ತುಮಕೂರು:ಮಾದಕ ವಸ್ತು ದಿನಾಚರಣೆ ಪ್ರಯುಕ್ತ ದುಶ್ಚಟ ದುರಭ್ಯಾಸಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜಿಲ್ಲಾ ಜನಜಾಗೃತಿ ವೇದಿಕೆ ಸಹಕಾರದಿಂದ ತುಮಕೂರು ತಾಲ್ಲೋಕು,ಹೊನ್ನುಡಿಕೆ ಗ್ರಾಮದ ಮನೋಜ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಮನಃಶಾಶ್ತçಜ್ಞರಾದ ಸಿ.ಸಿ.ಪಾವಟೆ ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಳಕೆಯಿಂದ ದೂರವಿರಬೇಕು,ಇಂದು ಭಾರತದಲ್ಲಿ ಯುವ ಶಕ್ತಿಯಿಂದ ನಮ್ಮ ದೇಶ ಇಡೀ ವಿಶ್ವದಲ್ಲಿಯೇ ಆರ್ಥಿಕವಾಗಿ ೫ನೇ ಸ್ಥಾನದಲ್ಲಿದೆ ಅದಕ್ಕೆ ಕಾರಣ ನಮ್ಮಲ್ಲಿರುವ ಯುವಕ-ಯುವತಿಯರ ಬುದ್ಧಿವಂತಿಕೆಯಿAದ,ತAದೆ-ತಾಯಿಯರು ತಮ್ಮ ಮಕ್ಕಳನ್ನು ಓದಲು ನಂಬಿಕೆಯಿಟ್ಟು ಕಾಲೇಜಿಗೆ ಕಳಿಸುತ್ತಿದ್ದಾರೆ ಅವರ ನಂಬಿಕೆಯನ್ನು ಉಳಿಸಬೇಕು,ವಿದ್ಯಾರ್ಥಿಗಳು ಯಾವುದೇ ದುಶ್ಚಟಕ್ಕೆ ದಾಸರಾಗದೆ ಉತ್ತಮ ಸಂಸ್ಕಾರವAತರಾಗಿ,ಬುದ್ಧಿವAತರಾಗಿ ನಾಲ್ಕು ಜನಕ್ಕೆ ಬೇಕಾದ ವ್ಯಕ್ತಿಗಳಾಗಿ ತಮ್ಮನ್ನು ತಾವು ರೂಪಿಸಿಕೊಂಡು ಇತರರಿಗೆ ಮಾದರಿಯಾಗಬೇಕು,ಇಂದು ಓದಲು ವಿದ್ಯಾಭ್ಯಾಸ ನಡೆಸಲು ಹಲವು ಅನುಕೂಲವಿದೆ,ಅವುಗಳನ್ನು ಉಪಯೋಗಿಸಿಕೊಂಡು ಶಿಕ್ಷಕರ ಮಾರ್ಗದರ್ಶನದೊಂದಿಗೆ ತಾವು ಅಂದುಕೊAಡ ಗುರಿ ತಲುಪಬೇಕು,ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಟಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಮಾರ್ಗದರ್ಶನ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ತಾಲ್ಲೋಕು ಯೋಜನಾಧಿಕಾರಿಗಳಾದ ಶ್ರೀಮತಿ ಸುನಿತಾಪ್ರಭುರವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಭೆಯಲ್ಲಿ ಜಿಲ್ಲಾ ಜನಜಾಗೃತಿ ಅಧ್ಯಕ್ಷರಾದ ಅಮರಾನಾಥ್ ಶೆಟ್ಟಿ, ಪ್ರಾಂಶುಪಾಲರಾದ ಚಿನ್ನಸ್ವಾಮಿ, ಅಮಿತ್ ಪಾಷಾ ತಾಲೋಕು ಸಮನ್ವಯಧಿಕಾರಿಗಳು, ಪುಟ್ಟಭದ್ರಯ್ಯ, ಸಮಾಜ ಸೇವಕರು, ವಲಯ ಮೇಲ್ವಿಚಾರಕರಾದ ಮಹಂತೇಶ್,ಉಪನ್ಯಾಸಕರಾದ ಶಿವಣ್ಣ, ವೈ.ಆರ್.ತಿಪ್ಪೇಶ್ ಮತ್ತು ಸೇವಾಪ್ರತಿನಿಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಾದಕ ವಸ್ತು ದಿನಾಚರಣೆ ಪ್ರಯುಕ್ತ ದುಶ್ಚಟ ದುರಭ್ಯಾಸಗಳ ಬಗ್ಗೆ ಅರಿವು
Leave a comment
Leave a comment