ತುಮಕೂರು : ನಗರದ ಶೆಟ್ಟಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ನೃಪತುಂಗ ಬಡಾವಣೆ ಬಸ್ ನಿಲ್ದಾಣ ಹಾಗೂ ದಲಿತ ಕಾಲೋನಿಗೆ ಹೊಂದಿಕೊoಡoತೆ ಹೊಸದಾಗಿ ತೆರೆಯುತ್ತಿರುವ ಮದ್ಯದ ಅಂಗಡಿಗೆ ನೀಡಿರುವ ಲೈಸನ್ಸ್ ಅನ್ನು ವಾಪಸ್ ಪಡೆಯುವಂತೆ ಮಾದಿಗ ದಂಡೋರ ಸಮಿತಿ ವತಿಯಿಂದ ಒತ್ತಾಯಿಸಲಾಯಿತು.
ನಗರದಲ್ಲಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ಪಿ.ಎನ್.ರಾಮಯ್ಯ ಮಾತನಾಡಿ ಶೆಟ್ಟಿಹಳ್ಳಿ ಮುಖ್ಯ ರಸ್ತೆ, ನೃಪತುಂಗ ಬಡಾವಣೆ ಮತ್ತು ಜನತಾ ಕಾಲೋನಿಯ ನಿವಾಸಿಗಳು ಹಾಗೂ ವಿದ್ಯಾರ್ಥಿಗಳು ಇಲ್ಲಿ ಇದ್ದು ದಲಿತರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು, ಕಾಲೇಜು ಸೇರಿದಂತೆ ಹಲವು ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಹೆಚ್.ಎಂ.ಎಸ್ ಶಾಲಾ ಸಂಸ್ಥೆಗಳು, ಪಾರ್ಕ್ಗಳು ಹಾಗೂ ದೇವಾಲಯಗಳಿವೆ. ಇದಕ್ಕೆ ಹೊಂದಿಕೊoಡoತೆ ಕೆಲವೇ ಅಂತರದಲ್ಲಿ ಪಿ.ಎನ್.ಎಸ್ ಆರ್ಕೇಡ್ನಲ್ಲಿ ಮದ್ಯದಂಗಡಿ (ಬಾರ್ & ರೆಸ್ಟೋರೆಂಟ್) ತೆರೆಯಲು ಉದ್ದೇಶಿಸಿದ್ದು, ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗುವುದು, ಹಾಗೂ ಕಾನೂನು ಉಲ್ಲಂಘನೆ ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದಕ್ಕೆ ಅಧಿಕಾರಿಗಳ ಸಹಕಾರವು ಇದ್ದಂತ್ತಿದೆ. ಈ ಕಾಲೋನಿಗೆ ಹೊಂದಿಕೊoಡoತೆ ಮದ್ಯದಂಗಡಿ ತೆರೆದರೆ ಇಲ್ಲಿನ ದಲಿತರನ್ನು ಮತ್ತಷ್ಟು ಮದ್ಯವ್ಯಸನಿಗಳನ್ನಾಗಿಸಿ ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿ ಮಾಡಿ ಅನೇಕ ದಲಿತ ಕುಟುಂಬಗಳನ್ನು ಬೀದಿಗೆ ತರುವ ಉದ್ದೇಶವಿದೆ ಎಂದರು.
ಮುoದುವರೆದು ಮಾತನಾಡುತ್ತಾ ರಸ್ತೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರೀಕರು, ಮಹಿಳೆಯರು, ಹಾಗೂ ಮಕ್ಕಳು ಹೆಚ್ಚು. ಓಡಾಡುತ್ತಿರುವುದರಿಂದ ಮದ್ಯವ್ಯಸನಿಗಳಿಂದ ತೊಂದರೆಗೊಳಗಾಗುತ್ತಾರೆ. ಈ ಕಾಲೋನಿಗೆ ಹೊಂದಿಕೊoಡತೆ ಈಗಾಗಲೇ ವೈನ್ಸ್ ಸೆಂಟರ್ ಒಂದು ಕಾರ್ಯನಿರ್ವಹಿಸುತ್ತಿದ್ದು ಅದರ ಹಿಂದೆ ಸರ್ಕಾರಿ ಶಾಲೆಯಂದು ಇದೆ ಇದರ ಪರಿವಿಲ್ಲದೆ ಅಧಿಕಾರಿಗಳು ವೈನ್ಸ್ ಓಪನ್ ಮಾಡಲು ಪರವಾನಗಿ ನೀಡಿದ್ದಾರೆ ಇದರಿಂದ ರಸ್ತೆಯಲ್ಲಿ ಅಪಘಾತ ಕ್ಷುಲಕ ಕಾರಣಕ್ಕೆ ಗಲಾಟೆಗಳು ಸೇರಿದಂತೆ ಇತರೆ ಚಟುವಟಿಕೆಗಳು ನಡೆಯುತ್ತಿರುವುದರಿಂದ ಇದರಿಂದಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದರು.
ಪ್ರತಿಷ್ಠಿತ ಬಡಾವಣೆಗಳಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಸ್ಥಳೀಯ ರಾಜಕಾರಣಿಗಳು ಹಾಗೂ ಮೇಲ್ಮಟ್ಟದ ಅಧಿಕಾರಿಗಳ ಕುಮಕಿನಿಂದ ಇದು ಸಾಧ್ಯವಾಗುತ್ತಿದ್ದು ಕೂಡಲೇ ನಗರ ಶಾಸಕ ಜ್ಯೋತಿ ಗಣೇಶ್, ಸಂಸದ ಬಸವರಾಜು ಪಾಲಿಕೆ ಆಯುಕ್ತರಾದ ಬಿ ಅಶ್ವಿಜಾ ಅವರು ಬಾರ್ ಅಂಡ್ ರೆಸ್ಟೋರೆಂಟ್ ತೆರೆಯದಂತೆ ಅಬಕಾರಿ ಇಲಾಖೆಯ ಅಧಿನಿಯಮದ ಅಡಿಯಲ್ಲಿ ಸೂಕ್ತ ಕ್ರಮ ವಹಿಸಬೇಕು ಎಂದರು.