ಕಲ್ಬುರ್ಗಿ:-ನಗರದ ಡಾ. ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ಕೂಲಿ ಸಂಸ್ಕೃತಿಕ ಸಾಹಿತ್ಯ ಪರಿಷತ್ ರಾಷ್ಟ್ರೀಯ ಸಂಸ್ಥೆಯು ಮಹಾಯೋಗಿನಿ ಮಾತಾ ಮಾಣಿಕೇಶ್ವರಿ ಅಮ್ಮನವರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ ಸಂಗೀತೋತ್ಸವ ಮಹಿಳಾ ಬಜನಾ ತಂಡಗಳ ಸ್ಪರ್ಧೆ ಹಾಗೂ ಅಭಿನಂದನ ಕಾರ್ಯಕ್ರಮವನ್ನು ಮಾತುಶ್ರೀ ಅಮರೇಶ್ವರ ಮಾತಾ ಉದ್ಘಾಟಿಸಿದರು. ಸಮಾರಂಭ ಉದ್ದೇಶ ಸಿ ಸಂಸ್ಥೆಯ ಅಧ್ಯಕ್ಷರಾದ ಡಾ. ಎಸ್ ಕೆ ಮೇಲ್ಕರ್ ಮಾತನಾಡಿದರು ತದನಂತರ ಶ್ರೀ ಶ್ರೀ ವರಲಿಂಗೇಶ್ವರ ಮಹಾ ಸ್ವಾಮಿಗಳು ಕೋಲಿ ಸಮಾಜದ ಸಾಧುಸಂತರ ಬಗ್ಗೆ ,ಮಹಾ ನಾಯಕರು ಬಗ್ಗೆ ,ಮಾಣಿಕೇಶ್ವರಿ ಅಮ್ಮನವರ ಪವಾಡದ ಕುರಿತು ಸುಧೀರ್ಘವಾಗಿ ಮಾತನಾಡಿದರು ಈ ಕಾರ್ಯಕ್ರಮದ ವೇದಿಕೆಯಲ್ಲಿ ವಿವಿಧ ಜಿಲ್ಲೆಗಳಿಂದ ಕೋಲಿ ಸಮಾಜದ ಅಧ್ಯಕ್ಷರು ಮುಖ್ಯ ಅತಿಥಿ ಸ್ಥಾನ ಅಲಂಕರಿಸಿದ್ದರು. ಕಾರ್ಯಕ್ರಮದ ಪ್ರಸ್ತಾಪಿಕ ನೋಡಿ ಶಿವಶರಣಪ್ಪ ಜಮಾದಾರ್ ನಿರೂಪಣೆ ಡಾ.ಟಿ.ಡಿ ರಾಜ ನಿರೋಪಿಸಿದರು ಈ ಸಮಾರಂಭದಲ್ಲಿ ಕರ್ನಾಟಕದ ವಿವಿಧ ಜಿಲ್ಲೆ ತಾಲೂಕುಗಳಿಂದ ಕೂಲಿ ಸಮಾಜ ಬಾಂಧವರು ಹಾಜರಿದ್ದರು.