ಸಮಾಜವಾದಿ ಭಾರತ ಶಹೀದ ಭಗತ್ ಸಿಂಗ್ ಅವರ ಕನಸಾಗಿತ್ತು ಎಂದು ಎ ಐ ಡಿ ವೈ ಓ ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ್ ಎಸ್ ಹೆಚ್ ಹೇಳಿದರು ಅವರು ಆಲ್ ಇಂಡಿಯಾ ಡೆಮೊಕ್ರಟಿಕ್ ಯೂಥ್ ಆರ್ಗನೈಸೇಷನ್ ಕಲ್ಬುರ್ಗಿ ಜಿಲ್ಲಾ ಸಮಿತಿ ದಿನಾಂಕ ೨೩ ಮಾರ್ಚ್ ೨೦೨೩ ರಂದು ಸಾಯಂಕಾಲ ಕಲ್ಬುರ್ಗಿ ನಗರದಲ್ಲಿ ಹಮ್ಮಿಕೊಂಡಿರುವ ಶಹೀದ್ ಭಗತ್ ಸಿಂಗ್ ರವರ ೯೪ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರಾಗಿ ಮಾತನಾಡಿದರು ಮುಂದುವರೆದವರು ಬ್ರಿಟಿಷರ ಒಡೆದಾಳುವ ನೀತಿಯನ್ನು ಗುರುತಿಸಿದರು ನಾವು ಜಾತಿ ಧರ್ಮ ಎಂದು ಬಡಿದಾಡದೆ ಬ್ರಿಟಿಷರ ವಿರುದ್ಧ ಒಂದಾಗಿ ಹೋರಾಡಬೇಕೆಂದಿದ್ದರೂ ಕೇವಲ ರಾಜಕೀಯ ಸ್ವಾತಂತ್ರ್ಯ ಅಲ್ಲದೆ ದುಡಿಯುವ ಕೈಗಳಿಗೆ ಸ್ವತಂತ್ರ ಸಿಗಬೇಕು ಅದು ಸಮಾಜವಾದಿ ಭಾರತದ ಕನಸಾಗಿತ್ತು ಎಂದರು ಮುಂದುವರೆದ ಅವರು ಬಹಳ ಸಣ್ಣ ವಯಸ್ಸಿನಲ್ಲಿ ಅಪಾರವಾದ ಜ್ಞಾನವನ್ನು ಗಳಿಸಿದ ಭಗತ್ ಸಿಂಗ್ ಅವರ ಇಡೀ ಜೀವನ ಯುವ ಜನರಿಗೆ ಮಾದರಿಯಾಗಿದೆ ಎಂದರು ಇಂದಿನ ಬೆಲೆ ಏರಿಕೆ ನಿರುದ್ಯೋಗ ಬಡತನ ಎಲ್ಲಾ ಸಮಸ್ಯೆಗಳಿಗೆ ಭಗತ್ ಸಿಂಗ್ ಅವರ ವಿಚಾರ ಬಹಳ ಅವಶ್ಯವಾಗಿದ್ದು ಈ ವಿಚಾರವನ್ನು ಯುವ ಜನರು ತಿಳಿದುಕೊಂಡು ಸಂಘಟಿತ ಆಂದೋಲನ ಕಟ್ಟಿ ಸಮಾಜವಾದಿ ಭಾರತ ನಿರ್ಮಿಸಲು ಮುಂದೆ ಬರಬೇಕೆಂದರು
ಇದೇ ಸಂದರ್ಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾರ್ಯಕಾರಿಣ ಸದಸ್ಯರಾದ ರಮೇಶ್ ದೇವಕರ್ ಅವರು ಮಾತನಾಡುತ್ತಾ ಸರ್ಕಾರವು ಭಗತ್ ಸಿಂಗ್ ಅವರ ಇತಿಹಾಸವನ್ನು ಕಡೆಗಣ ಸುತ್ತಿದ್ದು ವಿರೋಧಿಸಿದ ಅವರು ಕೂಡಲೆ ಸರ್ಕಾರವು ಇವರ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕೆಂದರು.
ಪಂಜಿನ ಮೆರವಣ ಗೆಯು ರೈಲು ನಿಲ್ದಾಣ ಎದುರುಗಡೆ ಪ್ರಾರಂಭವಾಗಿ SVP ಚೌಕ್ ವರೆಗೆ ಘೋಷಗಳು ಕೂಗುತ್ತಾ ಆಗಮಿಸಿ ಸಮಾರೋಪ ಗೊಂಡಿತು ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಸಿದ್ದು ಚೌದರಿ ಕಾರ್ಯದರ್ಶಿಗಳಾದ ಈಶ್ವರ್ ಕೆ ಜಿಲ್ಲಾ ಸಮಿತಿ ಸದಸ್ಯರಾದ ರಘು ಪವಾರ್ ದೇವರಾಜ್ ಮಿರಲ್ಕರ್ ದತ್ತು ಹುರೆಡಕರ ಮಲ್ಲಿಕಾರ್ಜುನ್ ಹಾಗೂ ಇನ್ನಿತರ ಯುವಕರು ಭಾಗವಹಿಸಿದರು ಕಾರ್ಯಕ್ರಮ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿ ಸದಸ್ಯರಾದ ಪುಟ್ಟರಾಜ ಲಿಂಗಶಟ್ಟಿ ವಹಿಸಿದ್ದರು.