ಮಣಿಪುರದ ದೌಜನ್ಯ- ನಗರದಲ್ಲಿ ಪತ್ರಿಭಟನೆ
ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯ ಅಪರಾಧಿಗಳು ನಿರ್ಭಯ ಮತ್ತು ನಿರ್ಲಜ್ಜೆತನದಿಂದ ಇಬ್ಬರು ಮಹಿಳೆಯರನ್ನು ಅತ್ಯಾಚಾರವೇಸಗಿರುವ ಘಟನೆಯನ್ನು ಖಂಡಿಸಿ , ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಮುಂದಾಳತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು . ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣೀಗೆ ನಡೆಸಿರುವ ಅಪರಾಧಿಗಳು ಅದರ ವೀಡಿಯೋಗಳನ್ನು ರೆಕಾರ್ಡ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವುದನ್ನು ಕಟುವಾಗಿ ಟೀಕಿಸಿದ ಪ್ರತಿಭಟನಾಕಾರರು ಇದು ಬದುಕುಳಿದಿರುವವರ ಘನತೆ ಮತ್ತು ಹಕ್ಕುಗಳ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟರು
ಮೇ ೩ ರಂದು ಮಣಿಪುರದ ಜನಾಂಗಿಯ ಹಿಂಸಾಚಾರ ಪ್ರಾರಂಭವಾಗಿದೆ. ಮೇ ೪ ರಂದು ಈ ಘಟನೆ ನಡೆದಿದೆ , ಈ ಕುರಿತು ಕೇವಲ ಎಫ್, ಐ ಆರ್ ಮಾತ್ರ ಮಾಡಿ ಮುಂದಿನ ಕ್ರಮವಹಿಸದೆ ಇರುವುದು ಪೋಲಿಸರ ನಿರಾಸಕ್ತಿ ಮತ್ತು ಅಡಳಿತ ಪಕ್ಷ ಮತ್ತು ಪೋಲಿಸರು ಅಪರಾಧಿಗಳನ್ನು ರಕ್ಷಿಸುವಂತೆ ಬಾಸವಾಗಿದೆ ಈ ಕರ್ತವ್ಯ ನಿರ್ಲಕ್ಷನು ಪ್ರತಿಭಟನಾಕಾರರು ಖಂಡಿಸಿದರು. ಮಣಿಪುರದಲ್ಲಿ ಮಹಿಳೆಯರನ್ನು ಬಲಿಪಶುಗಳಾಗಿ ಮಾಡುತ್ತಿದ್ದರು ಕೇಂದ್ರ – ರಾಜ್ಯ ಸರ್ಕಾರಗಳು [ ಮಣಿಪುರ ರಾಜ್ಯ ಸರ್ಕಾರ] ಕಠಿಣ ಕ್ರಮವಹಿಸದೆ ಇರುವುದನ್ನು ತ್ರೀರ್ವವಾಗಿ ವಿರೋಧಿಸಲಾಯಿತು , ಎಲ್ಲಾ ಅರೋಫಿಗಳ ವಿರುದ್ದ ಕಾನೂನು ಕ್ರಮವನ್ನು ತ್ವರಿತವಾಗಿ ಕೈಗೊಂಡು ಕಠಿಣ ಶಿಕ್ಷೆ ವಿಧಿಸಲು ಅಗ್ರಹಿಸಿದರು . ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಇದರಲ್ಲಿ ವಿಪಲತೆ ಅರಾಜಕತೆ ಹುಟ್ಟು ಹಾಕುತ್ತದೆ .
ಪ್ರತಿಭಟನೆಯನ್ನು ಉದ್ದೇಶಿ ಬಾ.ಹ. ರಮಾಕುಮಾರಿ, ಮಲ್ಲಿದಾ ಬಸವರಾಜು, ಗಂಗಮ್ಮ, ಪ್ರವಿಣೀ, ಕಲ್ಯಾಣಿ, ಸೈಯದ್ ಮುಜೀಬ್, ನರಸಿಂಹಮೂರ್ತಿ, ಡಾ; ಮುರಳಿಧರ, ಟಿ.ಅರ್. ಕಲ್ಪನಾ, ಡಾ; ರಶ್ಮಿ, ರಾಣಿ ಚಂದ್ರಶೇಖರ್, ಅಪ್ಸರ್ ಪಾಷ, ತಾಜುದ್ದಿನ್ ಶರೀಪ್ ವಕೀಲರಾದ ರಶ್ಮಿ, ಮಂಜುಳ, ಮುತ್ತಾಜ್, ಅನುಪಮ ನರಸಿಂಹ ಮೂರ್ತಿ, ಮಾತನಾಡಿದದರು.
ಪ್ರತಿಭಟನೆಯಲ್ಲಿ ಎನ್.ಕೆ. ಸುಬ್ರಮಣ್ಯ, ರತ್ನಮ್ಮ, ಪಾರ್ವತಮ್ಮ ರಾಜ್ ಕುಮಾರ್, ಗಂಗಲಕ್ಷಿö್ಮ, ಡಿಸಾ ಲೊಕೇಶ್, ಷಣ್ಮಖಪ್ಪ, ಚಂದ್ರಶೇಖರ್, ನಟರಾಜಪ್ಪ, ತಿರುಮಲಯ್ಯ, ರಾಘವೇಂದ್ರ ಎಸ್,ಇದ್ದರು
ಅರಂಭದಲ್ಲಿ ಆರುಣ್ ಮತ್ತು ಸಂಗಡಿಗರು ಹೋರಾಟ ಗೀತೆಯನ್ನು ಹಾಡಿದರು.