ತುಮಕೂರು, ಏ.೪- ಪ್ರಸಕ್ತ ಚುನಾವಣೆಯಲ್ಲಿ ಶಿರಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿರುವುದಾಗಿ ಪಿಡಬ್ಲುö್ಯಡಿ ಇಲಾಖೆ ನಿವೃತ್ತ ಇಂಜಿನಿಯರ್ ಆರ್.ಜಯರಾಮಯ್ಯ ತಿಳಿಸಿದರು.
ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೊಷ್ಠಿ ನಡೆಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದ್ದು, ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವುದರಿAದ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಆ ಪಕ್ಷದಿಂದ ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಂಡಿರುವುದಾಗಿ ಹೇಳಿದರು.
ಶಿರಾ ತಾಲೂಕು ಚಿಕ್ಕಬಾಣಗೆರೆ ಗ್ರಾಮದ ವಾಸಿಯಾಗಿರುವ ತಾನು ಈ ಕ್ಷೇತ್ರದ ಸ್ಥಳೀಯ ಅಭ್ಯರ್ಥಿಯಾಗಿದ್ದು, ಜನರ ನಾಡಿ ಮಿಡಿತ ಅರಿತಿದ್ದೇನೆ. ಶಾಸಕನಾಗಿ ಆಯ್ಕೆಯಾದರೆ ರಾಜ್ಯದಲ್ಲಿ ಶಿರಾ ತಾಲೂಕನ್ನು ಮಾದರಿಯನ್ನಾಗಿ ಮಾಡುವ ಹಂಬಲ ಹೊಂದಿದ್ದೇನೆ. ಅಭಿವೃದ್ಧಿಪರ ಜ್ಞಾನವುಳ್ಳ ಅನುಭವವಿರುವ ವ್ಯಕ್ತಿಯಾಗಿರುವುದರಿಂದ ಜನ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಸಾರ್ವಜನಿಕರಲ್ಲಿ ಸಾಮಾಜಿಕ, ಧಾರ್ಮಿಕ ಬಾಳ್ವೆ ವೃದ್ಧಿ, ಸರ್ಕಾರಿ ಸೌಲಭ್ಯಗಳು ಸರಳವಾಗಿ ಸಾರ್ವಜನಿಕರ ಕೈಸೇರುವಂತೆ ಮಾಡುವುದು, ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿ, ಕಟ್ಟಡ, ರಸ್ತೆ, ನೀರಾವರಿ ಇತ್ಯಾದಿ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿ, ಗುಣಮಟ್ಟದ ಶಾಶ್ವತ ಯೋಜನೆಗಳನ್ನು ರೂಪಿಸುವ ಧ್ಯೇಯವನ್ನು ಹೊಂದಿರುವುದಾಗಿ ತಿಳಿಸಿದರು.
ತಾನು ಇಂಜಿನಿಯರ್ ಆಗಿದ್ದಾಗ ಶಿರಾ ತಾಲೂಕಿಗೆ ಹೇಮಾವತಿ ನೀರು ಹರಿಸಲು ಅಗತ್ಯ ವರದಿ ಮತ್ತು ನಕ್ಷೆಯನ್ನು ಸಿದ್ದಪಡಿಸಿದ್ದೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿಸಿದ್ದೆ, ತುಮಕೂರು – ದಾವಣಗೆರೆ ನೇರ ರೈಲು ಮಾರ್ಗ ನಿರ್ಮಾಣಕ್ಕೆ ೨೦೦೯-೧೦ರಲ್ಲಿ ಡಿಪಿಆರ್ ತಯಾರಿಸಿ ಅಗತ್ಯ ನಕಾಶೆಯನ್ನು ಸಿದ್ದಪಡಿಸಿದ್ದೆ. ಹೋಬಳಿ ಮಟ್ಟಕ್ಕೂ ಹೇಮಾವತಿ ನೀರು ಹರಿಸಲು ಚಿಂತನೆ ಮಾಡಿರುವುದಾಗಿ ಹೇಳಿದರು.
ಇತ್ತೀಚಿನ ಇಂಜಿನಿಯರ್ಗಳಿಗೆ ತಾಂತ್ರಿಕ ಅನುಭವ ಮತ್ತು ಅರಿವು ಕಡಿಮೆ ಇದ್ದು, ಅವೈಜ್ಞಾನಿಕ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿ, ಸರ್ಕಾರಕ್ಕೆ ಹೆಚ್ಚಿನ ಅನುದಾನದ ಹೊರೆ ಬೀಳುವಂತೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಭಿವೃದ್ಧಿಪರ ಇಚ್ಛಾಶಕ್ತಿ ಹೊಂದಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕೊರತೆಯಿಂದಾಗಿ ಸರ್ಕಾರದ ಅನೇಕ ಯೋಜನೆಗಳು ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದ್ದು, ಇವುಗಳನ್ನು ಚುರುಕುಗೊಳಿಸುವ ತುರ್ತು ಅಗತ್ಯವಿದೆ ಎಂದರು.
ಮುಖAಡರಾದ ಡಿ.ತಿಮ್ಮಪ್ಪ, ಜಗದೀಶ್ಕುಮಾರ್, ಭಾರತಿ ಇವರು ಸುದ್ದಿಗೋಷ್ಠಿಯಲ್ಲಿದ್ದರು.
ತುಮಕೂರು, ಶಿರಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆರ್.ಜಯರಾಮಯ್ಯ

Leave a comment
Leave a comment