ಪ್ರಚಲಿತ ದಿನಗಳಲ್ಲಿ ಎಲ್ಲಾ ಬ್ಯಾಂಕ್ಗಳ ಬಡ್ಡಿ ಧರ ಇಳಿಕೆಯಾಗಿದ್ದು ಎಲ್.ಐ.ಸಿ.ಯ ಜೀವನ್ ಶಾಂತಿ / ಜೀವನ್ ಅಕ್ಷಯ್ ಪಾಲಿಸಿಗಳಲ್ಲಿ ಆಕರ್ಷಣಿಯ ಬಡ್ಡಿ ಧರ ಹಾಗೂ ಜೀವ ವಿಮಾ ಭದ್ರತೆ ದೊರಕುತ್ತಿದ್ದು ಈ ಬಗ್ಗೆ ಗ್ರಾಹಕರಿಗೆ ಹೆಚ್ಚಿನ ಅರಿವು ಮೂಡಿಸುವಂತೆ ಪ್ರತಿನಿಧಿಗಳಿಗೆ ಭಾರತೀಯ ಜೀವ ವಿಮಾ ನಿಗಮದ ಮಾರುಕಟ್ಟೆ ವ್ಯವಸ್ಥಾಪಕರಾದ ಶ್ರೀಮತಿ ಜಾಕ್ವಲೆನ್ ಅಬ್ರಹಾಮ್ ತಿಳಿಸಿದರು.
ಅವರು ಇಂದು ನಡೆದ ತುಮಕೂರು ಎಲ್.ಐ.ಸಿ ಶಾಖೆ ೧ ರ ಜೀವನ್ ಗಂಗಾ ಕಟ್ಟಡಕ್ಕೆ ೨೫ ವಸಂತಗಳ ಸಂಭ್ರಮಾಚರಣೆಯ ಕಾರ್ಯಕ್ರಮಕ್ಕೆ ಚಾಲಕ್ಕೆ ನೀಡಿ ಮಾತನಾಡಿ ಎಲ್.ಐ.ಸಿ. ಈವರೆವಿಗೆ ೨೩೯ ಕೋಟಿ ಜೀವ ವಿಮಾ ಪಾಲಿಸಿಗಳ ಹಣವನ್ನು ಗ್ರಾಹಕರಿಗೆ ಇತ್ಯರ್ಥಪಡಿಸಿದೆ, ಭಾರತೀಯ ಜೀವ ವಿಮಾ ವಿಭಾಗ ೧ ರಲ್ಲಿ ೧೫ ಲಕ್ಷ ಜನ ಹಳೆ ಪಾಲಿಸಿದಾರರು ಕೇವಲ ಒಂದು ಪಾಲಿಸಿಯುಳ್ಳವರಾಗಿದ್ದು ಅಂತಹವರನ್ನ ಹೆಚ್ಚು ಹೆಚ್ಚು ಸಂಪರ್ಕ ಮಾಡಿ ಹೆಚ್ಚಿನ ವ್ಯವಹಾರ ಮಾಡುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಿ ಎಂದು ಕರೆ ನೀಡಿದರು.
ಭಾರತೀಯ ಜೀವ ವಿಮಾ ವಿಭಾಗದ ಹಿರಿಯ ಶಾಖಾ ವ್ಯವಸ್ಥಾಪಕರಾದ ಗಾಳಪ್ಪ ತಾಳವಾರ್ರವರು ಮಾತನಾಡಿ ಎಲ್.ಐ.ಸಿ. ಶಾಖೆ ೧ರ ನೂತನ ಕಟ್ಟಡ ಈಗ್ಗೆ ೨೫ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾವು ಶಾಖೆಗೆ ೩೧ನೇ ಹಿರಿಯ ಶಾಖಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಶಾಖಾ ಸಿಬ್ಬಂದಿ ಹಾಗೂ ಪ್ರತಿನಿಧಿಗಳ ಸಹಕಾರದಲ್ಲಿ ಶಾಖೆಯನ್ನು ಉನ್ನತ ಮಟ್ಟಕ್ಕೇರಿಸುವಲ್ಲಿ ಯಾವುದೇ ಅನುಮಾನವಿಲ್ಲ ತುಮಕೂರು ಶಾಖೆ ೧ ಎಲ್.ಐ.ಸಿ. ಬೆಂಗಳೂರು ವಿಭಾಗ ೧ರ ಎಲ್ಲಾ ರೀತಿಯ ಸಾಧನೆಗಳಿಗೆ ಅಡಿಪಾಯವೆಂದರೆ ಅತಿಶಯೋಕ್ತಿಯಲ್ಲ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಖಾಧಿಕಾರಿ ಗಂಗಾಧರ್, ಐಡಿಬಿ ಡಿಜಿಎಂ ಬಾಲಚಂದ್ರನ್, ಆರ್.ಎಂ. ತಿಮ್ಮಾರೆಡ್ಡಿ, ಗ್ರಾಮ ಪುರೋಹಿತ್ ರಘುಪತಿ, ಸಹಾಯಕ ಶಾಖಾಧಿಕಾರಿ ಬಾಲಸುಬ್ರಹ್ಮಣ್ಯಂ ಹಾಗೂ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.