ಬುದ್ಧನ ಮಧ್ಯಮ ಮಾರ್ಗ; ವಿಶೇಷ ಉಪನ್ಯಾಸ
ತುಮಕೂರು: ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆ, ವಿಚಾರ ಮಂಟಪ ಬಳಗ ಹಾಗೂ ಸಾಕ್ಷಿ ಪ್ರಕಾಶನ ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಬುದ್ಧನ ಮಧ್ಯಮ ಮಾರ್ಗ’ ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಮೇ ೧೨ರ ಶುಕ್ರವಾರ ಸಂಜೆ ೦೩:೩೦ ಕ್ಕೆ ನಗರದ ಓಶೋ ಧ್ಯಾನ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ಲೇಖಕಿಯರ ಸಂಘದ ಪುಸ್ತಕ ಓದು/ ಚರ್ಚೆ/ಸಂವಾದಗಳ ಮಾಸಿಕ ಕಾರ್ಯಕ್ರಮದ ಭಾಗವಾಗಿ ಬುದ್ಧ ಪೂರ್ಣಿಮೆಯ ಪ್ರಯುಕ್ತ ಈ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಂಸ್ಕೃತಿ ಚಿಂತಕರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಆದ ಡಾ. ನಟರಾಜ್ ಬೂದಾಳ್ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಕಾರ್ಯಕ್ರಮದ ಸಂಚಾಲಕಿ ಡಾ. ಆಶಾರಾಣಿ ಬಗ್ಗನಡು ತಿಳಿಸಿದ್ದಾರೆ.
ಬುದ್ಧನ ಮಧ್ಯಮ ಮಾರ್ಗ ವಿಶೇಷ ಉಪನ್ಯಾಸ

Leave a comment
Leave a comment


