ಜುಲೈ ೨೩ರಂದು ಗ್ರಾ.ಪಂ. ೧೩ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ
ತುಮಕೂರು(ಕ.ವಾ.) ಜು.೫: ರಾಜ್ಯ ಚುನಾವಣಾ ಆಯೋಗದ ಆದೇಶದನ್ವಯ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಗ್ರಾಮಪಂಚಾಯತಿಗಳಲ್ಲಿ ತೆರವಾಗಿರುವ ೧೩ ಸದಸ್ಯ ಸ್ಥಾನಗಳಿಗೆ ಜುಲೈ ೨೩ರಂದು ಉಪ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.
ಜುಲೈ ೬ರಂದು ಗುರುವಾರ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹಾಗೂ ಸಂಬAಧಪಟ್ಟ ಚುನಾವಣಾಧಿಕಾರಿಗಳು ಪ್ರಪತ್ರ-೩ರಲ್ಲಿ ಚುನಾವಣಾ ನೋಟೀಸನ್ನು ಹೊರಡಿಸುವರು. ನಾಮಪತ್ರ ಸಲ್ಲಿಸಲು ಜುಲೈ ೧೨ ಕೊನೆಯ ದಿನವಾಗಿದೆ. ಜುಲೈ ೧೩ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಜುಲೈ ೧೫ರಂದು ಉಮೇದುವಾರಿಕೆಯನ್ನು ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಮತದಾನ ಅವಶ್ಯವಿದ್ದರೆ ಜುಲೈ ೨೩ರಂದು ಬೆಳಿಗ್ಗೆ ೭ ರಿಂದ ಸಂಜೆ ೫ ಗಂಟೆಯವರೆಗೆ ಮತದಾನ ನಡೆಸಲಾಗುವುದು. ಮರು ಮತದಾನದ ಅವಶ್ಯವಿದ್ದರೆ ಜುಲೈ ೨೫ರಂದು ಬೆಳಿಗ್ಗೆ ೭ ರಿಂದ ಸಂಜೆ ೫ ಗಂಟೆಯವರೆಗೆ ಮರು ಮತದಾನ ನಡೆಸಲಾಗುವುದು. ಜುಲೈ ೨೬ ರಂದು ಬೆಳಿಗ್ಗೆ ೮ ಗಂಟೆಯಿAದ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಸಲಾಗುವುದು. ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನ ಜುಲೈ ೨೬ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ತಿಪಟೂರು ತಾಲ್ಲೂಕಿನ ೨೨-ಬಜಗೂರು ಗ್ರಾ.ಪಂ. ೪-ಹುಲ್ಲೇನಹಳ್ಳಿಯಲ್ಲಿ ಖಾಲಿ ಇರುವ ೧ ಸದಸ್ಯ ಸ್ಥಾನ; ತುರುವೇಕೆರೆ ತಾಲ್ಲೂಕಿನ ೦೭-ಆನೆಕೆರೆ ಗ್ರಾ.ಪಂ. ೫-ಗುಡ್ಡೇನಹಳ್ಳಿಯಲ್ಲಿ ಖಾಲಿ ಇರುವ ೧ ಸದಸ್ಯ ಸ್ಥಾನ; ಕುಣಿಗಲ್ ತಾಲ್ಲೂಕಿನ ೦೮-ಹೇರೂರು ಗ್ರಾ.ಪಂ. ೦೪-ಗವಿಮಠದ ಖಾಲಿ ಇರುವ ೧ ಸದಸ್ಯ ಸ್ಥಾನ; ತುಮಕೂರು ತಾಲ್ಲೂಕಿನ ೨೯-ಗಂಗೋನಹಳ್ಳಿ ಗ್ರಾ.ಪಂ. ೧-ಗಂಗೋನಹಳ್ಳಿ ಹಾಗೂ ೩೨-ನಿಡುವಳಲು ಗ್ರಾ.ಪಂ. ೮-ಬನದಪಾಳ್ಯದ ತಲಾ ೧ ಸದಸ್ಯ ಸ್ಥಾನ; ಗುಬ್ಬಿ ತಾಲ್ಲೂಕಿನ ೭-ಅಳಿಲುಘಟ್ಟ ಗ್ರಾ.ಪಂ. ೦೫-ಬೆಟ್ಟದಹಳ್ಳಿ ಹಾಗೂ ೧೧-ಮೂಗನಾಯಕನಕೋಟೆ ಗ್ರಾ.ಪಂ. ೧-ಮೂಗನಾಯಕನಕೋಟೆಯ ತಲಾ ೧ ಸದಸ್ಯ ಸ್ಥಾನ; ಶಿರಾ ತಾಲ್ಲೂಕಿನ ೦೩-ದೊಡ್ಡಹುಲಿಕುಂಟೆ ಗ್ರಾ.ಪಂ. ಕೊಟ್ಟ-೨ ಹಾಗೂ ೩೧-ಶೀಬಿ ಅಗ್ರಹಾರ ಗ್ರಾ.ಪಂ. ೬-ಕುಂಟೇಗೌಡನಹಳ್ಳಿಯ ತಲಾ ೧ ಸದಸ್ಯ ಸ್ಥಾನ; ಪಾವಗಡ ತಾಲ್ಲೂಕಿನ ೨೪-ನ್ಯಾಯದಗುಂಟೆ ಗ್ರಾ.ಪಂ. ೦೧-ನ್ಯಾಯದಗುಂಟೆ, ೧೨-ವಳ್ಳೂರು ಗ್ರಾ.ಪಂ. ೦೪-ಕ್ಯಾತಗಾನಚರ್ಲು, ೧೧-ತಿರುಮಣಿ ಗ್ರಾ.ಪಂ. ೦೧-ತಿರುಮಣಿ ಹಾಗೂ ೦೪-ರಾಯಚರ್ಲು ಗ್ರಾಮಗಳ ತಲಾ ೧ ಸದಸ್ಯ ಸ್ಥಾನ ಸೇರಿದಂತೆ ಒಟ್ಟಾರೆ ೧೩ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.
ಚುನಾವಣೆ ನಡೆಯುವ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಜುಲೈ ೬ ರಿಂದ ೨೬ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಇದು ಬರ ಕಾಮಗಾರಿ, ಪ್ರವಾಹ ಇತ್ಯಾದಿ ಪ್ರಕೃತಿ ವಿಕೋಪ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ. ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಗ್ರಾಮಪಂಚಾಯತಿ ಚುನಾವಣೆಗಳಿಗೆ “ಓಔಖಿಂ” ವು ಅನ್ವಯಿಸುವುದಿಲ್ಲವೆಂದು ಅವರು ಆದೇಶಿಸಿದ್ದಾರೆ.
ಉಪ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.

Leave a comment
Leave a comment