ತುಮಕೂರು:ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಸಿರು ಕ್ರಾಂತಿಯ ಹರಿಕಾರ,ಭಾರತ ರತ್ನ ಬಾಬು ಜಗಜೀವನ್ರಾಮ್ ಜಯಂತಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪಕ್ಷದ ಕಚೇರಿಯಲ್ಲಿ ಸ್ಥಾಪಿಸಿದ್ದ ಬಾಬು ಜಗಜೀವನ್ರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್, ಸತತವಾಗಿ ಒಂದೇ ಕ್ಷೇತ್ರದಿಂದ ಸುಮಾರು ಐವತ್ತು ವರ್ಷಗಳ ಕಾಲ ಅಂದರೆ ೧೯೩೬ ರಿಂದ ೧೯೮೬ರವರೆಗೆ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದ ಏಕೈಕ ವ್ಯಕ್ತಿ ಎಂದರೆ ಅವರು ನಮ್ಮ ಬಾಬು ಜಗಜೀವನ್ ರಾಂ,ಆಡು ಮುಟ್ಟದ ಸೊಪ್ಪಿಲ್ಲ. ಬಾಬು ಜಗಜೀವನ್ರಾಂ ನಿರ್ವಹಿಸದ ಖಾತೆಗಳಿಲ್ಲ ಎಂಬ ಮಾತಿದೆ. ರಕ್ಷಣಾ ಸಚಿವರಾಗಿ ಬಾಂಗ್ಲಾ ವಿಮೋಚನೆ, ಕೃಷಿ ಸಚಿವರಾಗಿ ಹಸಿರು ಕ್ರಾಂತಿ,ಕಾರ್ಮಿಕ ಸಚಿವರಾಗಿ ಅವರು ಕಾರ್ಮಿಕ ಕಾಯ್ದೆಗೆ ತಂದ ಹಲವಾರು ಸುಧಾರಣೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ.ಅವರನ್ನು ಎಲ್ಲಾ ಕಾಂಗ್ರೆಸಿಗರು ಸ್ಮರಿಸಬೇಕಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಅರುಂಧತಿ ಮಾತನಾಡಿ,ಇಬ್ಬರು ಸಮರ್ಥ ವ್ಯಕ್ತಿಗಳು ಸೇರಿದರೆ ಒಂದು ಇತಿಹಾಸವನ್ನೇ ನಿರ್ಮಿಸಬಹುದು ಎಂಬುದಕ್ಕೆ ಇಂದಿರಾಗಾAಧಿ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಬಾಬು ಜಗಜೀವನ್ರಾಂ ಅವರೇ ಉದಾಹರಣೆ.ಇಂಡೋ ಪಾಕ್ ಯುದ್ದದಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿದ ಪರಿಣಾಮ ಬಾಂಗ್ಲಾ ಉದಯಕ್ಕೆ ಕಾರಣವಾಯಿತು,ಶತೃವಿನ ಶತೃವನ್ನು ಮಿತ್ರನನ್ನಾಗಿಸಿದ ಕೀರ್ತಿ ಬಾಬುಜಿ ಅವರಿಗೆ ಸಲ್ಲುತ್ತದೆ ಎಂದರು.
ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಲಿಂಗರಾಜು ಮಾತನಾಡಿ,ಭಾರತಕ್ಕೆ ಸ್ವಾತಂತ್ರ ಬಂದಾಗ ಇದ್ದ ೩೩ ಜನರಿಗೆ ಅನ್ನ ಹಾಕಲು ಪರದಾಡುವಂತಹ ಸ್ಥಿತಿ ಇತ್ತು.ಅಂತಹ ಸಂದರ್ಭದಲ್ಲಿ ಇಂದಿರಾಗಾAಧಿ ಅವರ ನೇತೃತ್ವ ಸರಕಾರದಲ್ಲಿ ಕೃಷಿ ಮಂತ್ರಿ ಜವಾಬ್ದಾರಿ ವಹಿಸಿಕೊಂಡ ಬಾಬುಜಿ ವಿದೇಶಗಳಿಗೆ ತೆರಳಿ, ಅಲ್ಲಿನ ಅಧುನಿಕ ಕೃಷಿ ಪದ್ದತಿಗಳನ್ನು ಅಧ್ಯಯನ ಮಾಡಿ, ಭಾರತದಲ್ಲಿ ಹಸಿರು ಕ್ರಾಂತಿಯ ಹೆಸರಿನಲ್ಲಿ ಹೈಬ್ರಿಡ್ ಬೀಜ, ರಸಗೊಬ್ಬರ,ಕೃಷಿಯಲ್ಲಿ ಯಂತ್ರಗಳ ಬಳಕೆ ಮಾಡಿದ್ದರ ಪರಿಣಾಮ ಇಂದು ೧೩೦ ಕೋಟಿ ಜನಸಂಖ್ಯೆಯೂ ತಿಂದು ಮಿಕ್ಕುವಷ್ಟು ಆಹಾರದ ಧಾನವನ್ನು ಬೆಳೆಯಲಾಗುತ್ತಿದೆ. ಇದರ ಹಿಂದಿನ ಶಕ್ತಿ ಬಾಬುಜಿ ಎಂಬುದನ್ನು ಭಾರತೀಯರು ಮರೆಯುವಂತಿಲ್ಲ ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ್ಗೌಡ ಮಾತನಾಡಿ,ಜಾತಿಯತೆ ಎಂಬುದು ತಾಂಡವಾಡುತಿದ್ದ ಕಾಲದಲ್ಲಿ ಹುಟ್ಟಿದ ಬಾಬು ಜಗಜೀವನರಾಂ ಅವರು ವಿದ್ಯೆಯಿಂದ ಎಲ್ಲವನ್ನು ಸಾಧಿಸಬಹುದು ಎಂಬುದನ್ನು ಅರಿತು ಜ್ಞಾನದ ಮೋರೆ ಹೋಗಿ,ತಮ್ಮ ವಿದ್ವುತ್ ಭರಿತ ಜ್ಞಾನದ ಮೂಲಕವೇ ವಿಶ್ವದ ನಾಯಕರ ಗಮನಸೆಳೆದವರು.ತಮ್ಮ ವಿಚಾರವಂತಿಕೆಯ ಮೂಲಕವೇ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಿ, ಅವರು ಇತರರಂತೆ ಸಹಜ ಬದುಕು ಬದುಕಲು ಅವಕಾಶ ಕಲ್ಪಿಸಿದರು. ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾಧಿಸುವ ನಿಟ್ಟಿನಲ್ಲಿ ಹಸಿರು ಕ್ರಾಂತಿಯನ್ನು ಜಾರಿಗೆ ತಂದು ಆಹಾರದ ಸ್ವಾವಲಂಭನೆಗೆ ಕಾರಣರಾದರು.ನಿರಂತರ ಕುರುಕುಳ ನೀಡುತ್ತಿದ್ದ ಪಾಕಿಸ್ಥಾನದ ಬಲ ಕುಗ್ಗಿಸಲು, ಪೂರ್ವ ಪಾಕಿಸ್ಥಾನವನ್ನು ಹುಟ್ಟು ಹಾಕಿ ದೇಶಕ್ಕೆ ಬಲ ತುಂಬಿದರು. ಇಂತಹ ವ್ಯಕ್ತಿಯನ್ನು ನಾವೆಲ್ಲರೂ ಗೌರವಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ಸಿ ಘಟಕದ ಅಧ್ಯಕ್ಷ ಲಿಂಗರಾಜು,ಜಿಲ್ಲಾ ಉಪಾಧ್ಯಕ್ಷೆ ಸುಜಾತ,ವಾಲೆಚಂದ್ರಯ್ಯ, ಕೈದಾಳ ರಮೇಶ್, ಕೆಂಪಣ್ಣ, ಶಿವಾಜಿ,ಗೀತಾ, ಕಮಲಮ್ಮ, ಮಾರುತಿ, ಶ್ರೀನಿವಾಸ್, ನಟರಾಜು, ವೈ.ಎನ್.ನಾಗರಾಜು, ಕಿರಣ್ ಮತ್ತಿತರರಿದ್ದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ರತ್ನ ಬಾಬು ಜಗಜೀವನ್ರಾಮ್ ಜಯಂತಿ ಆಚರಣೆ
Leave a comment
Leave a comment