ಬೆಂಗಳೂರು ನಗರದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಲಗ್ಗೆರೆ ಗ್ರಾಮದ ಸರ್ವೇ ನಂಬರ್ 11 ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಒತ್ತುವರಿ ಜಾಗವನ್ನು ಮತ್ತು ತಾತ್ಕಾಲಿಕ ಶೆಡ್ಗಳನ್ನು ಮಂಡಳಿಯ ಆಯುಕ್ತರ ಆದೇಶದಂತೆ ತೆರವುಗೊಳಿಸಲಾಯಿತು. ಸುಮಾರು 1 ಎಕರೆ 26 ಗುಂಟೆ ಜಾಗ ತೆರವಾಗಿದ್ದು ಅಂದಾಜು 20 ಕೋಟಿ ಆಸ್ತಿಯನ್ನು ಸ್ಲಂ ಬೋರ್ಡ್ ಅಧಿಕಾರಿಯು ಉತ್ತರ ಡಿಸಿಪಿ ಸಹಕಾರದೊಂದಿಗೆ ನಡೆದಿದ್ದು ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಅಭಿಯಂತರರು, 3ನೇ ವಿಭಾಗ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು 5ನೇ ಉಪವಿಭಾಗ ಲಗ್ಗೆರೆ ಮತ್ತು ಸಹಾಯಕ ಅಭಿಯಂತರರಿಗೆ ಸ್ಲಂ ಜನಾಂದೋಲನ ಕರ್ನಾಟಕದಿಂದ ಅಭಿನಂದನೆ.



