ಕಲ್ಬುರ್ಗಿ ನಗರದ ಕಲ್ಬುರ್ಗಿ ನಗರ ಪೊಲೀಸ್ ಆಯುಕ್ತಾಲಯದಲ್ಲಿ ಆರ್.ಡಿ. ಪಾಟೀಲ್ ಬಂಧನ ಕುರಿತಂತೆ: ಕಲ್ಬುರ್ಗಿ ನಗರ ಪೊಲೀಸ್ ಆಯುಕ್ತರದ ಚೇತನ್. ಆರ್ ಐ.ಪಿ.ಎಸ್ ರವರು ಸುದ್ದಿಗೋಷ್ಠಿ ಮಾಡಿದರು…
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಚೇತನ್ ರವರು ದಿನಾಂಕ 28.10.2023 ರಂದು ನಡೆದ ಕೆ.ಇ.ಎ ಪರೀಕ್ಷೆ ಹಾಗೂ ಕೆ.ಪಿ.ಎಸ್.ಸಿ ಪರೀಕ್ಷೆ ಸಂದರ್ಭದಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುವುದರಲ್ಲಿ ಪ್ರಮುಖ ಆರೋಪಿಯಾದ ಆರ್.ಡಿ. ಪಾಟೀಲ್ ನನ್ನು ನಿನ್ನೆ ನಮ್ಮ ಪೊಲೀಸ್ ಇಲಾಖೆಯ 5 ವಿಶೇಷ ತಂಡಗಳನ್ನು ರಚಿಸಿ ಮಾನ್ಯ ಡಿಸಿಪಿ ಕನಿಕಾ ಸಿಕ್ರಿವಾಲ್ ಹಾಗೂ ಎ.ಸಿ.ಪಿ ಬೂತೆಗೌಡ ಹಾಗೂ ಅವರ ತಂಡ ನಿನ್ನೆ ಸೂಕ್ತ ಮಾಹಿತಿ ಆಧಾರದ ಮೇಲೆ ಮಹಾರಾಷ್ಟ್ರದ ಸೋಲಾಪುರದಲ್ಲಿ ಆರ್.ಡಿ. ಪಾಟೀಲ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.. ಹಾಗೂ ಇನ್ನೂ ಹೆಚ್ಚಿನ ಮಾಹಿತಿಗಾಗಿ ಆರ್.ಡಿ.ಪಾಟೀಲ್ ನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು…