ಸಹಸ್ರಾರು ಮಹಿಳಾ ಮಣಿಗಳಿಂದ ಜಾಗೃತಿ ಜಾಥಾ
ತುಮಕೂರು:- ಸಹಸ್ರಾರು ಮಹಿಳೆಯರಿಂದ ಹೊಸ ಸಾಮಾಜಿಕ ಕಾರ್ಯಕ್ರಮದ ಕಡೆಗೆ ಜಾಗೃತಿ ಜಾಥಾ ನಡೆಯಿತು.
ತುಮಕೂರು ನಗರದ ಟೌನ್ ಹಾಲ್ ವೃತ್ತದಿಂದ ಅಮಾನಿಕೆರೆ ಗಾಜಿನಮನೆಯವರೆಗೂ ಧಾನ್ ಫೌಂಡೇಷನ್ ವತಿಯಿಂದಜಾಗೃತಿ ಜಾಥಾವನ್ನು ಆಯೋಜಿಸಲಾಗಿತ್ತು. ಸಹಸ್ರಾರು ಮಹಿಳೆಯರು ಈ ಜಾಥಾದಲ್ಲಿ ಭಾಗಿಯಾಗಿದ್ದರು. ಈ ಜಾಗೃತಿ ಜಾಥಾಕ್ಕೆ ಜಾನಪದ ಕಲಾತಂಡಗಳು ಮೆರುಗನ್ನು ತಂದವು. ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಗಣ್ಯರು ಹಾಜರಿದ್ದರು. ಈ ಜಾಗೃತಿ ಜಾಥಾಕ್ಕೆ ನಗರಠಾಣೆ ಸಬ್ ಇನ್ಸ್ಪೆಕ್ಟರ್ ಭಾರತಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಜಿಲ್ಲಾ ಕೋಆರ್ಡಿನೇಟರ್ ವಸಂತಕುಮಾರ್ ಮಾತನಾಡಿ, ಪ್ರತಿ ವರ್ಷದಿಂದ ಈ ವರ್ಷವೂ ಸಹ ಧಾನ್ ಫೌಂಡೇಷನ್ ವತಿಯಿಂದ ಜಾಗೃತಿ ಜಾಥಾವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲಾ ಭಾಗಗಳಿಂದ ಮಹಿಳೆಯರು ಈ ಜಾಥಾದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.
ಅರುಣೋದಯ ಒಕ್ಕೂಟದ ಪವಿತ್ರಾ ಮಾತನಾಡಿ, ಪ್ರತಿ ವರ್ಷವೂ ಒಂದೊoದು ಥೀಮ್ ನೊಂದಿಗೆ ಜಾಗೃತಿ ಜಾಥಾವನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು ಈ ವರ್ಷ ಎನ್ ಎಸ್ ಒ ವಿಷಯದ ಕುರಿತು ಜಾಗೃತಿ ಜಾಥಾವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಜಾಥಾದಲ್ಲಿ ನೂರಾರು ಮಹಿಳೆಯರು ಭಾಗಿಯಾಗಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಮಹಿಳೆಯರು ಆಗಮಿಸಿದ್ದರು