಇಲ್ಲಿನ ಮಂಜುನಾಥ ನಗರದಲ್ಲಿ ನೂತನವಾಗಿ ಆರಂಭಿಸಲಾಗಿರುವ ಕೆನರಾ ಬ್ಯಾಂಕ್ನ 51ನೇ ನೂತನ ಶಾಖೆಯನ್ನು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ಅವರು ಉದ್ಘಾಟಿಸಿದರು.
ನೂತನ ಶಾಖೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಕೆನರಾ ಬ್ಯಾಂಕ್ ತುಂಬಾ ಹಳೆಯ ಬ್ಯಾಂಕ್ ಆಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ. ಇಂದು ಮಂಜುನಾಥ ನಗರದಲ್ಲಿ ತನ್ನ 51ನೇ ಶಾಖೆಯನ್ನು ತೆರೆದಿದೆ. ಇದು ಹೀಗೆ ಮುಂದುವರೆದು ಮುಂದಿನ ದಿನಗಳಲ್ಲಿ 100 ಶಾಖೆಗಳನ್ನು ತೆರೆಯಲಿ ಎಂದು ಆಶಿಸಿದರು.
ಕೆನರಾ ಬ್ಯಾಂಕ್ ಸಹಾಯಕ ಮಹಾಪ್ರಬಂಧಕರಾದ ರವಿ ಮಾತನಾಡಿ, ತುಮಕೂರಿನ ಮಂಜುನಾಥ್ ನಗರದಲ್ಲಿ ನಮ್ಮ ಬ್ಯಾಂಕ್ನ 51ನೇ ಶಾಖೆಯನ್ನು ತೆರೆಯಲಾಗಿದೆ. ಈ ಭಾಗದಲ್ಲಿ ಯಾವುದೇ ಬ್ಯಾಂಕ್ ಇಲ್ಲದಿರುವುದರಿಂದ ಗ್ರಾಹಕರ ಅನುಕೂಲಕ್ಕಾಗಿ ನೂತನ ಶಾಖೆಯನ್ನು ತೆರೆದಿರುವುದು ಸಂತಸ ತಂದಿದೆ ಎಂದರು.
ಜನರಿಗೆ ತ್ವರಿತವಾದ ಸೇವೆ ನೀಡುವ ಸಲುವಾಗಿ ಕೆನರಾ ಬ್ಯಾಂಕ್ ಶ್ರಮಿಸುತ್ತಿದೆ. ಗ್ರಾಹಕರ ಪ್ರೋತ್ಸಾಹ ಹಾಗೂ ಸಹಕಾರದೊಂದಿಗೆ ಬ್ಯಾಂಕ್ ಇಷ್ಟು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು.
ಕೆನರಾ ಬ್ಯಾಂಕ್ನಲ್ಲಿ 7500 ಕೋಟಿ ವ್ಯವಹಾರ ನಡೆಯುತ್ತಿದೆ. ಮಾರ್ಚ್ ಅಂತ್ಯದೊಳಗೆ ನೂತನ ಶಾಖೆಯಲ್ಲಿ 10 ಕೋಟಿ ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಕೆನರಾ ಬ್ಯಾಂಕ್ ಮಹಾಪ್ರಬಂಧಕರಾದ ಪಿ. ಗೋಪಿಕೃಷ್ಣ, ಅಶೋಕ್ ಟಿ., ವ್ಯವಸ್ಥಾಪಕರಾದ ಜಿ. ಕಿರಣ್ಕುಮಾರ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಕೆನರಾ ಬ್ಯಾಂಕ್ನ 51ನೇ ನೂತನ ಶಾಖೆಯನ್ನು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ರಿಂದ ಉದ್ಘಾಟನೆ
Leave a comment
Leave a comment