ಚನ್ನಪಟ್ಟಣದ ಗೊಂಬೆಗಳ ರೀತಿಯಲ್ಲಿ ಮರದಿಂದ ಅಥವಾ ಕಟ್ಟಿಗೆಯಿಂದ ಮಾಡಿದ ಆಟಿಕೆಗಳನ್ನು ಕೊಡಿಸುವ ಮೂಲಕ ಮಕ್ಕಳಲ್ಲಿ ಈಗಿನಿಂದಲೇ ಪ್ಲಾಸ್ಟಿಕ್ ಬಳಕೆಯನ್ನು ಬಾಲ್ಯದಿಂದಲೇ ನಿಷೇದಿಸುವ ಮೂಲಕ ಅವರಿಗೂ (ಮುಂದಿನ ಪೀಳಿಗೆಗೂ) ಅರಿವು ಮೂಡಿಸಬೇಕೆಂದರು. ಎಪಿಎಂಸಿಯ ಸಹಕಾರ್ಯದರ್ಶಿ ಲಕ್ಷಿö್ಮÃಕಾಂತಯ್ಯ ಮಾತನಾಡಿ ಒಳ್ಳೆಯದೂ ಕೆಟ್ಟದ್ದು ಎರಡೂ ಕೂಡ ನಮ್ಮ ಜೀವನದಲ್ಲಿ ಬರುತ್ತದೆ. ನಾವು ಒಳ್ಳೆಯದನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತೇವೋ ಹಾಗೆಯೇ ಪ್ಲಾಸ್ಟಿಕ್ ಬ್ಯಾಗ್ ಮತ್ತು ಬಟ್ಟೆ ಬ್ಯಾಗ್ ಇವೆರಡರಲ್ಲಿ ನಾವು ಬಟ್ಟೆ ಬ್ಯಾಗ್ ಆಯ್ಕೆ ಮಾಡಿಕೊಳ್ಳುವುದರ ಮೂಲಕ ಒಳ್ಳೆಯ ಪರಿಸರ ರೂಪಿಸುವಲ್ಲಿ ನಾವೆಲ್ಲರೂ ಕೈ ಜೋಡಿಸಬೇಕೆಂದರು. ಇದೇ ಸಂದರ್ಭದಲ್ಲಿ ಸ್ವಚ್ಛತಾ ಸಿಬ್ಬಂದಿಗಳಿಗೆ ಸಮಿತಿಯು ಸನ್ಮಾನ ಮಾಡುವುದರ ಮೂಲಕ ಮತ್ತು ಮಾರುಕಟ್ಟೆಯನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಅಭಿಯಾನ ಅರ್ಥಪೂರ್ಣವಾಗುವಂತೆ ಮಾಡಿದರು. ಮಾರುಕಟ್ಟೆಯ ಮುಖಂಡರಾದ ಹಾಗೂ ವರ್ತಕರಾದ ವಾಸುದೇವ್, ಎನ್.ಎಲ್ ಲಕ್ಷಿö್ಮÃನಾರಾಯಣ, ಈಶ್ವರ್ ಗುಪ್ತ, ಹಮಾಲಿ ಸಂಘದ ಪದಾದಿಕಾರಿಗಳು ಎಪಿಎಂಸಿಯ ಸಿಬ್ಬಂದಿಗಳು ಹಾಜರಿದ್ದರು.