ತುಮಕೂರು:ಬಿಜೆಪಿ ಪಕ್ಷ ಕುತಂತ್ರದಿoದ ಸಂವಿಧಾನದ ಆಶಯಗಳನ್ನು ನಾಶ ಮಾಡುತ್ತಾ ಬಂದಿದ್ದು,ಸoವಿಧಾನದ ಫಲಾನುಭವಿಗಳಾದ ದಲಿತರು ಬಿಜೆಪಿಗೆ ತಕ್ಕಪಾಠ ಕಲಿಸಬೇಕಿದೆ ಎಂದು ದಸಂಸ ರಾಜ್ಯ ಮುಖಂಡ ಬೆಲ್ಲದಮಡು ಕೃಷ್ಣಪ್ಪ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2014ರಲ್ಲಿ ಹಲವು ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ಇದುವರೆಗೂ ಭರವಸೆಗಳನ್ನು ಈಡೇರಿಸಿಲ್ಲ.ಬದಲಿಗೆ ನೋಟ್ ಬ್ಯಾನ್, ಜಿ.ಎಸ.ಟಿ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಮೂಲಕ ಬಡವರು ಬದುಕಲು ತತ್ತರಿಸುವಂತಹ ವಾತಾವರಣ ಸೃಷ್ಟಿಸಿದೆ.ಹಾಗಾಗಿ ಬಿಜೆಪಿಯ ವಿರುದ್ದ ದಲಿತರು ಮತ ಹಾಕಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ದಲಿತರಿಗೆ, ಬಡವರಿಗೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಎಂಬುದು ಒಂದು ಊರುಗೊಲಾಗಿತ್ತು.ಆದರೆ ಕಳೆದ 10 ವರ್ಷಗಳಲ್ಲಿ ಹಲವಾರು ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಿಲ್ಲದೆ,ಖಾಲಿ ಇರುವ ಹುದ್ದೆಗಳನ್ನು ತುಂಬದೆ, ಹೊರಗುತ್ತಿಗೆ ಪದ್ದತಿ ಜಾರಿಗೆ ತಂದು ಮೀಸಲಾತಿಯೆ ಅಪ್ರಸ್ಥುತ ಎಂಬoತೆ ಮಾಡಿದ್ದಾರೆ.ರೈತರ ಬೆಳೆಗಳಿಗೆ ವೈಜ್ಞಾನಿಕ ಎಂ.ಎಸ್.ಪಿ ನೀಡದೆ, ಕರಾಳ ಕಾಯ್ದೆಗಳನ್ನು ತಂದು, ಇದರ ವಿರುದ್ದ ಪ್ರತಿಭಟನೆಗೆ ಇಳಿದ ನೂರಾರು ರೈತರು ಸಾವಿಗೀಡಾವಂತೆ ಮಾಡಿದ್ದು ಮೋದಿ ಸರಕಾರ.ಹಾಗಾಗಿ ರೈತರು,ಕಾರ್ಮಿಕರು,ಬಡವರು ಬಿಜೆಪಿ ವಿರುದ್ದ ಮತ ಚಲಾಯಿಸಬೇಕೆಂಬುದು ನಮ್ಮ ಮನವಿಯಾಗಿದೆ ಎಂದರು.
ಬಿಜೆಪಿ ಪಕ್ಷ ಕುತಂತ್ರದಿoದ ಸಂವಿಧಾನದ ಆಶಯಗಳನ್ನು ನಾಶ ಮಾಡುತ್ತಾ

Leave a comment
Leave a comment