ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ಮೈಕ್ರೋ ಅಬ್ಸರ್ವರ್ಗಳಿಗಾಗಿ ಆಯೋಜಿಸಿದ್ದ ಚುನಾವಣಾ ತರಬೇತಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡು ಸೇವೆ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿ ಅಧಿಕಾರಿ/ಸಿಬ್ಬಂದಿಗಳು ಶ್ರದ್ಧೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಮತದಾನ ದಿನವಾದ ಮೇ ೧೦ರಂದು ಬೆಳಿಗ್ಗೆ ೭ ರಿಂದ ಸಂಜೆ ೬ ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾನ ಪ್ರಾರಂಭಕ್ಕೂ ೨ ಗಂಟೆ ಅಂದರೆ ಬೆಳಿಗ್ಗೆ ೫ ಗಂಟೆಯೊಳಗಾಗಿ ಸೂಚಿಸಿದ ಮತಗಟ್ಟೆಗಳಲ್ಲಿ ಕಡ್ಡಾಯವಾಗಿ ಹಾಜರಿದ್ದು ಮತಗಟ್ಟೆಗಳಲ್ಲಿ ಸಿಬ್ಬಂದಿಗಳ ಹಾಜರಾತಿ, ಆಸನ ವ್ಯವಸ್ಥೆ, ಮೂಲಭೂತ ಸೌಲಭ್ಯ, ಬೆಳಕಿನ ವ್ಯವಸ್ಥೆ ಇರುವ ಬಗ್ಗೆ ಪರಿಶೀಲಿಸಬೇಕು ಎಂದು ತಿಳಿಸಿದರು.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮೇಲ್ವಿಚಾರಣೆಗಾಗಿ ಸೂಕ್ಷö್ಮ ವೀಕ್ಷಕರನ್ನು ನೇಮಿಸಲಾಗಿದ್ದು, ಎಲ್ಲಾ ಮೈಕ್ರೋ ಅಬ್ಸರ್ವರ್ಗಳು ತಮಗೆ ಹಂಚಿಕೆ ಮಾಡಲಾದ ವಿಧಾನಸಭಾ ಕ್ಷೇತ್ರಗಳಲ್ಲಿ ಮೇ ೯ರಂದು ತಪ್ಪದೇ ವರದಿ ಮಾಡಿಕೊಳ್ಳಬೇಕು ಎಂದರಲ್ಲದೆ ಮತದಾನವನ್ನು ಮೇ ೧೦ರ ಬೆಳಿಗ್ಗೆ ೭ ಗಂಟೆಗೆ ಸರಿಯಾಗಿ ಪ್ರಾರಂಭಿಸಬೇಕು. ಮತದಾನ ದಿನದಂದು ತಮ್ಮನ್ನು ನಿಯೋಜಿಸಿರುವ ಮತಗಟ್ಟೆಗಳಲ್ಲಿ ಯಾವುದೇ ಸಮಸ್ಯೆ ಎದುರಾದರೆ ಕೂಡಲೇ ಚುನಾವಣಾ ವೀಕ್ಷಕರು/ ಸಂಬAಧಿಸಿದ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಮತದಾನ ಪ್ರಾರಂಭಕ್ಕೂ ೯೦ ನಿಮಿಷಗಳ ಅಂದರೆ ಒಂದೂವರೆ ಗಂಟೆ ಮುನ್ನ ಕಡ್ಡಾಯವಾಗಿ ಅಣಕು ಮತದಾನ ಮಾಡಬೇಕು. ಸೂಕ್ಷö್ಮ ವೀಕ್ಷಕರು ಮೊಬೈಲ್ ಕೊಂಡೊಯ್ಯಲು ಅವಕಾಶವಿದೆ. ಆದರೆ ಮೊಬೈಲ್ ಅನ್ನು ಸೈಲೆಂಟ್ ಮೋಡ್ನಲ್ಲಿಟ್ಟಿರಬೇಕು. ಅವಶ್ಯ ಬಿದ್ದರೆ ಮೊಬೈಲ್ ಮೂಲಕ ಕಂಟ್ರೋಲ್ ರೂಮ್ ಅನ್ನು ಸಂಪರ್ಕಿಸಬೇಕು. ಯಾವುದೇ ಕಾರಣಕ್ಕೂ ಮತದಾನ ಪ್ರಕ್ರಿಯೆ ನಿಲ್ಲದಂತೆ ಹಾಗೂ ಯಾವುದೇ ಗೊಂದಲಕ್ಕೊಳಗಾಗದೆ ಮತದಾನ ಪ್ರಕ್ರಿಯೆಯನ್ನು ಶಾಂತಿಯುತವಾಗಿ ಮುಕ್ತಾಯವಾಗುವಂತೆ ನಿಗಾವಹಿಸಬೇಕು ಎಂದು ತಿಳಿಸಿದರು.
ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಪಂಕಜ್ ಕುಮಾರ್ ಮಾತನಾಡಿ, ಮತದಾನ ದಿನದಂದು ಸೂಕ್ಷö್ಮ ವೀಕ್ಷಕರು ಅನುಸರಿಸಬೇಕಾದ ಕಾರ್ಯವಿಧಾನಗಳ ಬಗ್ಗೆ ಮಾಹಿತಿ ನೀಡುತ್ತಾ, ಮೇ ೧೦ರ ಬೆಳಿಗ್ಗೆ ೫ ಗಂಟೆಯಿAದ ಮತದಾನ ಮುಕ್ತಾಯವಾಗುವವರೆಗೂ ತಮಗೆ ಸೂಚಿಸಿದ ಮತಗಟ್ಟೆಯಲ್ಲಿ ಕಡ್ಡಾಯವಾಗಿ ಹಾಜರಿದ್ದು, ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಸೂಚಿಸಿದರು.
ಮತ್ತೊಬ್ಬ ಸಾಮಾನ್ಯ ವೀಕ್ಷಕ ಡಾ: ಸಿ.ಎನ್. ಮಹೇಶ್ವರನ್ ಮಾತನಾಡಿ, ಮೈಕ್ರೋ ಅಬ್ಸರ್ವರ್ ತಪ್ಪದೇ ಮೇ ೧೦ರಂದು ನಿಗಧಿತ ಸಮಯಕ್ಕೆ ಮತಗಟ್ಟೆಯಲ್ಲಿ ಹಾಜರಿರಬೇಕು ಹಾಗೂ ಮತದಾನಕ್ಕೆ ಸಂಬAಧಿಸಿದ ಮಾಹಿತಿಯನ್ನು ನಿಗಧಿತ ನಮೂನೆಯಲ್ಲಿ ನಿಖರ ವರದಿ ನೀಡಬೇಕು. ವರದಿಯನ್ನು ಯಾವುದೇ ರೀತಿಯಲ್ಲಿ ತಪ್ಪಾಗಿ ನೀಡಬಾರದು ಎಂದು ತಿಳಿಸಿದರು.
ರಾಜ್ಯ ಮಟ್ಟದ ಚುನಾವಣಾ ತರಬೇತಿದಾರ ರಿಜ್ವಾನ್ ಪಾಷಾ, ಬಹುತೇಕ ಕೇಂದ್ರ ಸರ್ಕಾರಿ, ನೌಕರರು, ಬ್ಯಾಂಕ್, ಅಂಚೆ ಕಚೇರಿ, ಎಲ್ಐಸಿ, ಮತ್ತಿತರ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ ಅಧಿಕಾರಿ/ಸಿಬ್ಬಂದಿಗಳನ್ನು ಸೂಕ್ಷö್ಮ ವೀಕ್ಷಕರನ್ನಾಗಿ ನೇಮಿಸಲಾಗಿದ್ದು, ನಿಯೋಜಿತ ಸೂಕ್ಷö್ಮ ವೀಕ್ಷಕರು ವಿದ್ಯುನ್ಮಾನ ಮತಯಂತ್ರದ ಕಂಟ್ರೋಲ್ ಯೂನಿಟ್ ಹಾಗೂ ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್ ಯಂತ್ರದ ಕಾರ್ಯವಿಧಾನಗಳ ಜೊತೆಗೆ ಮತದಾನ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಹೊಂದಿರಬೇಕು.
ತರಬೇತಿ ಕಾರ್ಯಕ್ರಮದಲ್ಲಿ ವಿದ್ಯುನ್ಮಾನ ಮತಯಂತ್ರದ ಜೋಡಣೆ ಹಾಗೂ ಕಾರ್ಯವಿಧಾನಗಳ ಬಗ್ಗೆ ವಿಡಿಯೋ ಪ್ರದರ್ಶನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮೈಕ್ರೋ ಅಬ್ಸರ್ವರ್ಗಳ ಸಂದೇಹಗಳಿಗೆ ರಿಜ್ವಾನ್ ಪಾಷಾ ಪರಿಹಾರ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಡಾ: ಕೆ. ವಿದ್ಯಾಕುಮಾರಿ, ಪಾಲಿಕೆ ಆಯುಕ್ತ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹೆಚ್.ವಿ.ದರ್ಶನ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಉಪವಿಭಾಗಾಧಿಕಾರಿಗಳಾದ ರಿಷಿ ಆನಂದ್, ಕಲ್ಪಶ್ರೀ, ಹೋಟೆಲ್ ಶಿವಪ್ಪ, ವಿವಿಧ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕರು ಸೇರಿದಂತೆ ಮತ್ತಿತರರು ಹಾಜರಿದ್ದರು.


ನಿಗಧಿತ ಸಮಯದೊಳಗೆ ಸೂಚಿಸಿದ ಮತಗಟ್ಟೆಗಳಲ್ಲಿ ಹಾಜರಿರಲು ಸೂಕ್ಷö್ಮ ವೀಕ್ಷಕರಿಗೆ ಜಿಲ್ಲಾಧಿಕಾರಿ ಸೂಚನೆ
ತುಮಕೂರು(ಕ.ವಾ)ಮೇ.೬: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬAಧಿಸಿದAತೆ ಮೇ ೧೦ರಂದು ನಡೆಯಲಿರುವ ಮತದಾನ ದಿನದಂದು ತಮಗೆ ಸೂಚಿಸಿರುವ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಪ್ರಾರಂಭವಾಗುವ ೨ ಗಂಟೆಗೂ ಮುನ್ನ ಕಡ್ಡಾಯವಾಗಿ ಹಾಜರಿರಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಅವರು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಎಲ್ಲಾ ಸೂಕ್ಷö್ಮ ವೀಕ್ಷಕ(ಮೈಕ್ರೋ ಅಬ್ಸರ್ವರ್)ರಿಗೆ ಸೂಚನೆ ನೀಡಿದರು.