ತುಮಕೂರು: ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಪ್ಯಾರಾ ಮೆಡಿಕಲ್ ವಿಭಾಗದ ವತಿಯಿಂದ ಜೂನ್ ೫ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ನಡೆಯಿತು.
ಟೌನ್ಹಾಲ್ ಸರ್ಕಲ್ನಿಂದ ಆರಂಭಗೊAಡ ಜಾಗೃತಿ ಜಾಥಾದಲ್ಲಿ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು. ಜಾಥಾದಲ್ಲಿ ಪರಿಸರ ಸಂರಕ್ಷಣೆ ಕುರಿತು ಘೋಷಣೆ ಕೂಗುತ್ತ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೊರ್ಟ್ ಸರ್ಕಲ್ಗೆ ತಲುಪಿತು.
ಈ ಸಂದರ್ಭದಲ್ಲಿ ಸಾಹೇ ವಿಶ್ವವಿದ್ಯಾಲಂiÀiದ ಉಪಕುಲಸಚಿವರು ಡಾ.ಸುದೀಪಕುಮಾರ್.ಎಂ ಮಾತನಾಡಿ, ಭೂಮಿ ನಮ್ಮೇಲ್ಲರ ಏಕೈಕ ಮನೆಯಾಗಿದೆ. ಮುಂಬರುವ ಪೀಳಿಗೆಗೆ ನಾವು ಇದನ್ನು ಉಳಿಸಬೇಕಾಗಿದೆ. ಮಾಲಿನ್ಯ ಮುಕ್ತ ಮತ್ತು ಹಸಿರು ಭೂಮಿಯಿಂದ ತುಂಬಿರುವ ಜೀವನ ಶೈಲಿಯನ್ನು ರಚಿಸುವುದು ನಮ್ಮೇಲ್ಲರ ಹೊಣೆಯಾಗಿದೆ ಎಂದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಅದನ್ನು ಉಳಿಸಿ ಬೆಳೆಸುವ ಮೂಲಕ ವಿದ್ಯಾ8ರ್ಥಿಗಳು, ನಾವುಗಳು ಸೇರಿ ಪರಿಸರದ ಕುರಿತು ಜನ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.
ಜಾಗೃತಿ ಜಾಥಾದಲ್ಲಿ ಡಾ.ವೀಣಾ ಕೃಷ್ಣ ಮೂರ್ತಿ, ಡಾ.ನೇಹಾ, ಶಶಿಕುಮಾರ್, ಆಶಾ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ
Leave a comment
Leave a comment