ಡಾ.ಜಿ.ಪರಮೇಶ್ವರ್ ಗೃಹ ಸಚಿವರು.
ನಗರದ ಬಡ್ಡಿಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಮಾನ್ಯ ಗೃಹ ಸಚಿವರು ಹಾಗೂ ತುಮಕೂರು ಉಸ್ತುವಾರಿ ಸಚಿವರಾದ ಡಾ.ಜಿ ಪರಮೇಶ್ ರವರಿಗೆ ತುಮಕೂರು ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಇಸ್ಮಾಯಿಲ್ ನಗರ ನಾಗರೀಕರ ಹಿತರಕ್ಷಣಾ ಸಮಿತಿ ವತಿಯಿಂದ ಹಂದಿಜೋಗಿ ಕುಟುಂಬಗಳಿಗೆ ಪುನರ್ ವಸತಿ ಮತ್ತು ಮೂಲಭೂತ ಸೌಕರ್ಯ ನೀಡಲು ಒತ್ತಾಯಿಸಿ ಮನವಿ ನೀಡಲಾಯಿತು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಅವರು ತುರ್ತು ಕ್ರಮವಹಿಸಿ ೬೦ ಹಂದಿ ಜೋಗಿ ಕುಟುಂಬಗಳಿಗೆ ನಗರದ ೪ ಕಿ.ಮೀ ಸಮೀಪದಲ್ಲಿ ಭೂಮಿ ಹುಡುಕಿ ವಿಶೇಷ ಪ್ರಕರಣವೇಂದು ಪರಿಗಣಿಸಿ ಪುನರ್ ವಸತಿಗೊಳಿಸಲು ಜಿಲ್ಲಾಧಿಕಾರಿಗಳಾದ ಶ್ರೀನಿವಾಸ್ ಮತ್ತು ಮಹಾನಗರ ಪಾಲಿಕೆ ಆಯುಕ್ತರಾದ ಅಶ್ವಿಜ ಬಿ.ವಿ ರವರಿಗೆ ಸೂಚಿಸಿದರು. ಪುನರ್ಗೊಳಿಸುವವರೆವಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಪ್ರತಿಕ್ರಿಯಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀನಿವಾಸ್ ರವರು ಈ ಕುರಿತು ಹೊನ್ನೇನಹಳ್ಳಿ ಯಲ್ಲಿ ನಿರ್ಮಾಣಕ್ಕೆ ಸಿದ್ದವಾಗಿರುವ ಪಿಎಂಎವೈ ಯೋಜನೆಯಡಿ ೧೯೨ ಜಿ+ ಬಹುಮಹಡಿ ವಸತಿ ಸಮುಚ್ಚಯಗಳಲ್ಲಿ ಈ ೬೦ ಕುಟುಂಬಗಳಿಗೆ ಪುನರ್ ವಸತಿಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಈ ಸಮುದಾಯದವರು ಜೀವನಾದರಿತ ಕಸುಬುಗಳಿಗೆ ತೊಂದರೆ ಉಂಟಾಗುತ್ತದೆ ಇದರಿಂದ ಬಹುಮಹಡಿ ವಸತಿ ಸಮುಚ್ಚಯ ಬೇಡವೆಂದು ತಿಳಿಸಿದ್ದಾರೆ ಇವರ ಜೀವನಾಧಾರಿತ ಕುಲಕಸುಬುಗಳಿಗೆ ಪೂರಕವಾಗಿ ನಗರದ ಸಮೀಪದಲ್ಲಿ ನಿವೇಶನ ಹುಡುಕಿ ನೀಡಲು ತುರ್ತು ಕ್ರಮವಹಿಸಲಾಗುವುದೆಂದು ತಿಳಿಸಿದರು.
ಬನಶಂಕರಿ ಇಸ್ಮಾಯಿಲ್ ನಗರದ ಹಂದಿಜೋಗಿ ಕುಟುಂಬಗಳಿಗೆ ನಿವೇಶನ ನೀಡಲು ಬದ್ಧ
Leave a comment
Leave a comment