ಪೂರ್ವ ಮುಂಗಾರು ಅಬ್ಬರಿಸುವ ಮೊದಲೇ ಪೂರ್ವಸಿದ್ದತೆ ಮಾಡಿಕೊಳ್ಳಿ : ಮಾಜಿ ಶಾಸಕ ಡಾ. ರಫೀಕ್ ಅಹ್ಮದ್
ತುಮಕೂರು: ಪೂರ್ವ ಮುಂಗಾರು ಆರಂಭವಾಗುತ್ತಿದ್ದು, ಈಗಾಗಲೇ ಬೆಂಗಳೂರು ಸೇರಿದಂತೆ ಹಲವೆಡೆ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡು ಪ್ರಾಣಹಾನಿಗಳಾಗಿದೆ. ಕಳೆದ ಬಾರಿಯೂ ಸಹ ತುಮಕೂರು ನಗರದಲ್ಲಿ ಆಟೋ ಚಾಲಕ ಅಮ್ಜಾದ್ ಮಳೆ ನೀರಿನಲ್ಲಿ ಕೊಚ್ಚಿಹೋಗಿ ಜೀವ ತೆತ್ತಿರುವ ಘಟನೆ ನಮ್ಮ ಕಣ್ಣಮುಂದಿದೆ. ಹಲವೆಡೆ ಮನೆಗಳಿಗೂ ನೀರುನುಗ್ಗಿ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಆದ ಕಾರಣ ಈ ಬಾರಿ ಮಳೆಗಾಲದಲ್ಲಿ ಯಾವುದೇ ಅನಾಹುತವಾಗದಂತೆ ಪೂರ್ವ ಮುಂಗಾರು ಆರಂಭವಾಗುವ ಮುನ್ನವೇ ಪೂರ್ವಸಿದ್ದತೆ ಮಾಡಿಕೊಂಡು ಸಜ್ಜಾಗಬೇಕಾಗಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮಾಜಿ ಶಾಸಕ ಡಾ. ರಫೀಕ್ ಅಹ್ಮದ್ ಎಚ್ಚರಿಸಿದ್ದಾರೆ.
ನಗರದ ರಾಜಕಾಲುವೆ, ರಸ್ತೆಬದಿ ಚರಂಡಿಗಳು, ಶೋಲ್ಡರ್ ಡ್ರೆöÊನ್ಗಳಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಿ ಮಳೆನೀರು ಸರಾಗವಾಗಿ ಹರಿದುಹೋಗುವಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಶೆಟ್ಟಿಹಳ್ಳಿ ಅಂಡರ್ ಪಾಸ್, ಕುಣಿಗಲ್ ರೋಡ್ ನಲ್ಲಿರುವ ಅಂಡರ್ಪಾಸ್, ಹೆಗ್ಗಡೆಕಾಲೋನಿ ಹತ್ತಿರದ ರಿಂಗ್ರೋಡ್ ನಲ್ಲಿರುವ ಅಂಡರ್ಪಾಸ್, ಭೀಮಸಂದ್ರದ ಅಂಡರ್ ಪಾಸ್ನಲ್ಲಿರುವ ಮಣ್ಣು, ಕಸಕಡ್ಡಿಗಳನ್ನು ಈಗಲೇ ಸ್ವಚ್ಚಗೊಳಿಸಿ ನಿರ್ವಹಣೆ ಮಾಡಿದರೆ ಮುಂದಾಗುವ ಅನಾಹುತಗಳು ತಪ್ಪಲಿವೆ ಎಂದು ಮಾಜಿ ಶಾಸಕರು ತಿಳಿಸಿದ್ದಾರೆ. ಈಗ ನಿಷ್ಕಾಳಜಿ ತೋರಿಸಿ ಅನಾಹುತಗಳಾದಾಗ ಸಮಜಾಯಿಷಿ ನೀಡುವುದು ಬಿಟ್ಟು ಎಲ್ಲಾ ಸಂಬAಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುವಂತೆ ಡಾ. ರಫೀಕ್ ಅಹ್ಮದ್ ಒತ್ತಾಯಿಸಿದ್ದಾರೆ.