ಮಧುಗಿರಿ ತಾಲೂಕಿನ ಪುರಸಭೆಯಿಂದ ತಾಲೂಕು ವೈದ್ಯಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯು ಸಾಗಿ ವೈದ್ಯಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ ಆಶಾಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಐಯುಟಿಯುಟಿ ಸಂಘಟನೆಯ ಅಶ್ವಿನಿ: ದಿನದಲ್ಲಿ ಕೇವಲ ಎರಡು ಗಂಟೆಗಳ ಕಾಲ ನಿಮಗೆ ಬಿಡುವಿದ್ದಾಗ ಸೇವೆ ಸಲ್ಲಿಸಿ ನಿಮ್ಮ ಹಳ್ಳಿಯ ಆರೋಗ್ಯ ಕಾಪಾಡಲು ಸಹಕರಿಸಿ ಎಂದು ಆಶಾಕಾರ್ಯಕರ್ತೆಯರನ್ನು ಕೆಲಸಕ್ಕೆ ತೆಗೆದುಕೊಂಡ ಆರೋಗ್ಯ ಇಲಾಖೆ ಕೆವಲ ಬಿಡಿಗಾಸಿನ ಗೌರವಧನ ನೀಡಿ ಕೆಲಸ ಮಾಡಿಸಿಕೊಳ್ಳೂತ್ತಿದೆ ಆಶಾಕಾರ್ಯಕರ್ತೆಯರ ಒಗ್ಗಟ್ಟಿನಿಂದ ಮಾಡಿದ ಅದೆಷ್ಟೋ ಅಹೋರಾತ್ರಿ ಹೋರಾಟಗಳ ಒತ್ತಡಕ್ಕೆ ಮಣಿದು ಈಗ ಕೆಲವು ವರ್ಷಗಳಿಂದ ಒಂದಿಷ್ಟು ಗೌರವಧನ ನಿಗದಿಯಾಗಿದೆ. ನಿಗದಿತ ಗೌರವಧನ ನೀಡುತ್ತಿದ್ದೇವೆಂಬ ಹೆಸರಿನಲ್ಲಿ ಎರಡು ಮೂರು ಜನ ಮಾಡುವ ಕೆಲಸವನ್ನು ಇವರೊಬ್ಬರ ಮೇಲೇರಿಸಲಾಗುತ್ತಿದೆ. ಇಲಾಖೆ ಈಗ ಕಳೆದ ಕೆಲ ದಿನಗಳಿಂದ ಮೊಬೈಲ್ನಲ್ಲಿ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆಗಳ ಈ-ಸಮೀಕ್ಷೆ ಮಾಡಲು ಆಶಾಗಳಿಗೆ ತರಬೇತಿ ನೀಡಿ, ಮೊಬೈಲ್ ಆ್ಯಪ್ ಮೂಲಕ ಮಾಡಬೇಕೆಂದು ಒತ್ತಾಯಿಸಲಾಗುತ್ತಿದೆ. ಆದರೆ ಆಶಾಗಳಿಗೆ ಮೊಬೈಲ್ ಮತ್ತು ಡಾಟಾ ನೀಡದೇ ಇರುವುದರಿಂದ ಮತ್ತು ತಂಡವಾಗಿ ಕೆಲಸ ಮಾಡಿಸದೇ ಒಂಟಿಯಾಗಿ ಆಶಾ ಕಾರ್ಯಕರ್ತೆಯರೇ ಸಮೀಕ್ಷೆ ಮಾಡಲು ಒತ್ತಡ ಹೇರಲಾಗುತ್ತಿದೆ ಮತ್ತು ಕೆಲವೆಡೆ ಗೌರವಧನ/ಪ್ರೋತ್ಸಾಹಧನ ಕೊಡುವುದಿಲ್ಲವೆಂದು ಬೆದರಿಕೆ ಹಾಕಲಾಗುತ್ತಿದೆ. ಸರ್ಕಾರಕ್ಕೆ ನಿಜವಾಗಿಯರೂ ರಾಜ್ಯದ ಆರೋಗ್ಯದ ಬಗ್ಗೆ ಕಾಳಜಿ ಇದ್ದಿದರೆ ಆಶಾಕಾರ್ಯಕರ್ತೆಯರನ್ನು ಸಿಬ್ಬಂದಿ ವರ್ಗವಾಗಿ ಖಾಯಂಮಾಡಿಕೊಳ್ಳ ಬಹುದಿತ್ತು. ಈ ಸಮೀಕ್ಷಗಳೂ ಅಷ್ಟು ಮುಖ್ಯವಾಗಿದ್ದರೆ ಇನ್ನಷ್ಟು ಜನರನ್ನು ಅದಕ್ಕಾಗಿ ನೇಮಕ ಮಾಡಿಕೊಂಡರೆ ಯಾರ ಮೇಲು ಒತ್ತಡವಿರುತ್ತಿರಲ್ಲಿ ನಿರುದ್ಯೋಗಿಗಳಿಗೆ ಕೆಲಸವು ಸಿಗುತ್ತಿತ್ತು. ಒಟ್ಟಾರೆಯಾಗಿ ನೋಡಿದರೆ ಆಶಾಗಳಿಗೆ ೧೫ ರಿಂದ ೩೦ ದಿನಗಳ ಕಾಲವಾಕಾಶ ಕೊಟ್ಟು ಆನ್ಲೈನ್ ಆಫ್ ಬಳಸಿ ಒಂದೊAದು ಕುಟುಂಬದ ಸಂಪೂರ್ಣ ಮಾಹಿತಿ ಸರ್ವೆಮಾಡಲು ಸಿಗದ ನೆಟ್ವರ್ಕ್ ಹುಡುಕಿ, ಅದಕ್ಕಾಗಿಯೇ ಸಾವಿರಾರು ರೂ ಖರ್ಚು ಮಾಡಿ ಹೊಸ ಮೊಬೈಲ್ ತೆಗೆದುಕೊಂಡು ಇಲ್ಲದ್ದರೆ ತಮ್ಮ ಮನೆಯವರನ್ನು ಬೇಡಿ ಅವರ ಮೊಬೈಲ್ ಪಡೆದು ದಿನಕ್ಕೆ ಕನಿಷ್ಟ ೨೦ ಕುಟುಂಬಗಳ ಮಾಹಿತಿಯನ್ನು ಒಂದು ಕುಟುಂಬದ ಮಾಹಿತಿ ಗಣಕೀಕರಣ ಮಾಡಲು ೧ ರಿಂದ ೨ಗಂಟೆಗಳೂ ಆಗುತ್ತದೆ, ಜನಗಳು ವಿರೋದ ಕೂಡ ಮಾಡುತ್ತಾರೆ ಆದರೂ ಗಣಕೀಕರಣ ಮಾಡಲೇಬೇಕು. ಆಪ್ ಬಳಸಲು ಬರದಿದ್ದರು ಮಾಡಲೇ ಬೇಕು ಟಾರ್ಗೆಟ್ ಕೊಡಲೇ ಬೇಕೆಂದು ಇನ್ನಲ್ಲದ ಒತ್ತಡ ಹೇರಲಾಗುತ್ತಿದೆ. ಇಷ್ಟೆಲ್ಲಾ ಮಾಡಿದರೆ ಈ ಸರ್ವೆಗೆ ಬರುವ ಗೌರವಧನ ಕೇವಲ ೫೦೦ರೂ. ನರೇಗಾದಲ್ಲಿ ಕೆಲಸ ಮಾಡಿದರು ದಿನಕ್ಕೆ ಸಿಗುವಷ್ಟು ಸಂಬಳವಿಲ್ಲ. ಈ ಸರ್ವೇಗಳನ್ನು ಆಶಾಕಾರ್ಯಕರ್ತೆಯರೇ ಯಾಕೆ ಮಾಡಬೇಕು ಆಶಾಗಳನ್ನು ತೆಗೆದುಕೊಂಡ ಉದ್ದೇಶ ಗಣಕೀಕರಣ ಸರ್ವೇಗಳನ್ನು ಮಾಡಿಸಲೇ ಎಂದು ಪ್ರಶ್ನೆ ಮಾಡಿದರು.
ಆಶಾಕಾರ್ಯಕರ್ತೆಯರ ಸಂಘಟ ಎಐಯುಟಿಯುಸಿಯ ಜಿಲ್ಲಾ ಅಧ್ಯಕ್ಷರಾದ ಎಸ್ಎನ್ ಸ್ವಮಿ ಮಾತನಾಡಿ: ಆಶಾ ಕಾರ್ಯಕರ್ತೆಯರಿಂದ ಸರ್ವೆಗಳನ್ನು ಮಾಡಿಕೊಳ್ಳಲು ಆರೋಗ್ಯ ಇಲಾಖೆಗಿರುವ ಆಸಕ್ತಿ ಅವರ ಸಮಸ್ಯೆಗಳನ್ನು ಬಗೆಹರಿಸಲು, ಅವರನ್ನು ಖಾಯಂ ಮಾಡಲು ಕನಿಷ್ಟ ವೇತನ ನೀಡಲು ಏಕಿಲ್ಲ. ಇನ್ನು ರಾಜ್ಯದಿಂದಲೇ ಯಾವುದೇ ಈ ಸರ್ವೇ ಆಶಾಕಾರ್ಯಕರ್ತೆಯರಿಂದ ಮಾಡಿಸಬಾರದೆಂದು ತನ್ನ ನಿಲುವಿಗೆ ವಿರೋಧವಾಗಿ ಗಣಕೀಕರಣ ಸಮೀಕ್ಷೆ ಮಾಡುವಂತೆ ಒತ್ತಾಯಿಸುತ್ತಿದೆ. ಕಫ ತರಲೇ ಬೇಕು ಎಂದು ಒತ್ತಾಯ ಹೇರಬಾರದು, ಆಶಾಕಾರ್ಯಕರ್ತೆಯರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದೂ ಸುತ್ತೋಲೆಗಳಿದ್ದರು ಪಿಎಚ್ಸಿ ಮಟ್ಟದಲ್ಲಿ ಕೆಲಸದಿಂದ ತೆಗೆಯುವುದಾಗಿ, ನೋಟಿಸ್ ನೀಡುವುದಾಗಿ, ಆಶಾ ಸಾಫ್ಟ್ ಎನಟ್ರಿ ಮಾಡುವುದಿಲ್ಲವೆಂಬ ಬೆದರಿಕೆಗಳು ಸರ್ವೇಸಾಮಾನ್ಯವಾಗಿದೆ ಈ ಎಲ್ಲಾ ಸಮಸ್ಯಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.
ನಮ್ಮ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ತಾಲೂಕು ವೈದ್ಯಾಧಿಕಾರಿಗಳು ತಮ್ಮ ವ್ಯಪ್ತಿಗೆ ಬರುವ ಸಮಸ್ಯಗಳನ್ನು ಈ ಕೂಡಲೇ ಬಗೆಹರಿಸುವಂತೆ ಸೂತ್ತೋಲೆ ಹೋರಡಿಸುವುದಾಗಿ ಜಿಲ್ಲೆ ಮತ್ತು ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳನ್ನು ಅವರ ಗಮನಕ್ಕ ತರುವುದಾಗಿ ತಿಳಿಸಿದರು.