ಕಲ್ಬುರ್ಗಿ ನಗರದಲ್ಲಿರುವ ಎಸ್. ಎಂ .ಪಂಡಿತ್ ರಂಗಮಂದಿರದಲ್ಲಿ ವಾಗಿಣಗೇರಿ ಗೋಪಣ್ಣ ದೊಡ್ಮನಿ ಅರ್ಪಿಸುವ ಮಲ್ಲಿಗೆ ಸಿನಿ ಕಂಬೈನ್ಸ್ ರವರ ಮೊದಲನೇ ಮೊಗ್ಗು ಹುತಾತ್ಮ ಪಿ.ಎಸ್.ಐ ಮಲ್ಲಿಕಾರ್ಜುನ್ ಬಂಡೆ ಜೀವನಾದಾರಿತ ಬಂಡೇ ಸಾಹೇಬ್ ಎಂಬ ಚಲನ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಚಲನಚಿತ್ರದ ನಿರ್ಮಾಪಕರಾದ ವೀರಣ್ಣ ಕೊರಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರ ಕರ್ತವ್ಯದ ಸಮಯದಲ್ಲಿ ಯಾವ ರೀತಿಯಾಗಿ ನಿಷ್ಠಾವಂತರಾಗಿ ಕಾರ್ಯನಿರ್ವಹಿಸುತ್ತಿದ್ದರು ಸಂಪೂರ್ಣವಾಗಿ ತೋರಿಸುವಂತಹ ಪ್ರಯತ್ನ ಮಾಡಿದ್ದೇವೆ .ಉತ್ತರ ಕರ್ನಾಟಕದ ಕಲಾವಿದರು ಪ್ರೋತ್ಸಾಹಿಸುವಂತಹ ಕೆಲಸ ಮಾಡುತ್ತಿದ್ದೇವೆ ಎಂದರು. ತದನಂತರ ಮಾತನಾಡಿದ ಬಂಡೆ ಸಾಹೇಬರ ಪಾತ್ರ ಮಾಡಿದ ಪಾತ್ರಧಾರಿ ನಟ ಸಂತೋಷ ರಾಮ ಒಬ್ಬ ದಕ್ಷ ಅಧಿಕಾರಿಯ ಪಾತ್ರಲ್ಲಿ ನನಗೆ ನಟನೆ ಮಾಡಲು ಅವಕಾಶ ಸಿಕ್ಕಿದೆ ತುಂಬಾನೇ ಖುಷಿಯಾಗುತ್ತಿದೆ. ಇಂದಿನ ಯುವಕರಿಗೆ ನೀವು ಚೆನ್ನಾಗಿ ಓದಿ ಮಲ್ಲಿಕಾರ್ಜುನ್ ಬಂಡೆ ಅಂತಹ ದಕ್ಷ ಅಧಿಕಾರಿಯಾಗಿ ಸಮಾಜದ ಗೋಸ್ಕರ ಒಳ್ಳೆಯ ಕೆಲಸ ಕಾರ್ಯ ಮಾಡಿ ಎಂದು ಒಂದು ಒಳ್ಳೆಯ ಸಂದೇಶ ಸಾರಿದರು .ಹಾಗೆ ಚಿತ್ರನಟಿ ಕಾವ್ಯ ಅವರು ಕೂಡ ಈ ಬಂಡೆ ಸಾಹೇಬ್ ಚಲನಚಿತ್ರ ದಕ್ಷ ಅಧಿಕಾರಿಯ ಪತ್ನಿಯ ಪಾತ್ರ ಸಿಕ್ಕಿದ್ದು ತುಂಬಾನೇ ಹೆಮ್ಮೆ ಅನಿಸುತ್ತದೆ .ಈ ಚಿತ್ರ ತಾವೆಲ್ಲರೂ ಚಿತ್ರಮಂದಿರದಲ್ಲಿ ಕುಟುಂಬ ಸಮೇತ ಬಂದು ನೋಡಿ ಈ ಎಲ್ಲಾ ಚಿತ್ರ ತಂಡದವರಿಗೆ ಪ್ರೋತ್ಸಾಹಿಸಿ ಎಂದರು.
ಬಂಡಿ ಸಾಹೇಬ್ ಚಿತ್ರದ ಖಳನಾಯಕನ ಪಾತ್ರದಲ್ಲಿ ಮುನ್ನಾ ಎಂಬ ಪಾತ್ರದಲ್ಲಿ ನಟಿಸಿದ ಫರವೇಜ ಸಿಂಭಾ ಚಿತ್ರದ ಕುರಿತು ಉತ್ತರ ಕರ್ನಾಟಕದ ಕಲಾವಿದರ ಪವರ್ ಕುರಿತು ಸುಧೀರ್ಘವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರಾದ ವೀರಣ್ಣ ಕೊರಳ್ಳಿ ,ಕಮಲಾ ದೊಡ್ಮನಿ, ನಟ ಸಂತೋಷ್ ರಾಮ್ ,ನಟಿ ದಿವ್ಯಾ ,ಮಲ್ಲಿಕಾರ್ಜುನ್ ಬಂಡೆ ಅವರ ಮಕ್ಕಳು , ನಿರ್ದೇಶಕ ಚಿನ್ಮಯಿ ರಾಮ್ , ಬಂಡೆ ಅವರ ಮಕ್ಕಳು ಮತ್ತು ಕುಟುಂಬಸ್ಥರು ಸೇರಿದಂತೆ ಹಲವು ಬಂಡೆ ಸಾಹೇಬರ ಅಭಿಮಾನಿಗಳು ಉಪಸ್ಥಿತರಿದ್ದರು.
ಬಂಡೆ ಸಾಹೇಬ್
The power of Police
ಕನ್ನಡ ಚಲನಚಿತ್ರದ ಆಡಿಯೋ ಬಿಡುಗಡೆ.